ಬೀದಿಗುಡ್ಡೆ ಹಾಲು ಸೊಸೈಟಿ ಮಹಾಸಭೆ, ರೂ. 2.90 ಲಕ್ಷ ಲಾಭ

Advt_Headding_Middle
Advt_Headding_Middle

ಬೀದಿಗುಡ್ಡೆ ಹಾಲು ಉತ್ಪಾದಕರ ಸಹಕಾರಿ ಸಂಘದ ವಾರ್ಷಿಕ ಮಹಾಸಭೆಯು ಸೆ. 22 ರಂದು ಸಂಘದ ಅಧ್ಯಕ್ಷ ಲೋಕೇಶ್ವರ ಕಟ್ಟರವರ ಅಧ್ಯಕ್ಷತೆಯಲ್ಲಿ ಬೀದಿಗುಡ್ಡೆ ಸ.ಕಿ.ಪ್ರಾ ಶಾಲಾ ವಠಾರದಲ್ಲಿ ನಡೆಯಿತು.

ದ.ಕ. ಹಾಲು ಉತ್ಪಾದಕರ ಒಕ್ಕೂಟದ ವಿಸ್ತರಣಾ ಅಧಿಕಾರಿ ಹರೀಶ್ ಕುಮಾರ್ ಎಂ.ಎಸ್., ಸಹಾಯಕ ವ್ಯವಸ್ಥಾಪಕ ಡಾ. ಕೇಶವ ಸುಳ್ಳಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ದ.ಕ. ಹಾಲು ಉತ್ಪಾದಕರ ಒಕ್ಕೂಟದ ನಿರ್ದೇಶಕಿ ಶ್ರೀಮತಿ ರಮಾ ಗುಣಸಾಗರ ಕಟ್ಟ ಸ್ವಾಗತಿಸಿದರು. ವಾರ್ಷಿಕ ವರದಿ ವಾಚಿಸಿದ ಸಂಘದ ಕಾರ್ಯದರ್ಶಿ ಮಹಾಲಿಂಗ ಪ್ರಸಾದ್ ಜೆ. ಅರ್ಗುಡಿ ವರದಿ ಸಾಲಿನಲ್ಲಿ ಸಂಘವು 2.90 ಲಕ್ಷ ಲಾಭಗಳಿಸಿದ್ದು, ಉತ್ಪಾದಕರಿಗೆ ಪ್ರತೀ ಲೀಟರ್ ಗೆ 93 ಪೈಸೆ ಬೋನಸ್ ಹಾಗೂ 15% ಬೋನಸ್ ಘೋಷಿಸಿದರು.

ಸಂಘಕ್ಕೆ ಅತೀ ಹೆಚ್ವು ಹಾಲು ಹಾಕಿದವರಿಗೆ ಮತ್ತು 12 ತಿಂಗಳು ನಿರಂತರ ಹಾಲು ಹಾಕಿದ ಸದಸ್ಯರಿಗೆ ಬಹುಮಾನ ನೀಡಲಾಯಿತು. ಅಧ್ಯಕ್ಷ ಲೋಕೇಶ್ವರ ಕಟ್ಟರವರು ಮುಂದಿನ ದಿನಗಳಲ್ಲಿ ಸಂಘವು ಸ್ವಂತ ಕಟ್ಟಡವನ್ನು ನಿರ್ಮಾಣ ಮಾಡಲಿದ್ದು,‌ ಸರ್ವಸದಸ್ಯರು ಸಹಕರಿಸಬೇಕೆಂದು ವಿನಂತಿಸಿದರು. ಕಾರ್ಯದರ್ಶಿ ಮಹಾಲಿಂಗ ಪ್ರಸಾದ್ ಅರ್ಗುಡಿ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.