Breaking News

ಲೀಲಾಕುಮಾರಿ ತೊಡಿಕಾನರವರಿಗೆ ಕುವೆಂಪು ಕಾವ್ಯ ಪುರಸ್ಕಾರ

Advt_Headding_Middle
Advt_Headding_Middle

ರಾಜ್ಯಮಟ್ಟದ ಸಾಹಿತ್ಯಾತ್ಮಕ ಜಾನಪದ ಹಾಗೂ ಸಾಂಸ್ಕೃತಿಕ ಸಂಸ್ಥೆಯಾಗಿರುವ ಗ್ರಾಮಂತರ ಬುದ್ಧಿಜೀವಿಗಳ ಬಳಗ ನಡೆಸಿದ ರಾಜ್ಯಮಟ್ಟದ ಕವನ ಸ್ಪರ್ಧೆಯಲ್ಲಿ ಲೀಲಾಕುಮಾರಿ ತೊಡಿಕಾನರ ಕವನವು ಅತ್ಯುತ್ತಮ ಕವನವೆಂದು ಆಯ್ಕೆಯಾಗಿ ಕುವೆಂಪು ಕಾವ್ಯ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ. ಇವರಿಗೆ ಸೆ.೩೦ರಂದು ಮೈಸೂರಿನಲ್ಲಿ ನಡೆದ ವಿಶ್ವಕವಿ ಕುವೆಂಪು ರಾಜ್ಯಮಟ್ಟದ ಸಾಹಿತೋತ್ಸವದಲ್ಲಿ “ಕುವೆಂಪು ಕಾವ್ಯ ಪುರಸ್ಕಾರ’ವನ್ನು ನೀಡಿ ಸನ್ಮಾನಿಸಲಾಯಿತು. ನಂತರ ನಡೆದ ಕವಿಗೋಷ್ಠಿಯಲ್ಲಿ ಭಾಗವಹಿಸಿ ಕುವೆಂಪು ಕಾವ್ಯ ಪುರಸ್ಕಾರ ವಿಜೇತ ಕವನವನ್ನು ವಾಚಿಸಿದರು. ರಾಜ್ಯಮಟ್ಟದ ಆಯ್ದ ಕವಿಗಳ ಕವನ ಪುಸ್ತಕದಲ್ಲಿ ಇವರ ಕವನವನ್ನು ಪ್ರಕಟಿಸಲಾಗಿದೆ. ಇವರು ಮೂಲತಃ ದಕ್ಷಿಣ ಕನ್ನಡದ ಸುಳ್ಯದವರಾಗಿರುವ ಲೀಲಾಕುಮಾರಿ ತೋಡಿಕಾನದವರು. ಪ್ರಸ್ತುತ ಕೊಡಗಿನ ಕುಶಾಲನಗರದಲ್ಲಿರುವ ಅನುಗ್ರಹ ಪದವಿಪೂರ್ವ ಮತ್ತು ಪದವಿ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.