Breaking News

ವಿಜಯ ಗ್ರಾಮಾಭಿವೃದ್ಧಿ ಜಾಲ್ಸೂರು ಸಮಿತಿಯ ನೂತನ ಅಧ್ಯಕ್ಷರಾಗಿ ಯಶ್ವಿತ್ ಕಾಳಂಮನೆ ಹಾಗೂ ಕಾರ್ಯದರ್ಶಿಯಾಗಿ ತಿರುಮಲೇಶ್ವರಿ ಅಡ್ಕಾರು

Advt_Headding_Middle
Advt_Headding_Middle

 

ವಿಜಯ ಬ್ಯಾಂಕ್ ಪ್ರವರ್ತಿತ ವಿಜಯ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನ ಮಂಗಳೂರು ಇದರಿಂದ ಜಾಲ್ಸೂರಿನಲ್ಲಿ ನೂತನವಾಗಿ ರಚಿಸಲು ಉದ್ದೇಶಿಸಿರುವ ವಿಜಯ ಗ್ರಾಮಾಭಿವೃದ್ಧಿ ಸಮಿತಿ ಜಾಲ್ಸೂರು ಇದರ ನೂತನ ಅಧ್ಯಕ್ಷರಾಗಿ ಯಶ್ವಿತ್ ಕಾಳಂಮನೆ ಹಾಗೂ ಕಾರ್ಯದರ್ಶಿಯಾಗಿ ತಿರುಮಲೇಶ್ವರಿ ಅಡ್ಕಾರು ಆಯ್ಕೆಯಾಗಿದ್ದಾರೆ. ಅಕ್ಟೋಬರ್ ೩ ರಂದು ಜಾಲ್ಸೂರಿನಲ್ಲಿ ನಡೆದ ಸದಸ್ಯರ ಪ್ರಥಮ ಸಭೆಯಲ್ಲಿ ಈ ಆಯ್ಕೆ ಮಾಡಲಾಯಿತು. ವಿಜಯ ಗ್ರಾಮಾಭಿವೃದ್ಧಿ ನಾಲ್ಕೂರು ಸಮಿತಿಯ ಕಾರ್ಯದರ್ಶಿ ದಿನೇಶ್ ಹಾಲೆಮಜಲು ಹಾಗೂ ಸಂಪನ್ಮೂಲ ವ್ಯಕ್ತಿ ಅಶೋಕ್ ಎಡಮಲೆಯವರು ಸಭೆಯಲ್ಲಿ ಭಾಗವಹಿಸಿ ವಿಜಯ ಗ್ರಾಮಾಭಿವೃದ್ಧಿಯ ಬಗ್ಗೆ ಮಾಹಿತಿ ನೀಡಿದರು.

 

ಜಾಲ್ಸೂರು ಸಮಿತಿಯ ಸದಸ್ಯರುಗಳಾದ ಭುವನೇಂದ್ರ ಬೊಳುಬೈಲು, ರೇವತಿ ಕೆ.ಆರ್ , ಇಳಾಶ್ರಿ ಯಶ್ವಿತ್ , ಶಶಿಕಲಾ ಎ, ರೋಹಿಣಿ ಎ.ಡಿ , ಪ್ರೇಮಾ ಅಡ್ಕಾರು , ವಿಜಯ ಕಾಳಂಮನೆ, ರಶ್ಮಿ ಕಾಳಂಮನೆ, ಕರುಣಾಕರ ರೈ ಉಪಸ್ಥಿತರಿದ್ದು ಸೂಕ್ತ ಸಲಹೆ ಸೂಚನೆಗಳನ್ನು ನೀಡಿದರು. ಅಕ್ಟೋಬರ್ ೧೧ ಗುರುವಾರದಂದು ಜಾಲ್ಸೂರು ಗ್ರಾಪಂ ಸಭಾಭವನದಲ್ಲಿ ಜಾಲ್ಸೂರು ಸಮಿತಿಯ ಉದ್ಘಾಟನೆ ಹಾಗೂ ಮಂಗಳೂರಿನ ಪ್ರಸಿದ್ಧ ತಾರಸಿ ಕೃಷಿ ಡಾ. ಕೃಷ್ಣಪ್ಪ ಗೌಡ ಪಡ್ಡಂಬೈಲುರವರಿಂದ ತಾರಸಿ ಕೃಷಿಯ ಹಾಗೂ ಕೈತೋಟ ರಚನೆಯ ಬಗ್ಗೆ ಮಾಹಿತಿ ಕಾರ್ಯಕ್ರಮ ನಡೆಸುವುದೆಂದು ತೀರ್ಮಾನಿಸಲಾಯಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.