ರಾಜ್ಯ ಸರಕಾರದ ತಲೆಬುಡವಿಲ್ಲದ ಸಾಲಮನ್ನಾ ಯೋಜನೆಯ ನಿಬಂಧನೆಗಳಿಂದ ಕೃಷಿಕರು ಎಲ್ಲಾ ಕೆಲಸ ಬಿಟ್ಟು ಸಹಕಾರಿ ಸಂಘಗಳ ಕಚೇರಿ ಮುಂದೆ ಮುಗಿ ಬೀಳುವ ಸ್ಥಿತಿ ನಿರ್ಮಾಣವಾಗಿದೆ – ವೆಂಕಟ್ ದಂಬೆಕೋಡಿ

Advt_Headding_Middle
Advt_Headding_Middle

ಕೃಷಿಕರ ಸಾಲಮನ್ನಾ ಗೊಂದಲ ಸರಕಾರದ ವಿರುದ್ಧ ಬಿಜೆಪಿ ಗರಂ

ರಾಜ್ಯ ಸರಕಾರದ ತಲೆಬುಡವಿಲ್ಲದ ಕೃಷಿಕರ ಸಾಲಮನ್ನಾ ಯೋಜನೆಯ ನಿಬಂಧನೆಗಳಿಂದ ಕೃಷಿಕರು ತನ್ನೆಲ್ಲ ಕೆಲಸ ಕಾರ‍್ಯಗಳನ್ನು ಬಿಟ್ಟು ಸಹಕಾರಿ ಸಂಘಗಳ ಕಚೇರಿ ಮುಂದೆ ಮುಗಿ ಬೀಳುವ ಸ್ಥಿತಿ ನಿರ್ಮಾಣವಾಗಿದೆ ಎಂದು ಸುಳ್ಯ ಬಿಜೆಪಿ ಮಂಡಲ ವಕ್ತಾರ ವೆಂಕಟ್ ದಂಬೆಕೋಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.


 ಸುಬ್ರಹ್ಮಣ್ಯದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಬಿಜೆಪಿ ಮಂಡಲ ಸಮಿತಿ ವಕ್ತಾರ ವೆಣಕಟ್ ದಂಬೆಕೋಡಿ ಮಾತನಾಡಿ ಮುಖ್ಯ ಮಂತ್ರಿಗಳು ಸಾಲ ಮನ್ನಾ ಯೋಜನೆ ಘೋಷಣೆ ಮಾಡುವಾಗ ಆರಂಭದಲ್ಲಿ ರೈತರ ಸಂಪೂರ್ಣ ಸಾಲ ಮನ್ನಾ ಎಂದಿದ್ದರು. ಬಳಿಕ ಸುಸ್ಥಿದಾರರ ಎರಡು ಲಕ್ಷ ಮನ್ನಾ, ಬಾಕಿ ಉಳಿದ ಕೃಷಿಕರದು ಒಂದು ಲಕ್ಷ ರೂ ಮನ್ನಾ ಎನ್ನುವ ನಿಬಂಧನೆ ಹಾಕಿದ್ದರು. ಸಾಲಮನ್ನಾ ಯೋಜನೆ ಜಾರಿಗೆ ತಂದಾಗ ಸಹಕಾರಿ ಸಂWಗಳ ಇನ್ನಿತರ ಸಂಘಸಂಸ್ಥೆಗಳಲ್ಲಿ ಠೇವಣೆ ಇರಿಸಿದವರಿಗೆ ಸಾಲಮನ್ನಾ ಇಲ್ಲ. ಒಂದು ಕುಟುಂಬಕ್ಕೆ ಸೀಮಿತವಾಗಿ ಸಾಲ ಮನ್ನಾ ಮಾಡುತ್ತೇವೆ. ಕುಟುಂಬಕ್ಕೆ ಒಬ್ಬರಿಗೆ ಮಾತ್ರ ಅವಕಾಶ ನೀಡಿ ಸಾಲಮನ್ನಾ ಯೋಜನೆ ಜಾರಿಗೆ ಮುಂದಾಗಿದ್ದರು. ಇದಕ್ಕೆ ತೀವೃ ವಿರೋಧಗಳು ಬಂದಾಗ ಠೇವಣಿ ಯಾರು ಇಟ್ಟಿದ್ದಾರೆ ಅಂತವರಿಗೆ ಸಾಲ ಮನ್ನಾ ಆಗುತ್ತದೆ ಎನ್ನುವ ಮತ್ತೊಂದು ಸುತ್ತೋಲೆಯನ್ನು ಹೊರಡಿಸಿದರು. ಹೀಗೆ ಸಾಲಮನ್ನಾ ವಿಚಾರದಲ್ಲಿ ನಾಲ್ಕೈದು ಸುತ್ತೋಲೆಗಳನ್ನು ಹೊರಡಿಸಿ ಕೃಷಿಕರಲ್ಲಿ ಗೊಂದಲ ಮೂಡಿಸುತ್ತಿದ್ದಾರೆ. ರೈತರ ಸಾಲ ಮನ್ನಾ ಮಾಡಬೇಕು ಎನ್ನುವ ಉದ್ದೇಶ ಸರಕಾರಕ್ಕಿಲ್ಲ. ಕೇವಲ ಪ್ರಚಾರಕ್ಕಾಗಿ ಸಾಲ ಮನ್ನಾ ಯೋಜನೆ ಜಾರಿಗೆ ಅದು ಹೊರಟಿದೆ ಎಂದವರು ದೂರಿದರು.

ಕೃಷಿಕರ ಸಾಲ ಮನ್ನಾಕ್ಕಾಗಿ ದಿನಕ್ಕೊಂದು ಹೇಳಿಕೆ, ಹಲವು ಭಾರಿ ಸುತ್ತೊಲೆ, ಹತ್ತಾರು ದಾಖಲೆ ಕೇಳುವ ಮೂಲಕ ಕೃಷಿಕರಲ್ಲಿ ದೊಂದಲ ಸೃಷ್ಟಿಸಿ ರೈತರನ್ನು ಸಂಕಷ್ಟಕ್ಕೆ ದೂಡುವ ಕೆಲಸವನ್ನು ರಾಜ್ಯ ಸರಕಾರ ಮಾಡುತ್ತಿದೆ. ಸಾಲ ಮನ್ನಾ ಯೋಜನೆ ಕೇವಲ ಪ್ರಚಾರಕಷ್ಟೆ ಸೀಮಿತವಾಗಿದೆ ಎಂದವರು ಹೇಳಿದರು
ಯಡಿಯೂರಪ್ಪ ಹಾಗೂ ಸಿದ್ಧರಾಮಯ್ಯ ಮುಖ್ಯಮಂತ್ರಿಗಳಿದ್ದಾಗ ಯಾವುದೇ ದಾಖಲೆ ಕೇಳದೆ ರೈತರ ಸಾಲ ನೇರಾ ಮನ್ನಾ ಮಾಡಿದ್ದರು. ಸರಿಯಾದ ದಾಖಲೆಗಳನ್ನು ನೀಡಿಯೇ ಕ್ರಷಿಕ ಸಾಲ ಪಡೆದಿರುವಾಗ ಮನ್ನಾದ ಪ್ರಯೋಜನ ಪಡೆಯಲು ದಾಖಲೆ ಕೇಳುವುದರಲ್ಲಿ ಅರ್ಥವಿಲ್ಲ. ಎಂದು ವೆಂಕಟ್ ಹೇಳಿದರು.
ಟ್ಯಾಕ್ಸಿ, ವಾಹನ ಇನಸ್ಯೂರೆನ್ಸ್ ಹೆಚ್ಚಳ ಮಾಡಿ ಜನಧನ ಮಹತ್ವಾಕಾಂಕ್ಷೆಯ ಯೋಜನೆಗಳನ್ನು ರದ್ದು ಮಾಡಿ ಸಾಲಮನ್ನಾ ಹೆಸರಿನಲ್ಲಿ ಖಜಾನೆ ತುಂಬಿಸಿ ಜನತೆಗೆ ಸರಕಾರ ಮೋಸ ಮಾಡುತ್ತಿದೆ. ಸಾಲ ಮನ್ನಾ ವಿಚಾರದಲ್ಲಿ ಸರಕಾರವೇ ಗೊಂದಲ ಸೃಷ್ಟಿಸುತ್ತಿದೆ. ಸಹಕಾರಿ ಸಚಿವರೇ ಒಂದು ಕಡೆ ಯಾವ ದಾಖಲೆಯು ಸಾಲ ಮನ್ನಾ ಪ್ರಯೋಜನ ಪಡೆಯಲು ಬೇಡ ಎನ್ನುತ್ತಿದ್ದಾರೆ ಇನ್ನೊಂದು ಕಡೆ ದಾಖಲೆ ಕೇಳುತ್ತಿದೆ, ಯೋಜನೆಗೆ ದಾಖಲೆ ನೀಡಲು ಸಾಕಷ್ಟು ಅವಧಿ ನೀಡಬೇಕು ಮತ್ತು ಸರಳೀಕೃತಗೊಳೀಸಬೇಕು ಎಂದು ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ವೆಂಕಟ್ ವಳಲಂಬೆ, ಅಚ್ಚುತ ಗೌಡ, ಚಿದಾನಂದ ಕಂದಡ್ಕ, ದಿನೇಶ್ ಸಂಪ್ಯಾಡಿ, ಸುಬ್ರಹ್ಮಣ್ಯ ಭಟ್, ಜಯರಾಮ ಎಚ್ ಎಲ್, ಸವಿತಾ ಭಟ್ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.