ಗಾಂಧಿ ಜಯಂತಿ ಆಚರಣೆ ಮತ್ತು ಸಹಾಯ ಧನ ವಿತರಣೆ

Advt_Headding_Middle
Advt_Headding_Middle

ನವಚೇತನ ಯುವಕಮಂಡಲ(ರಿ)ಬೊಳುಬೈಲು ಇದರ ವತಿಯಿಂದ ರಾಷ್ಟ್ರಪಿತ ಮಹಾತ್ಮಾ ಗಾಂಧಿಜಿಯವರ ಜನ್ಮದಿನವನ್ನು ಯುವಕಮಂಡಲದ ಸಭಾಂಗಣದಲ್ಲಿ ಆಚರಿಸಲಾಯಿತು.


ವೇದಿಕೆಯಲ್ಲಿ ಯುವಕ ಮಂಡಲದ ಪೂರ್ವಧ್ಯಕ್ಷರಾದ  ವಿಶ್ವನಾಥ ನಾಯ್ಕ ಅರ್ಭಡ್ಕ, ಅಧ್ಯಕ್ಷರಾದ  ಭುವನೇಂದ್ರ ಬೊಳುಬೈಲು, ಕಾರ್ಯದರ್ಶಿ  ಪ್ರಸಾದ್ ಕಾಟೂರು ಉಪಸ್ಥಿತರಿದ್ದರು. ಸ್ವಾಗತ ಮತ್ತು ಪ್ರಸ್ತಾವಿಕ ನುಡಿಗಳನ್ನು  ಪ್ರವೀಣ್ ಕಾಟೂರು ನೆರೆವೆರಿಸಿದರು. ಚಿತ್ತರಂಜನ್ ಕಾಟೂರು ವಂದಿಸಿದರು. ಗಣೇಶ್ ಕಾಟೂರು ಕಾರ್ಯಕ್ರಮ ನಿರೂಪಿಸಿದರು.


ಪಿಲಿಕೊಡಿ ನಿವಾಸಿ ಶ್ರೀಮತಿ ಹೇಮಲತಾ ರೈ ಇವರು ಅಲ್ಪಕಾಲದಿಂದ ನರ ಸಂಬಂಧಿಸಿದ ಸಮಸ್ಯೆಯಿಂದ ಬಳಲುತ್ತಿದ್ದರು. ಕುಟುಂಬದ ಆಧಾರ ಸ್ಥಂಬವಾಗಿದ್ದ ಇವರ ಚಿಕಿತ್ಸೆಗೆ ಯುವಕ ಮಂಡಲದ ಸದಸ್ಯರಿಂದ ಸಂಗ್ರಹಿಸಿದ ಹಣವನ್ನು ಅವರ ಮನೆಗೆ ತೆರಳಿ ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ಸಂಸ್ಥೆಯ ಪೂರ್ವಧ್ಯಕ್ಷರುಗಳು,ಸದಸ್ಯರುಗಳು,ಪದಾಧಿಕಾರಿಗಳು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.