ಗಾಂಧಿನಗರ ಶಾಲೆಯಲ್ಲಿ ಗಾಂಧಿಜಯಂತಿ ಆಚರಣೆ

Advt_Headding_Middle
Advt_Headding_Middle

ಸ.ಮಾ.ಹಿ.ಪ್ರಾ.ಶಾಲೆ ಗಾಂಧಿನಗರದಲ್ಲಿ ಅ. ೨ರಂದು ಗಾಂಧಿ ಜಯಂತಿಯನ್ನು ಆಚರಿಸಲಾಯಿತು. ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಶಿವಕುಮಾರ್ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು. ಗಾಂಧೀಜಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ದೀಪ ಬೆಳಗಿಸಿ ಶುಭ ಹಾರೈಸಿದರು.

 

ಎಸ್‌ಡಿಎಂಸಿ ಉಪಾಧ್ಯಕ್ಷರಾದ ಫೌಝಿಯಾ, ಸದಸ್ಯರಾದ ಅಬ್ದುಲ್ ಅಜೀಝ್, ಮಮತಾ, ಮುಖ್ಯ ಶಿಕ್ಷಕ ಸೇರ ಕೋಟಿಯಪ್ಪ ಪೂಜಾರಿ ಉಪಸ್ಥಿತರಿದ್ದರು. ಮಹಾತ್ಮಾಗಾಂಧಿ ಕುರಿತು ಪುತ್ತೂರು ವಿವೇಕಾನಂದ ಕಾಲೇಜಿನ ವಿದ್ಯಾರ್ಥಿ ಶ್ರೀಕಾಂತ್ ಪೂಜಾರಿ ಮಾತನಾಡಿದರು. ಹಿರಿಯ ಶಿಕ್ಷಕಿ ದಮಯಂತಿ ಸ್ವಾಗತಿಸಿ, ಶಿಕ್ಷಕಿ ರಾಜೇಶ್ವರಿ ಎಂ.ಪಿ. ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕಿ ಪುಷ್ಪಾವತಿ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.