Breaking News

ತಾಲೂಕು ಮಟ್ಟದ ಕ್ರೀಡಾಕೂಟ: ಬಾಳಿಲ ವಿದ್ಯಾಬೋಧಿನೀ ಪ್ರೌಢಶಾಲೆಗೆ ಸಮಗ್ರ ಪ್ರಶಸ್ತಿ

Advt_Headding_Middle
Advt_Headding_Middle

 

ಅಕ್ಟೋಬರ್ ೦೧ ಮತ್ತು೦೨ ರಂದು ಶ್ರೀ ಭಗವಾನ್ ಸತ್ಯಸಾಯಿ ವಿದ್ಯಾಸಂಸ್ಥೆಯಲ್ಲಿ ಇಲಾಖಾ ವತಿಯಿಂದ ನಡೆದ ಸುಳ್ಯ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ವಿದ್ಯಾಬೋಧಿನೀ ಪ್ರೌಢಶಾಲೆ ಬಾಳಿಲ ತಂಡ ಸಮಗ್ರ ಪ್ರಶಸ್ತಿ ಪಡೆದುಕೊಂಡಿದೆ.


೧೪ರ ವಯೋಮಿತಿಯ ಬಾಲಕಿಯರ ’ತಂಡ ಪ್ರಶಸ್ತಿ’, ೧೭ರ ವಯೋಮಿತಿಯ ಬಾಲಕಿಯರ ’ತಂಡ ಪ್ರಶಸ್ತಿ’, ೧೭ರ ವಯೋಮಿತಿಯ ಬಾಲಕರ ’ತಂಡ ಪ್ರಶಸ್ತಿ’ ಮತ್ತು ೧೭ರ ವಯೋಮಿತಿಯ ಬಾಲಕ/ಬಾಲಕಿಯರ ’ಸಮಗ್ರ ಪ್ರಶಸ್ತಿ’ಯೊಂದಿಗೆ ೧೮ ಕ್ರೀಡಾಪಟುಗಳು ಎಸ್.ಡಿ.ಎಂ ಪ್ರೌಢಶಾಲೆ ಉಜಿರೆಯಲ್ಲಿ ನಡೆಯುವ ಜಿಲ್ಲಾಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿರುತ್ತಾರೆ. ಮೇಘನಾ ಬಾರದ್ವಾಜ್.ಜೆ ೧೭ರ ವಯೋಮಿತಿಯ ಬಾಲಕಿಯರ ವೈಯಕ್ತಿಕ ಚಾಂಪಿಯನ್ ಪ್ರಶಸ್ತಿಯನ್ನು ಪಡೆದುಕೊಂಡಿರುತ್ತಾರೆ.

ಬಹುಮಾನಿತರ ವಿವರ :

ಕೌಶಿಕ್ ಎ ೮ಎ ೨೦೦ಮೀ (ತೃ.), ನಿಶಿತ್ ಎಂ ೮ಎ ೪೦೦ಮೀ (ದ್ವಿ), ಸ್ವಸ್ತಿಕ್ ಕೆ ೮ಸಿ ಎತ್ತರಜಿಗಿತ (ದ್ವಿ), ವಿರೂಪಾಕ್ಷ ಬಿ ೯ಎ ೪x೧೦೦ರಿಲೇ(ಪ್ರ),೧೦೦ಮೀ(ದ್ವಿ),೨೦೦ಮೀ(ಪ್ರ) ಉದ್ದಜಿಗಿತ(ದ್ವಿ), ಕಾರ್ತಿಕ್ ವಿ ೯ಎ ೪x೧೦೦ರಿಲೇ(ಪ್ರ), ಸುತ್ತಿಗೆ ಎಸೆತ(ದ್ವಿ), ಕಾರ್ತಿಕ್ ಪಿ ರೈ ೯ಎ ೧೫೦೦ಮೀ(ದ್ವಿ), ೩೦೦೦ಮೀ(ಪ್ರ), ಪ್ರವೀಣ ಡಿ ೧೦ಎ ೪x೧೦೦ರಿಲೇ(ಪ್ರ), ಮಹಮ್ಮದ್ ತಮೀಮ್ ೧೦ಬಿ ೪x೧೦೦ರಿಲೇ(ಪ್ರ), ವಿಜಯಲಕ್ಷ್ಮಿ ಡಿ ೮ಬಿ
೪ x೧೦೦ರಿಲೇ(ಪ್ರ), ಜೀವಿತಾ ಕೆ ೮ಸಿ ೪x೧೦೦ರಿಲೇ(ಪ್ರ), ೬೦೦ಮೀ(ಪ್ರ), ತನುಶ್ರೀ ಪಿ ೮ಸಿ ೪x೧೦೦ರಿಲೇ(ಪ್ರ), ಅನುಶ್ರೀ ಕೆ ೮ಸಿ ೪x೧೦೦ರಿಲೇ(ಪ್ರ), ೧೦೦ಮೀ(ಪ್ರ), ೨೦೦ಮೀ(ತೃ) ಉದ್ದಜಿಗಿತ (ತೃ), ಭವ್ಯಶ್ರೀ ಎಂ ೯ಎ ೪x೧೦೦ರಿಲೇ(ಪ್ರ), ದೀಪಿಕಾ ಪಿ ಎಸ್ ೯ಎ ಎತ್ತರ ಜಿಗಿತ (ತೃ), ಲಿಖಿತಕುಮಾರಿ ಎಂ ೯ಎ ತ್ರಿವಿಧ ಜಿಗಿತ (ತೃ), ಕಾವ್ಯ ಡಿ ೯ಬಿ೪ x೧೦೦ರಿಲೇ(ಪ್ರ), ಸ್ವಸ್ತಿಕಾ ಎಂ ಸಿ ೯ಬಿ ೪x೧೦೦ರಿಲೇ(ಪ್ರ), ಸಿಂಚನಾ ೯ಬಿ ಈಟಿ ಎಸೆತ(ಪ್ರ),೧೦೦ಮೀಅಡೆತಡೆ(ದ್ವಿ), ಮೇಘನಾಬಾರಧ್ವಾಜ್ ಜೆ ೧೦ಎ ೪x೧೦೦ರಿಲೇ(ಪ್ರ), ೨೦೦ಮೀ,೪೦೦ಮೀ,೧೦೦ಮೀಅಡೆತಡೆ(ಪ್ರ), ವನಿತಾ ಪಿ೧೦ಎ ೮೦೦ಮೀ(ದ್ವಿ), ಶ್ರುತಿ ಕೆ ೧೦ಎ ಕೋಲುನೆಗೆತ(ದ್ವಿ) ಸ್ಥಾನ ಪಡೆದುಕೊಂಡಿರುತ್ತಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.