ಸುಳ್ಯ ಅನ್ಸಾರಿಯಾ ಯತೀಂಖಾನಕ್ಕೆ ಸಚಿವ ಝಮೀರ್ ಭೇಟಿ

Advt_Headding_Middle
Advt_Headding_Middle

ಧಾರ್ಮಿಕ ಶಿಕ್ಷಣ ಪಡೆದ ಸಮಾಜ ದೇಶದ ಅಭಿವೃದ್ಧಿಗೆ ಪೂರಕ

 

ಎಲ್ಲಾ ಧರ್ಮಗಳು ಶಾಂತಿ ಸೌಹಾರ್ಧತೆಯನ್ನು ಬೋಧಿಸುತ್ತದೆ. ಧಾರ್ಮಿಕ ಕ್ಷೇತ್ರಗಳು, ಸರ್ವಧರ್ಮ ಸಾಮರಸ್ಯ ಕೇಂದ್ರವಾಗಿ ಬೆಳೆಯಬೇಕು. ಧಾರ್ಮಿಕ ಶಿಕ್ಷಣ ಪಡೆದಾಗ ಆ ಸಮಾಜವು ಸುಸಂಸ್ಕೃತವಾಗಿ ದೇಶದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಲು ಸಾಧ್ಯವಾಗುತ್ತದೆ. ಮದರಸ ಶಿಕ್ಷಣವನ್ನು ಸಬಲೀಕರಣಗೊಳಿಸಲು ಧಾರ್ಮಿಕ ಶಿಕ್ಷಣದೊಂದಿಗೆ ಆಧುನಿಕ ವ್ಯವಸ್ಥೆಯಡಿ ಕಂಪ್ಯೂಟರ್ ಲೈಬ್ರರಿ, ಮೊದಲಾದ ಸೌಲಭ್ಯಗಳನ್ನು ಕಲ್ಪಿಸಲು ರಾಜ್ಯ ಸರಕಾರದ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಮದರಸ ಆಧುನೀಕರಣ ಯೋಜನೆ ಜಾರಿಗೆ ತಂದಿದ್ದು, ಪ್ರತೀ ಮದರಸಕ್ಕೆ ರೂ. ೧೦ ಲಕ್ಷ ಅನುದಾನ ನೀಡಲಾಗುವುದು ಎಂದು ಕರ್ನಾಟಕ ಸರಕಾರದ ಆಹಾರ ಮತ್ತು ನಾಗರಿಕ ಸರಬರಾಜು, ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಸಚಿವ ಝಮೀರ್ ಅಹಮದ್ ಖಾನ್ ಹೇಳಿದರು.


ಸುಳ್ಯ ಅನ್ಸಾರಿಯಾ ಅನಾಥಾಶ್ರಮಕ್ಕೆ ಭೇಟಿ ನೀಡಿ ವಿದ್ಯಾರ್ಥಿಗಳನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು. ಸಮಾರಂಭದ ಅಧ್ಯಕ್ಷತೆಯನ್ನು ಜಿಲ್ಲಾ ವಕ್ಫ್ ಸಮಿತಿ ಅಧ್ಯಕ್ಷ ಕಣಚೂರ್ ಮೋನ್ ಹಾಜಿ ವಹಿಸಿದ್ದರು. ಅನ್ಸಾರಿಯಾ ಯತೀಂಖಾನ ಅಧ್ಯಕ್ಷ ಅಬ್ದುಲ್ ಮಜೀದ್ ಜನತ, ಕೋಶಾಧಿಕಾರಿ ಆದಂ ಹಾಜಿ ಕಮ್ಮಾಡಿ, ರಾಜ್ಯ ವಕ್ಫ್ ಕೌನ್ಸಿಲ್ ಮಾಜಿ ಸದಸ್ಯರುಗಳಾದ ಟಿ.ಎಂ. ಶಹೀದ್, ಎಸ್. ಸಂಶುದ್ದೀನ್, ಕೆಪೆಕ್ ಮಾಜಿ ನಿರ್ದೇಶಕ ಪಿ.ಎ. ಮಹಮ್ಮದ್, ಜಿಲ್ಲಾ ವಕ್ಫ್ ಸದಸ್ಯರುಗಳಾದ ಕೆ.ಎಂ. ಮುಸ್ತಫ, ನೂರುದ್ದೀನ್ ಸಾಲ್ಮರ, ಸುಲೈಮಾನ್ ಆಸೈಗೋಳಿ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಸಚಿವರಿಗೆ ಮನವಿ ಸಲ್ಲಿಸಲಾಗಿದ್ದು ಅನಾಥಾಲಯಕ್ಕೆ ರೂ ೧೦ ಲಕ್ಷ ಅನುದಾನ ಬಿಡುಗಡೆಗೊಳಿಸುವಂತೆ ಸ್ಥಳದಲ್ಲೇ ಆದೇಶ ನೀಡಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.