ಬಡ್ಡಡ್ಕ : ವಿದ್ಯಾರ್ಥಿ ಮೋಕ್ಷಿತ್ ಆಡಿಂಜ ನಾಪತ್ತೆ

Advt_Headding_Middle
Advt_Headding_Middle

ಆಲೆಟ್ಟಿ ಗ್ರಾಮದ ಬಡ್ಡಡ್ಕ ಆಡಿಂಜದ ನಿವಾಸಿ ಸೀತಾರಾಮ ಎಂಬವರ ಪುತ್ರ ಮೋಕ್ಷಿತ್ (15) ಎಂಬ ವಿದ್ಯಾರ್ಥಿ ಅ.1 ರಿಂದ ನಾಪತ್ತೆಯಾಗಿರುವುದಾಗಿ ತಿಳಿದುಬಂದಿದೆ.


ಬೆಳ್ಳಾರೆಯ ಜ್ಞಾನದೀಪ ಶಿಕ್ಷಣ ಸಂಸ್ಥೆಯ ಹತ್ತನೇ ತರಗತಿಯ ಕೋಚಿಂಗ್ ತರಗತಿಯ ವಿದ್ಯಾರ್ಥಿಯಾಗಿದ್ದು ಎಂದಿನಂತೆ ಬೆಳಗ್ಗೆ ಮನೆಯಿಂದ ಹೊರಟು ಶಾಲೆಗೆ ಹೋದವನು ಸಂಜೆಯಾದರೂ ಮನೆಗೆ ಬಾರದೇ ಇದ್ದುದನ್ನು ಕಂಡು ಗಾಬರಿಗೋಳಗಾದ ಪೋಷಕರು ಈ ಬಗ್ಗೆ ಸ್ಥಳೀಯರಲ್ಲಿ ವಿಷಯ ತಿಳಿಸಿದರು. ಬಳಿಕ ಅಲ್ಲಿನ ಪರಿಸರದ ಮನೆಗಳಲ್ಲಿ ನೆರೆಕರೆಯವರಲ್ಲಿ ಹಾಗೂ ಸಂಬಂಧಿಕರ ಮನೆಯವರಲ್ಲಿ ವಿಚಾರಿಸಿದರು.ನಂತರ ಶಾಲೆಗೆ ಹೋಗಿ ಅದ್ಯಾಪಕರಲ್ಲಿ ವಿಷಯವನ್ನು ತಿಳಿಸಿದರು. ನಾಪತ್ತೆಯಾದ ದಿವಸ ಶಾಲೆಗೆ ಬರಲಿಲ್ಲ ಎಂದು ಶಿಕ್ಷಕರು ತಿಳಿಸಿದರು. ಬಳಿಕ ಅವನ ಆತ್ಮೀಯ ಮಿತ್ರರಲ್ಲಿಗೆ ಹೋಗಿ ವಿಚಾರಿಸಲಾಗಿದೆ. ಅಲ್ಲಿ ಎಲ್ಲಿಗೂ ಬಾರದೇ ಯಾವುದೇ ಸುಳಿವು ಸಿಗದಿದ್ದಾಗ ಸುಳ್ಯ ಪೋಲೀಸ್ ಠಾಣೆಗೆ ದೂರು ನೀಡಿದರು. ಪೋಲೀಸರು ದೂರು ದಾಖಲಿಸಿಕೊಂಡಿದ್ದು ಪತ್ತೆಗಾಗಿ ತನಿಖೆ ನಡೆಸುತ್ತಿದ್ದಾರೆ.
ಅ.೧ ರ ಬೆಳಗ್ಗೆ ಶಾಲಾ ಸಮವಸ್ತ್ರ ಧರಿಸಿ ಬಂದಿದ್ದು ಬಳಿಕ ಸುಳ್ಯದಲ್ಲಿ ಬದಲಾಯಿಸಿ ಟೀ ಶರ್ಟ್ ಹಾಕಿಕೊಂಡು ಬಸ್ ನಿಲ್ದಾಣದಲ್ಲಿ ಕುಳಿತುಕೊಂಡಿರುವುದಾಗಿ ಆತನ ಪರಿಚಿತರು ಮನೆಯವರಲ್ಲಿ ತಿಳಿಸಿರುತ್ತಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.