ಧ.ಗ್ರಾ.ಯೋಜನೆಯ ವತಿಯಿಂದ ಸುಳ್ಯದ ಅಟೋ ಸುಬ್ಬಣ್ಣ ರಿಗೆ “ಜಾಗೃತಿ ಅಣ್ಣ” ಮತ್ತು ರವಿರಾಜ್ ರಿಗೆ “ಜಾಗೃತಿ ಮಿತ್ರ” ಪ್ರಶಸ್ತಿ ಪ್ರಧಾನ

Advt_Headding_Middle
Advt_Headding_Middle

ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ವತಿಯಿಂದ ಅ.೨ ರಂದು ಗಾಂಧಿ ಜಯಂತಿ ಆಚರಣೆಯಂದು ಬೆಳ್ತಂಗಡಿಯ ಗುರುವಾಯನಕೆರೆ ಯಲ್ಲಿ ನಡೆದ ಗಾಂಧಿ ಸ್ಮೃತಿ ಮತ್ತು ವ್ಯಸನಮುಕ್ತ ಸಾಧಕರ ಸಮಾವೇಶದಲ್ಲಿ ಸುಳ್ಯದ ಇಬ್ಬರಿಗೆ ಸಾಧನಾ ಪ್ರಶಸ್ತಿ ನೀಡಲಾಯಿತು.
ಮದ್ಯವರ್ಜನ ಶಿಬಿರದಲ್ಲಿ ಭಾಗವಹಿಸಿ ಕುಡಿತದ ಚಟದಿಂದ ವಿಮುಕ್ತಾರಾಗಿ ಬದುಕನ್ನು ರೂಪಿಸಿಕೊಂಡು ಸಮಾಜದಲ್ಲಿ ಒಂದಷ್ಟು ಮಂದಿಯನ್ನು ಪಾನಮುಕ್ತರನ್ನಾಗಿ ಮಾಡುವ ಮೂಲಕ ಸಮಾಜಕ್ಕೆ ಮಾದರಿಯಾಗಿರುವ ವ್ಯಕ್ತಿಗಳನ್ನು ಗುರುತಿಸಿ “ಜಾಗೃತಿ ಅಣ್ಣ ಮತ್ತು ಜಾಗೃತಿ ಮಿತ್ರ” ಪ್ರಶಸ್ತಿ ನೀಡಲಾಯಿತು.


ಸುಳ್ಯದಲ್ಲಿ ಅಟೋ ಚಾಲಕರಾಗಿದ್ದು ಶ್ರೀ ರಾಮ ನವಜೀವನ ಸಮಿತಿಯ ಸದಸ್ಯರಾಗಿದ್ದು ಅಜ್ಜಾವರ ಗ್ರಾಮದ ಜನಜಾಗೃತಿ ವೇದಿಕೆಯ ಅಧ್ಯಕ್ಷರಾಗಿರುವ ಸುಬ್ಬಣ್ಣ ಪಾಟಾಳಿ ಯವರು ಜಾಗೃತಿ ಅಣ್ಣ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇವರು ೧೩೫ ಶಿಬಿರಗಳಲ್ಲಿ ಭಾಗವಹಿಸಿ, ಮದ್ಯ ಮುಕ್ತ ಸಮಾಜದ ನಿರ್ಮಾಣದಲ್ಲಿ ತೊಡಗಿಸಿಕೊಂಡಿದ್ದು ೫೪ ಮಂದಿಯನ್ನು ಶಿಬಿರಕ್ಕೆ ಸೇರಿಸಿ ವ್ಯಸನಮುಕ್ತರಾಗುವಂತೆ ಮಾಡಿದ್ದಾರೆ.
ಜಾಗೃತಿ ಮಿತ್ರ” ಪ್ರಶಸ್ತಿಗೆ ಉಬರಡ್ಕ ಮಿತ್ತೂರು ಗ್ರಾಮದ ಕಂಬಳಿ ಮೂಲೆಯ ಯು.ಆರ್.ರವಿರಾಜ್ ರಾವ್ ರವರು ಆಯ್ಕೆಯಾಗಿದ್ದು, ಇವರು ೭೫ ಮದ್ಯವರ್ಜನ ಶಿಬಿರಗಳಲ್ಲಿ ಬಾಗವಹಿಸಿದ್ದಾರೆ. ಚೈತನ್ಯ ನವಜೀವನ ಸಮಿತಿಯ ಸದಸ್ಯರಾಗಿ, ಯುವಕ ಮಂಡಲದ ಸದಸ್ಯರಾಗಿ, ಪರಗತಿಪರ ಕೃಷಿಕರಾಗಿ ಗುರುತಿಸಿಕೊಂಡಿರುತ್ತಾರೆ.ಸ್ವ ಪ್ರೇರಪಣೆಯಿಂದ ೨೬ ಮಂದಿಯನ್ನು ಶಿಬಿರಕ್ಕೆ ಸೇರಿಸಿ ಪಾನಮುಕ್ತರನ್ನಾಗಿಸಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ.ವೀರೇಂದ್ರ ಹೆಗ್ಗಡೆ ಯವರ ಅಧ್ಯಕ್ಷತೆಯಲ್ಲಿ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.