ಸಂಪಾಜೆ ಗ್ರಾಮ ಪಂಚಾಯತ್ ನೇತೃತ್ವದಲ್ಲಿ ಗಾಂಧಿ ಜಯಂತಿ ಅಂಗವಾಗಿ ಬೃಹತ್ ಸ್ವಚ್ಚತಾ ಕಾರ್ಯಕ್ರಮ

Advt_Headding_Middle
Advt_Headding_Middle

ಸಂಪಾಜೆ ಗ್ರಾಮ ಪಂಚಾಯತ್ ಕಾರ್ಯಕ್ರಮವು ಕಲ್ಲುಗುಂಡಿ ಮುಖ್ಯಪೇಟೆಯಲ್ಲಿ ಪೋಲೀಸ್ ಹೊರಠಾಣೆ ಬಳಿ ಮಹಾತ್ಮಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಪುಷ್ಪಾಂಜಲಿ ಅರ್ಪಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀಮತಿ ಸುಂದರಿ ಮುಂಡಡ್ಕ ವಹಿಸಿದ್ದರು. ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸೋಮಶೇಖರ ಕೊಯಿಂಗಾಜೆಯವರು ಸ್ವಚ್ಚತೆಯ ಮಹತ್ವ ಹಾಗೂ ಗಾಂಧೀಜಿಯವರ ಆದರ್ಶದ ಬಗ್ಗೆ ಒತ್ತಿ ಹೇಳಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ ಸಂಪಾಜೆ ಕಲ್ಲುಗುಂಡಿ ಸಂತ ಪ್ರಾನ್ಸಿಸ್ ಕ್ಸೇವಿಯರ್ ಚರ್ಚ್‌ನ ಧರ್ಮಗುರುಗಳಾದ ರೆ.ಫಾದರ್ ನವೀನ್ ಪ್ರಕಾಶ್ ಪಿಂಟೋರವರು ಮಾತನಾಡಿ ಸ್ವಚ್ಚತೆ ಕೇವಲ ಈ ದಿನ ಮಾತ್ರ ಮೀಸಲಾಗದೆ ನಿರಂತರವಾಗಿ ನಡೆಯಬೇಕು. ನಮ್ಮ ಪರಿಸರವನ್ನು ಸ್ವಚ್ಚಗೊಳಿಸುವ ಮೂಲಕ ನಮ್ಮ ಗ್ರಾಮಸ್ಥರು ಮಾದರಿಯಾಗಬೇಕು. ಇವತ್ತಿನ ಕಾರ್ಯಕ್ರಮದಲ್ಲಿ ಎಲ್ಲಾ ಧರ್ಮದವರನ್ನು ಕರೆಸಿ ಮಾದರಿಯಾಗಿ ಕಾರ್ಯಕ್ರಮ ಅನುಷ್ಠಾನ ಆಗಿದೆ ಎಂದರು.


ಮಾಜಿ ಗ್ರಾಮ ಪಂಚಾಯತ್‌ನ ಅಧ್ಯಕ್ಷರುಗಳಾದ ಮಹಮ್ಮದ್ ಕುಂಞಿ ಗೂನಡ್ಕ, ಕೆ.ಪಿ.ಜಗದೀಶ್, ಬಿ ಯಸ್ ಯಮುನಾ, ಜಗದೀಶ ರೈ, ಲಯನ್ಸ್ ಕ್ಲಬ್ ಅಧ್ಯಕ್ಷರಾದ ಪ್ರಶಾಂತ್ ವಿ ವಿ, ವರ್ತಕರ ಸಂಘದ ಅಧ್ಯಕ್ಷರಾದ ಯು ಬಿ ಚಕ್ರಪಾಣಿ, ತಾಜ್ ಮಹಮ್ಮದ್ ಸಂಪಾಜೆ, ಎಸ್.ಕೆ ಹನೀಫ್, ಎಂ.ಸಿ ಅಬೂಬಕ್ಕರ್, ಆಟೋ ಚಾಲಕ-ಮಾಲಕ ಸಂಘದ ವಸಂತ ಎನ್ ಟಿ, ಕೇಶವ ಬಂಗ್ಲೆಗುಡ್ಡೆ, ಪಂಚಾಯತ್ ಸದಸ್ಯರುಗಳಾದ ನಾಗೇಶ್ ಪಿ.ಆರ್, ಲೂಕಾಸ್ ಟಿ ಐ, ಉಷಾ ಉದಯಕುಮಾರ್, ಪಂಚಾಯತ್ ಅಭಿವೃದ್ದಿ ಅಧಿಕಾರಿ ನಾಗರಾಜ್ ರವರು ಲೆಕ್ಕ ಸಹಾಯಕರಾದ ಅನಿತಾ ಕೆ ಯವರು, ಗ್ರಾಮ ಪಂಚಾಯತ್ ಸಿಬ್ಬಂದಿಗಳು, ಕಿಶೋರ್ ಪಿ ಬಿ ಸ್ಪಾಟ್ ಕಂಪ್ಯೂಟರ್‌ನ ಕಿಶೋರ್ ಹಾಗೂ ವಿದ್ಯಾರ್ಥಿಗಳು, ಸವೇರಪುರ ಆಂಗ್ಲ ಮಾಧ್ಯಮ, ಸವೇರಪುರ ಕನ್ನಡ ಮಾಧ್ಯ ಶಾಲೆಯ ಅಧ್ಯಾಪಕರು ಹಾಗೂ ಮಕ್ಕಳು, ಕಲ್ಲುಗುಂಡಿ ಸರಕಾರಿ ಫ್ರೌಢಶಾಲಾ ಹಾಗೂ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳು, ತೆಕ್ಕಿಲ್ ಶಾಲಾ ಮುಖ್ಯೋಪಾಧ್ಯಾಯರಾದ ದಾಮೋದರ ಗೌಡ, ಸುನಿಲ್, ಚಾಮಯ್ಯ, ಗಿರೀಶ್ ಹಾಗೂ ಲಯನ್ಸ್ ಸಂಸ್ಥೆಯ ನವೀನ್ ಚಂದ್ರ, ಚೆಂಬು ಮಾಜಿ ಪಂಚಾಯತ್ ಸದಸ್ಯ ಕೆ ಸಿ ಸುರೇಶ್, ಬಸವಲಿಂಗಪ್ಪ, ಹಸೈನಾರ್ ಎ ಎಂ ದೊಡ್ಡಡ್ಕ, ಬಿ ಆರ್ ಪದ್ಮಯ್ಯ, ಲಿಸ್ಸಿ ಸಿಲ್ವೆಸ್ಟರ್, ಆಂಟನಿ ಬಾಲಂಬಿ, ವಾಸುದೇವ ಕಟ್ಟೆಮನೆ, ನಳಿನಿ ಕಿಶೋರ್, ಧನು ನವೀನ್ ಚಂದ್ರ ಕೈಪಡ್ಕ, ಎಸ್ ನಿಜಾಮ್ ಕಲ್ಲುಗುಂಡಿ, ಹಾಗೂ ಚರ್ಚ್ ಶಾಲೆ ಹಾಗೂ ಸರಕಾರಿ ಶಾಲಾ ಮಕ್ಕಳಿಂದ ಆಕರ್ಷಕ ಬ್ಯಾಂಡ್ ಕಾರ್ಯಕ್ರಮ ನಡೆಯಿತು. ಬಂದ ಎಲ್ಲರನ್ನು ಜಿ ಕೆ ಹಮೀದ್ ಸ್ವಾಗತಿಸಿ, ಲೆಕ್ಕ ಸಹಾಯಕಿ ಶ್ರೀಮತಿ ಅನಿತಾ ಕೆ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.