ಸುಬ್ರಹ್ಮಣ್ಯ ಅರಣ್ಯಾಧಿಕಾರಿ ಕಛೇರಿ ಮುಂದೆ ಸರಣಿ – ಧರಣಿ

Advt_Headding_Middle
Advt_Headding_Middle

ಸುಬ್ರಹ್ಮಣ್ಯ ವಲಯಾರಣ್ಯಾಧಿಕಾರಿ ಕಛೇರಿ ಮುಂದೆ ಕಾಡಿನಿಂದ ದೊರಕುವ ನೀರನ್ನು ವಾಣಿಜ್ಯ ಉದ್ಯಮಕ್ಕೆ ಬಳಸುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ಸರಣಿ ಧರಣಿ ಆರಂಭ ಗೊಂಡಿದೆ.
ಪರಿಸರ ಸಂರಕ್ಷಣಾ ಸಮಿತಿ ಸುಬ್ರಹ್ಮಣ್ಯ ವತಿಯಿಂದ ಅ.೫ ರಿಂದ ಧರಣಿ ಆರಂಭಗೊಂಡಿದ್ದು, ಸುಬ್ರಹ್ಮಣ್ಯ ಸಂಪುಟ ನರಸಿಂಹ ಮಠದ ಅಧೀನದಲ್ಲಿ ಬರುವ ಎರಡು ವಸತಿ ಗೃಹಗಳಿಗೆ ಕಾಡಿನಿಂದ ಬರುವ ನೀರನ್ನು ಉಪಯೋಗಿಸುತಿದ್ದು, ಅದು ವಾಣಿಜ್ಯ ಉದ್ಯಮಕ್ಕೆ ಬಳಸುವಂತಾಗಿದೆ ಅದನ್ನು ತೆರವುಗೊಳಿಸ ಬೇಕಾಗಿ ವಿನಂತಿಸಲಾಗಿದ್ದರು ಕ್ರಮ ಕೈಗೊಳ್ಳದನ್ನು ಖಂಡಿಸಿ ಧರಣಿ ಆರಂಭಗೊಂಡಿದೆ. ದಿನಂಪ್ರತಿ ಅರಣ್ಯ ಅಧಿಕಾರಿಗಳ ಕಛೇರಿ ಮುಂದೆ ಒಂದು ಗಂಟೆ ಧರಣಿ ನಡೆಸಲು ನಿರ್ಧರಿಸಲಾಗಿದೆ ಎಂದು ತಿಳಿದು ಬಂದಿದೆ. ಅ.೫ ರಂದು ಶ್ರೀನಾಥ್ ಭಟ್ ಧರಣಿ ನಡೆಸಿದ್ದು ಅ. ೬ ರಂದು ಮೋನಪ್ಪ ಮಾನಾಡು ಮತ್ತು ಶಿವರಾಮ ರೈ ಒಂದು ಗಂಟೆ ಧರಣಿ ನಡೆಸಿದ್ದಾರೆ. ಮಂದಿನ ದಿನಗಳಲ್ಲಿ ಪ್ರತಿ ದಿನ ಒಬ್ಬ ವ್ಯಕ್ತಿ ಹೆಚ್ಚುವರಿ ಯಾಗಿ ಧರಣಿ ನಡೆಸುದಾಗಿ ಪರಿಸರ ಸಮಿತಿಯವರು ತಿಳಿಸಿದ್ದಾರೆ. ೧೦ ದಿನಗಳೊಳಗೆ ಕ್ರಮ ಕೈಗೊಳ್ಳದಿದ್ದಲ್ಲಿ ಅಹೋರಾತ್ರಿ ಧರಣಿ ಆರಂಭಿಸುವುದಾಗಿ ಧರಣಿ ನಿರತರು ತಿಳಿಸಿದ್ದಾರೆ. ಧರಣಿಯ ಬಳಿಕ ಅರಣ್ಯ ಅಧಿಕಾರಿಗಳಿಗೆ ಮನವಿ ನೀಡಲಾಯಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.