Breaking News

ಮುಕ್ಕೂರು : ಸತ್ಯನಾರಾಯಣ ಬೈಪಡಿತ್ತಾಯರಿಗೆ ಸಾರ್ವಜನಿಕ ಶ್ರದ್ಧಾಂಜಲಿ ಕಾರ್ಯಕ್ರಮ

Advt_Headding_Middle
Advt_Headding_Middle

ಪೆರುವಾಜೆ ಗ್ರಾಮದ ಮುಕ್ಕೂರು ಕಿನ್ನಿಜಾಲು ಸತ್ಯನಾರಾಯಣ ಬೈಪಡಿತ್ತಾಯರು ಇತ್ತೀಚೆಗೆ ನಿಧನರಾಗಿದ್ದು ಅವರಿಗೆ ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಸಾರ್ವಜನಿಕ ಶ್ರದ್ಧಾಂಜಲಿ ಸಭೆಯು ಅ.6 ರಂದು ಮುಕ್ಕೂರು ಸ.ಹಿ.ಪ್ರಾ.ಶಾಲೆಯಲ್ಲಿ ನಡೆಯಿತು.

 

ದೇರೆಬೈಲು ತಂತ್ರಿಗಳಾದ ವೇದಮೂರ್ತಿ ರಾಘವೇಂದ್ರ ಪ್ರಸಾದ್ ರವರು ನುಡಿನಮನ ಸಲ್ಲಿಸಿದರು.
ಶಾಲಾ ಎಸ್.ಡಿ.ಎಂ.ಸಿ. ಅಧ್ಯಕ್ಷ ಕುಂಞಣ್ಣ ನಾಯ್ಕ ಸಭಾಧ್ಯಕ್ಷತೆ ವಹಿಸಿದ್ದರು.

ವೇದಿಕೆಯಲ್ಲಿ ಪೆರುವೋಡಿ ವಿಷ್ಣುಮೂರ್ತಿ ದೇವಸ್ಥಾನದ ಆಡಳಿತ ಮೊಕ್ತೇಸರ ಎಂ.ಕೆ.ಬಾಲಚಂದ್ರರಾವ್ ಕೊಂಡೆಪ್ಪಾಡಿ,ಕೃಷಿಕರಾದ ಗೋಪಾಲಕೃಷ್ಣ ಭಟ್ ಕಾನಾವು,ಮುಕ್ಕೂರು ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಕುಂಬ್ರ ದಯಾಕರ ಆಳ್ವ,ಗ್ರಾ.ಪಂ.ಸದಸ್ಯ ಉಮೇಶ್ ಕೆ.ಎಂ.ಬಿ.,ಸುಧಾಕರ ರೈ ಕುಂಜಾಡಿ,ಜಗನ್ನಾಥ ಪೂಜಾರಿ ಮುಕ್ಕೂರು,ಸಂಜೀವ ಗೌಡ ಬೈಲಂಗಡಿ,ಪೂವಪ್ಪ ನಾಯ್ಕ ಅಡೀಲು,ನಾರಾಯಣ ಕೊಂಡೆಪ್ಪಾಡಿ, ರಾಘವೇಂದ್ರ ಬೈಪಡಿತ್ತಾಯ ಉಪಸ್ಥಿತರಿದ್ದು ದಿ.ಸತ್ಯನಾರಾಯಣ ಬೈಪಡಿತ್ತಾಯರ ಬಗ್ಗೆ ಗುಣಗಾಣಗೈದರು.

ಕಿರಣ್ ಪ್ರಸಾದ್ ಕುಂಡಡ್ಕ ಕಾರ್ಯಕ್ರಮ ನಿರೂಪಿಸಿದರು. ದಯಾಕರ ಆಳ್ವ ಸ್ವಾಗತಿಸಿದರು. ಸಹಶಿಕ್ಷಕಿ ಸರಿತಾ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.