ಜಾಲ್ಸೂರು: ಶ್ರೀ ಗುರು ರಾಘವೇಂದ್ರ ಸ್ವಾಮಿ ಭಜನಾ ಮಂದಿರದಲ್ಲಿ ಸಮಾಲೋಚನಾ ಸಭೆ

Advt_Headding_Middle
Advt_Headding_Middle

ಜಾಲ್ಸೂರಿನ ಶ್ರೀ ಗುರುರಾಘವೇಂದ್ರ ಸ್ವಾಮಿ ಭಜನಾ ಮಂದಿರದಲ್ಲಿ ಸಮಾಲೋಚನಾ ಸಭೆಯು ಭಜನಾ ಮಂದಿರದ ಅಧ್ಯಕ್ಷ ಎಸ್.ಬಾಬು ಪಾಟಾಳಿಯವರ ಅಧ್ಯಕ್ಷತೆಯಲ್ಲಿ ಅ.7 ರಂದು ನಡೆಯಿತು.


ಸಭೆಯಲ್ಲಿ ಡಿಸೆಂಬರ್ ತಿಂಗಳಲ್ಲಿ ನಡೆಯುವ ಏಕಹಾಭಜನೆ, ಭಜನಾ ಮಂದಿರದ ಪಕ್ಕ ಇರುವ ಹಳೆಯ ಭಜನಾ ಮಂದಿರದ ಕಟ್ಟಡವನ್ನು ತೆರವುಗೊಳಿಸಿ, ಸಭಾಭವನ ವಿಸ್ತರಣೆಯ ಕುರಿತು ಚರ್ಚಿಸಲಾಯಿತು. ಈ ಸಂದರ್ಭದಲ್ಲಿ ಮಂದಿರದ ಕಾರ್ಯದರ್ಶಿ ಸತೀಶ್ ಮರಸಂಕ, ಜಯರಾಮ ರೈ ಜಾಲ್ಸೂರು, ನಾರಾಯಣ ಗೌಡ ಕದಿಕಡ್ಕ, ಮಾಧವ ಗೌಡ ಕಾಳಮನೆ, ಮಂದಿರದ ಖಜಾಂಜಿ ವಿಷ್ಣುಭಟ್ ಪೆರುಂಬಾರು, ಸತೀಶ ಕೆಮನಬಳ್ಳಿ, ತಿಮ್ಮಯ್ಯ ಜಾಲ್ಸೂರು, ಸಾ.ಗಣೇಶೋತ್ಸವ ಸಮಿತಿ ಅಧ್ಯಕ್ಷ ಜಗದೀಶ್ ಬೇರ್ಪಡ್ಕ, ಕಮಲಾಕ್ಷ ನಂಗಾರು ಸೇರಿದಂತೆ ಭಜನಾ ಮಂದಿರದ ಪದಾಧಿಕಾರಿಗಳು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.