ಅ. 17, 18: ಬಾಳಿಲದಲ್ಲಿ ಶಾರದೋತ್ಸವ

Advt_Headding_Middle
Advt_Headding_Middle


ಸಾರ್ವಜನಿಕ ಶ್ರೀ ದೇವತಾರಾಧನ ಸಮಿತಿ ಬಾಳಿಲ-ಮುಪ್ಪೇರ್ಯ ಇದರ ಆಶ್ರಯದಲ್ಲಿ ೧೪ನೇ ವರ್ಷದ ಸಾರ್ವಜನಿಕ ಶ್ರೀ ಶಾರದೋತ್ಸವವು ಸೆ.೧೭ ಮತ್ತು ೧೮ ರಂದು ಬಾಳಿಲ ವಿದ್ಯಾಬೋಧಿನೀ ಪ್ರಾಥಮಿಕ ಶಾಲಾ ವಠಾರದಲ್ಲಿ ನಡೆಯಲಿದೆ.

ಅ. ೧೭ರಂದು ಶ್ರೀ ಶಾರದಾ ದೇವಿಯ ವಿಗ್ರಹ ಆಗಮನ, ಬಳಿಕ ಸ್ಥಳ ಶುದ್ಧಿ, ಗಣಪತಿ ಹವನ, ಶಾರದಾ ದೇವಿಯ ಪ್ರತಿಷ್ಠಾಪನೆ ನಡೆಯಲಿದೆ. ಪೂ. ೧೦.೩೦ಕ್ಕೆ ಸಾರ್ವಜನಿಕ ಶ್ರೀ ಶಾರದೋತ್ಸವ ಉದ್ಘಾಟನೆಗೊಳ್ಳಲಿದ್ದು, ಸಭಾಧ್ಯಕ್ಷತೆಯನ್ನು ಬಾಳಿಲ ಗ್ರಾ.ಪಂ. ಅಧ್ಯಕ್ಷ ಕೃಷ್ಣಪ್ಪ ಪೂಜಾರಿ ವಹಿಸಲಿದ್ದಾರೆ. ಶ್ರೀಮತಿ ಪಿ.ಜಿ. ಸಾವಿತ್ರಿ ಶಾರದೋತ್ಸವವನ್ನು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಾಗಿ ಕಿರಿಯ ಆರೋಗ್ಯ ಸಹಾಯಕಿಯರಾದ ಶ್ರೀಮತಿ ವಸಂತಿ ಎಸ್. ಭಟ್ ಬಾಳಿಲ, ಶ್ರೀಮತಿ ಸಿ.ಸಿ. ಬೇಬಿ ಬಾಳಿಲ ಮತ್ತು ರೇಖಿ ಹಾಗೂ ಯೋಗ ತಜ್ಞ ರಾಜಶೇಖರನ್ ಕೆ.ಕೆ. ಭಾಗವಹಿಸಲಿದ್ದಾರೆ. ಪೂ. ೧೦.೩೦ರಿಂದ ೬೫ ಕೆ.ಜಿ. ಮತ್ತು ೪೦ ಕೆ.ಜಿ. ವಿಭಾಗದ ಪ್ರತ್ಯೇಕ ಪುರುಷರ ಕಬಡ್ಡಿ ಪಂದ್ಯಾಟ ನಡೆಯಲಿದೆ. ಪುರುಷರಿಗೆ ಹಗ್ಗಜಗ್ಗಾಟ, ವಾಲಿಬಾಲ್, ಮಹಿಳೆಯರಿಗೆ ಹಗ್ಗಜಗ್ಗಾಟ, ಡಾಜ್‌ಬಾಲ್, ಗುಂಡೆಸೆತ, ಲಿಂಬೆ ಚಮಚ ಓಟ, ಅದೃಷ್ಟದ ಆಟ, ಭಕ್ತಿಗೀತೆ ಹಾಗೂ ಮಕ್ಕಳಿಗೆ ವಿವಿಧ ಕ್ರೀಢಾಸ್ಪರ್ಧೆಗಳು ನಡೆಯಲಿದೆ. ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ ನಡೆಯಲಿದೆ. ರಾತ್ರಿ ೭.೩೦ರಿಂದ ಸಭಾ ಕಾರ್ಯಕ್ರಮ ಜರಗಲಿದ್ದು, ಸಭಾದ್ಯಕ್ಷತೆಯನ್ನು ಸಮಿತಿಯ ಗೌರವಾಧ್ಯಕ್ಷ ಯು. ರಾಧಾಕೃಷ್ಣ ರಾವ್ ವಹಿಸಲಿದ್ದಾರೆ. ರಾಮಚಂದ್ರ ಕೆದಿಲ ಸ್ಮರಣಾರ್ಥ ಶ್ರೀ ಶಾರದೋತ್ಸವ ಪ್ರಶಸ್ತಿಯನ್ನು ಐ.ಪಿ.ಎಸ್. ಅಧಿಕಾರಿ ಶ್ರೀಹರ್ಷ ನೆಟ್ಟಾರುರವರಿಗೆ ನೀಡಲಾಗುವುದು. ಮುಖ್ಯ ಅತಿಥಿಗಳಾಗಿ ನಿವೃತ್ತ ಸೀನಿಯರ್ ಟೆಲಿಕಾಂ ಸುಪರಿಂಟೆಂಡೆಂಟ್ ಎ.ಕೆ. ನಾಯ್ಕ್ ಅಮೆಬೈಲ್, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯೆ ಶ್ರೀಮತಿ ರಾಜೀವಿ ಆರ್.ರೈ, ದೆಹಲಿ ಕನ್ನಡ ಸಂಘದ ಅಧ್ಯಕ್ಷ ವಸಂತ ಶೆಟ್ಟಿ ಬೆಳ್ಳಾರೆ, ಭಾರತೀ ಶಂಕರ್ ಆದಾಳ, ರಾಮಜೋಯಿಸ ಬೆಳ್ಳಾರೆ ಭಾಗವಹಿಸಲಿದ್ದಾರೆ. ರಾತ್ರಿ ಗಂಟೆ ೯.೦೦ರಿಂದ ಯಕ್ಷಗಾನ ಬಯಲಾಟ ದಕ್ಷಾದ್ವರ ನಡೆಯಲಿದ್ದು, ಭಾಗವತರಾಗಿ ಪದ್ಯಾಣ ಗಣಪತಿ ಭಟ್ ಮತ್ತು ರಮೇಶ್ ಭಟ್ ಪುತ್ತೂರು, ಮುಮ್ಮೇಳದಲ್ಲಿ ಸುಣ್ಣಂಬಳ, ಪನೆಯಾಲ, ಶಶಿಕಾಂತ್ ಶೆಟ್ಟಿ, ಹರಿನಾರಾಯಣ ಎಡನೀರು, ಬಂಟ್ವಾಳ ಜಯರಾಮ ಆಚಾರ್ಯ, ಪೆರುವೋಡಿ, ಲಕ್ಷಣ ಮರಕ್ಕಡ, ಮಹೇಶ್, ಅಜಿತ್, ಸ್ವಸ್ತಕ್ ಶರ್ಮ ಮೊದಲಾದವರು ಭಾಗವಹಿಸಲಿದ್ದಾರೆ. ಅ. ೧೮ರಂದು ಬಾಬು ಅಜಿಲ ಬಾಳಿಲ ಮತ್ತು ಬಳಗದವರಿಂದ ಬಕ್ತಿಗೀತೆ ಜರಗಲಿದೆ. ಮಧ್ಯಾಹ್ನ ೧೨.೦೦ಗಂಟೆಗೆ ದ.ಕ. ಜಿ.ಪಂ. ಉಪಾಧ್ಯಕ್ಷೆ ಶ್ರೀಮತಿ ಕಸ್ತೂರಿ ಪಂಜರವರ ಅಧ್ಯಕ್ಷತೆಯಲ್ಲಿ ಧಾರ್ಮಿಕ ಸಭಾಕಾರ್ಯಕ್ರಮ ಜರಗಲಿದ್ದು, ವೇದಮೂರ್ತಿ ಸಂದೇಶ ಶರ್ಮ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಎ.ಪಿ.ಎಂ.ಸಿ. ಅಧ್ಯಕ್ಷ ಅಡ್ಡಂತಡ್ಕ ದೇರಣ್ಣ ಗೌಡ, ಕೋಟೆ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಧರ್ಮದರ್ಶಿ ವಾರಣಾಶಿ ಗೋಪಾಲಕೃಷ್ಣ, ಸುಳ್ಯ ತಾ.ಪಂ. ಉಪಾಧ್ಯಕ್ಷೆ ಶ್ರೀಮತಿ ಸುಭದಾ ರೈ, ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಬೆಳ್ಳಾರೆ ಇದರ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸುನಿಲ್ ರೈ ಪುಡ್ಕಜೆ, ಉದ್ಯಮಿ ಅಜಯ್ ಪಿ ಮತ್ತು ಆಶ್ರಯ್ ರೈ ಮಾದೋಡಿ ಭಾಗವಹಿಸಲಿದ್ದಾರೆ. ಮಧ್ಯಾಹ್ನ ಮಹಾಪೂಜೆಯ ಬಳಿಕ ಭೋಜನ ನಡೆಯಲಿದೆ. ಸಂಜೆ ೩.೩೦ರಿಂದ ಶ್ರೀ ಶಾರದಾ ದೇವಿಯ ಶೋಭಾಯಾತ್ರೆ ಬಾಳಿಲದಿಂದ ಹೊರಟು ಬೊಮ್ಮನಮಜಲು ಹೊಳೆಯಲ್ಲಿ ಜಲಸ್ತಂಭನಗೊಳ್ಳಲಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.