ಪೈಲಾರು: ಅಂಗನವಾಡಿ ಕೇಂದ್ರದಲ್ಲಿ ಗಾಂಧಿ ಜಯಂತಿ, ಐಸಿಡಿಎಸ್ ದಿನಾಚರಣೆ, ಹಿರಿಯ ನಾಗರಿಕರ ದಿನಾಚರಣೆ

Advt_Headding_Middle
Advt_Headding_Middle

ಪೈಲಾರು ಅಂಗನವಾಡಿ ಕೇಂದ್ರದಲ್ಲಿ ಗಾಂಧಿ ಜಯಂತಿ, ಐಸಿಡಿಎಸ್ ದಿನಾಚರಣೆ, ಹಾಗು ಹಿರಿಯ ನಾಗರಿಕರ ದಿನಾಚರಣೆ ಜಂಟಿ ಕಾರ್ಯಕ್ರಮವನ್ನು ಅ. ೨ರಂದು ಹಮ್ಮಿಕೊಳ್ಳಲಾಯಿತು.

ಬಾಲವಿಕಾಸ ಸಮಿತಿಯ ಅಧ್ಯಕ್ಷರಾಗಿರುವ ಶಿವರಾಮಗೌಡ ಕೆರೆಮೂಲೆಯವರು ಅಧ್ಯಕ್ಷತೆ ವಹಿಸಿದ್ದರು. ಹಿರಿಯ ನಾಗರಿಕರಾದ ದೇವಮ್ಮ ಕೆರೆಮೂಲೆಯವರು ಕಾರ್ಯಕ್ರಮ ಉದ್ಘಾಟಣೆ ಮಾಡಿದರು. ಹಿರಿಯ ನಾಗರಿಕ , ನಿವೃತ್ತ ಶಿಕ್ಷಕ ಹಾಗು ನಾಟಿ ವೈದ್ಯರಾದ ತಿರುಮಲೇಶ್ವರ ಶಾಂತಿಮೂಲೆಯವರು ಹಿರಿಯ ನಾಗರಿಕ ಮತ್ತು ಗಾಂಧಿ ಜಯಂತಿಯ ಬಗ್ಗೆ ಮಾಹಿತಿ ನೀಡಿದರು. ಶಿಶು ಅಭಿವೃದ್ಧಿ ಮೇಲ್ವಿಚಾರಕಿ ವಿಜಯ.ಜೆ.ಡಿ. ಅವರು ಐಸಿಡಿಎಸ್ ಯೋಜನೆಯ ಬಗ್ಗೆ ಮಾಹಿತಿ ನೀಡಿದರು. ಹರಿಶ್ಚಂದ್ರ ಮೋಂಟಡ್ಕ, ಕೃಷ್ಣಪ್ಪ ಗೌಡ ದೇವರಗುಂಡ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಹಿರಿಯ ನಾಗರಿಕರು, ಪೋಷಕರು, ಸ್ತ್ರೀಶಕ್ತಿ ಗುಂಪಿನ ಸದಸ್ಯರು, ಅಂಗನವಾಡಿ ಸಹಾಯಕಿ ಪದ್ಮಾವತಿಯವರು ಉಪಸ್ಥಿತರಿದ್ದರು. ಅಂಗನವಾಡಿ ಕಾರ್ಯಕರ್ತೆ ಚಂದ್ರಾವತಿ ಕೆರೆಮೂಲೆಯವರು ಪ್ರಾಸ್ತವಿಕ ಮಾತುಗಳನ್ನಾಡಿದರೆ , ಅಂಗನವಾಡಿ ಪುಟಾಣಿಗಳು ಪ್ರಾರ್ಥಿಸಿದರು. ಕು.ಅಕ್ಷಿತಾ ಕಾರ್ಯಕ್ರಮ ನಿರ್ವಹಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.