Breaking News

ಕುಮಾರ್ ಪೆರ್ನಾಜೆಯವರಿಗೆ ರಾಜ್ಯ ಮಟ್ಟದ “ಆವಿಷ್ಕಾರಿ ರೈತ” ಪ್ರಶಸ್ತಿ ಪ್ರದಾನ

Advt_Headding_Middle
Advt_Headding_Middle

ಬೆಂಗಳೂರು ಕೃಷಿ ತಂತ್ರಜ್ಞರ ಸಂಸ್ಥೆ (ರಿ) ತನ್ನ ಸುವರ್ಣ ಮಹೋತ್ಸವ ವರ್ಷ – 2018 ರ ಆಚರಣೆಯನ್ನು ಅ.5 ರಂದು ರೈತ ವಿಜ್ಞಾನ ಕಾಂಗ್ರೆಸ್ ಸಮಾವೇಶವನ್ನು ಕೃಷಿ ಸಚಿವರಾದ ಎನ್. ಎಚ್ ಶಿವಶಂಕರ್ ರೆಡ್ಡಿಯವರು ಸಮಾರಂಭವನ್ನು ಉದ್ಘಾಟಿಸಿದರು.

ಈ ಸಂಧರ್ಭದಲ್ಲಿ ಕೃಷಿ, ತೋಟಗಾರಿಕೆ, ಪಶುಸಂಗೋಪನೆ, ಮತ್ತು ಕೃಷಿ ಸಂಬಂಧಿತ ಇತರ ವಿಷಯಗಳಲ್ಲಿ ಮಾಡಿರುವ ಆವಿಷ್ಕಾರಕ್ಕೆ ರಾಜ್ಯದ ಎಲ್ಲಾ ೩೦ ಜಿಲ್ಲೆಗಳಿಂದ ಒಬ್ಬರಂತೆ ದ.ಕ ಜಿಲ್ಲೆಯಿಂದ ಕುಮಾರ್ ಪೆರ್ನಾಜೆಯವರನ್ನು ಆವಿಷ್ಕಾರಿ ರೈತರಾಗಿ ಆಯ್ಕೆ ಮಾಡಲಾಗಿದ್ದು, ಇವರು ಈಗಾಗಲೇ ರಾಷ್ಟ್ರೀಯ ಪುರಸ್ಕೃತರಾಗಿದ್ದು ಇವರ ಬೋರ್ಡ್ ದ್ರಾವಣ ಸ್ಪ್ರೇಯಿಂಗ್ ಟೆಕ್ನಿಕ್‌ಗೆ ಪುನಃ ರಾಜ್ಯ ಮಟ್ಟದ ಸಮಾವೇಶದಲ್ಲಿ ಸಂಸ್ಥೆಯಿಂದ ಸನ್ಮಾನದಲ್ಲಿ ಕಾಶ್ಮೀರಿ ಶಾಲು, ಏಲಕ್ಕಿ ಹಾರ, ಸ್ಮರಣ ಫಲಕ, ಪ್ರಮಾಣ ಪತ್ರ, ಹೂಗುಚ್ಚ ನೀಡಿ ರಾಜ್ಯ ಮಟ್ಟದ ಪ್ರಶಸ್ತಿ ಪ್ರದಾನ ಮಾಡಿದರು.

ಬೆಂಗಳೂರಿನ ಕೃಷಿ ತಂತ್ರಜ್ಞರ ಸಂಸ್ಥೆಯ ಅಧ್ಯಕ್ಷ ಡಾ| ಎಂ. ಮಲ್ಲಪ್ಪ, ಉಪಾಧ್ಯಕ್ಷ ಜಿ. ಈಶ್ವರಪ್ಪ, ನಿರ್ದೇಶಕರಾದ ಬಿ.ವೈ ಶ್ರೀನಿವಾಸ್, ಕೆ. ಕೃಷ್ಣಪ್ಪ ಕಾರ್ಯದರ್ಶಿ, ಪ್ರೊ|ವಿ.ವೀರಭದ್ರೈಯ್ಯ, ಡಾ| ಎಂ.ಜೆ. ಚಂದ್ರೇಗೌಡ, ಡಾ| ಎಂ. ಎನ್ ನಟರಾಜ್, ಡಾ| ಎಂ.ಬಿ ಚೆಟ್ಟಿ, ಡಾ| ಎನ್. ರಾಜೇಂದ್ರ ಪ್ರಸಾದ್, ಡಾ| ಶ್ರೀ ಕೆ.ಜಿ ಜಗದೀಶ್, ಡಾ| ನವೀನ್ ಬ್ರಹ್ಮಾವರ ಉಡುಪಿ, ಕೃಷಿ ತಜ್ಞರು, ಗಣ್ಯರ ಉಪಸ್ಥಿತಿಯಲ್ಲಿ ಜರುಗಿತು. ಈ ಸಂದರ್ಭದಲ್ಲಿ ಆವಿಷ್ಕಾರಿ ರೈತರ ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡಲಾಯಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.