Breaking News

ಫೇಸ್‌ಬುಕ್‌ನಲ್ಲಿ ಸಚಿವ ಖಾದರ್ ಕುರಿತು ಆವಹೇಳನಕಾರಿ ಪದ ಬಳಕೆ :ಸುಳ್ಯ ಪೋಲೀಸ್ ಠಾಣೆಗೆ ದೂರು

Advt_Headding_Middle
Advt_Headding_Middle

ರಾಜ್ಯದ ವಸತಿ ಸಚಿವ ಯು.ಟಿ.ಖಾದರ್‌ರವರ ಕುರಿತು ಸಾಮಾಜಿಕ ಜಾಲತಾಣದಲ್ಲಿ ಆವಹೇಳನಕಾರಿ ಪದ ಬಳಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಸುಳ್ಯ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಉಪಾಧ್ಯಕ್ಷ ಶಾಫಿ ಕುತ್ತಮೊಟ್ಟೆ ಸುಳ್ಯ ಪೊಲೀಸರಿಗೆ ದೂರು ನೀಡಿದ್ದಾರೆ. “ಹನಿ ಹಿಂದೂಸ್ತಾನಿ ಮಂಗಳೂರು” ಎನ್ನುವ ಫೇಸ್ ಬುಕ್ ಖಾತೆಯಲ್ಲಿ ಸಚಿವರಾದ ಯು.ಟಿ.ಖಾದರ್‌ರವರ ತಿರುಚಲ್ಪಟ್ಟ ಭಾವಚಿತ್ರ ಪ್ರಕಟಿಸಿದ್ದಲ್ಲದೆ ಆವಹೇಳನಾಕಾರಿ ಪದ ಬಳಕೆ ಮಾಡಲಾಗಿದೆ. ಈ ರೀತಿಯಾಗಿ ಚಿತ್ರಿಸಿರುವುದ್ದರಿಂದ ಜಿಲ್ಲೆಯಲ್ಲಿ ಶಾಂತಿ ಕದಡುವ ಪ್ರಯತ್ನ ಮಾಡಲಾಗುತ್ತಿದೆ. ಅಲ್ಲದೇ ಸುಳ್ಳು ಪ್ರಕಟಣೆಗಳನ್ನು ಮಾಡುತ್ತಿರುವುದ್ದರಿಂದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಿಗೂ ನೋವುಟಾಂಗಿದೆ. ಈ ರೀತಿಯ ವರದಿಗಳನ್ನು ಸೃಷ್ಠಿ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿ ಬಿಟ್ಟು ಸಮಾಜದ ಸ್ವಾಸ್ತ್ಯ ಕದಡುವ ” ಹನಿ ಹಿಂದೂಸ್ತಾನಿ ಮಂಗಳೂರು ಫೇಸ್ ಬುಕ್ ಖಾತೆಯ ವಿರುದ್ಧ ಹಾಗೂ ಅದನ್ನು ನಡೆಸುತ್ತಿರುವ ವ್ಯಕ್ತಿಗಳ ವಿರುದ್ಧ ಸೂಕ್ತ ಕ್ರಿಮಿನಲ್ ಪ್ರಕರಣ ದಾಖಲಾಸಿ ತಪ್ಪಿತಸ್ಥರ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕೆಂದು ಶಾಫಿಯವರು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಬ್ಯಾರಿ ಅಕಾಡಮಿ -ಸದಸ್ಯ ಅನ್ಸಾರ್ ಬೆಳ್ಳಾರೆ , ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಉಪಾಧ್ಯಕ್ಷ ಅಬ್ದುಲ್ ರಝಾಕ್ ಗಾಂಧಿನಗರ, ಯುವ ಇಂಟೆಕ್ ಪ್ರದಾನ ಕಾರ್ಯದರ್ಶಿ ಶಿಹಾಬ್ ಕೇರ್ಪಳ, ಶಹೀದ್ ಪಾರೆ, ಅಶೀಫ್ ಸುಳ್ಯ ಇದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.