ಕ್ಷೇತ್ರ ಶಿಕ್ಷಣಾಧಿಕಾರಿ ಲಿಂಗರಾಜೇ ಅರಸ್‌ಗೆ ವಿದಾಯ ಕೂಟ ಸಮಾರಂಭ

Advt_Headding_Middle
Advt_Headding_Middle

ಸುಳ್ಯ ಕ್ಷೇತ್ರ ಶಿಕ್ಷಣಾಧಿಕಾರಿ ಕರ್ತವ್ಯ ನಿರ್ವಹಿಸಿ ಇದೀಗ ಚಾಮರಾಜನಗರ ಡಯಟ್‌ಗೆ ಹಿರಿಯ ಉಪನ್ಯಾಸಕರಾಗಿ ವರ್ಗವಣೆಗೊಂಡಿರುವ ಲಿಂಗರಾಜೇ ಅರಸ್ ಯು.ಆರ್ ಗೆ ವಿದಾಯ ಕೂಟ ಸಮಾರಂಭವು ಅ.೯ರಂದು ಸುಳ್ಯ ಕಛೇರಿಯಲ್ಲಿ ನಡೆಯಿತು.

ಕ್ಷೇತ್ರ ಶಿಕ್ಷಣಾಧಿಕಾರಿಯವರನ್ನು ಸ್ಮರಣಿಕೆ ಫಲಪುಷ್ಪ ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಸುಳ್ಯ ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮನ್ವಯಧಿಕಾರಿ ವೀರ್ಣ.ಎಂ.ಟಿ, ಕಛೇರಿ ವ್ಯವಸ್ಥಾಪಕರಾದ ಸ್ವರ್ಣಲತಾ ಕೆ.ಎಂ, ದೈಹಿಕ ಶಿಕ್ಷಣ ಪರಿವೀಕ್ಷರಾದ ಲಕ್ಷ್ಮೀಶ ರೈ, ಶಿಕ್ಷಣ ಸಂಯೋಜಕರಾದ ಡಾ| ಸುಂದರ ಕೇನಾಜೆ, ಸಂಧ್ಯಾ ಕುಮಾರಿ ಬಿ.ಎಸ್, ಚಂದ್ರಶೇಖರ, ಅಧೀಕ್ಷರಾದ, ಶ್ಯಾಮ್ ಪ್ರಸಾದ್ ಎಂ, ಪ್ರಥಮ ದರ್ಜೆ ಸಹಾಯಕರಾದ ರತ್ನಾಕರ ಪರಿವಾರ, ತೀರ್ಥರಾಮ ಹೆಚ್.ಬಿ, ದ್ವಿತೀಯ ಪ್ರಥಮ ದರ್ಜೆ ಸಹಾಯಕರಾದ ಪೃಥ್ವಿಕುಮಾರ್ ಟಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಶ್ರೀಧರ ಮೊದಲಾದವರು ಮಾತನಾಡಿ ಶುಭಹಾರೈಸಿದರು. ವಿದಾಯಗೊಂಡ ಕ್ಷೇತ್ರ ಶಿಕ್ಷಣಾಧಿಕಾರಿ ಲಿಂಗರಾಜೇ ಅರಸ್ ಮಾತನಾಡಿ ಕೃತಜ್ಞತೆ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಮುಖ್ಯಶಿಕಕರುಗಳಾದ ಮರ್ಕಂಜ ಸ.ಪ್ರೌಡ ಶಾಲೆಯ ರಾಜೀವ್, ಗಾಂಧಿನಗರ ಶಾಲೆಯ ಸೇರ ಕೋಟಿಯಪ್ಪ ಪೂಜಾರಿ, ಜಾಲ್ಸೂರು ಸ.ಹಿ.ಪ್ರಾ ಶಾಲೆಯ ಪುಷ್ಪಾವತಿ, ಎಣ್ಮೂರು ಸ.ಪ್ರೌಡ ಶಾಲೆಯ ಶೀತಲ್, ದ್ವಿತೀಯ ಪ್ರಥಮ ದರ್ಜೆ ಸಹಾಯಕರಾದ ಮಮತಾ, ಶಿಕ್ಷಕರಾದ ಗಣಪತಿ ಭಟ್, ಕಛೇರಿ ಸಿಬ್ಬಂದಿಗಳಾದ ವಸಂತ ದುಗಲಡ್ಕ, ಶಾರದ ಉಪಸ್ಥಿತರಿದ್ದರು. ವಾಹನ ಚಾಲಕ ರಾಘವ ಪ್ರಾರ್ಥಿಸಿ, ಶಿಕ್ಷಣ ಸಂಯೋಜಕರಾದ ಡಾ| ಸುಂದರ ಕೆನಾಜೆ,ಕಾರ್ಯಕ್ರಮ ನಿರೂಪಿಸಿದರು. ದ್ವಿತೀಯ ಪ್ರಥಮ ದರ್ಜೆ ಸಹಾಯಕರಾದ ಸನತ್ ಪಿ.ಎನ್ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.