ಶ್ರೀ ಹನುಮ ದರ್ಶನ ಯಕ್ಷಗಾನ ತಾಳಮದ್ದಳೆ ಸಪ್ತಾಹ

Advt_Headding_Middle
Advt_Headding_Middle

ಸುಳ್ಯ ಕಲ್ಕುಡ ದೈವಸ್ಥಾನ ಮತ್ತು ಯುವಕ ಯಕ್ಷಗಾನ ಕಲಾರಂಗ ಇದರ ಸಹಯೋಗದಲ್ಲಿ ಅ.೨೦ ರಿಂದ ೨೬ ರ ತನಕ ಶ್ರೀ ಕಲ್ಕುಡ ದೈವಸ್ಥಾನದ ವಠಾರದಲ್ಲಿ ಶೇಖರ ಮಣಿಯಾಣಿ ಸುಳ್ಯ ರವರ ಸಂಯೋಜನೆಯಲ್ಲಿ ಶ್ರೀ ಹನುಮ ದರ್ಶನ ಎಂಬ ಯಕ್ಷಗಾನ ತಾಳಮದ್ದಳೆ ಸಪ್ತಾಹ ವು ನಡೆಯಲಿರುವುದು.
ಅ.೨೦ ರಂದು ಸಂಜೆ ೪.೩೦ ರಿಂದ ಉದ್ಘಾಟನಾ ಸಮಾರಂಭ ನಡೆದು ನಿರಂತರ ೭ ದಿನಗಳ ಕಾಲ ಪ್ರತೀದಿನ ಸಂಜೆ ಗಂಟೆ ೫.೩೦ ರಿಂದ ಯಕ್ಷರಂಗದ ತೆಂಕು-ಬಡಗು ತಿಟ್ಟುಗಳ ಸಮರ್ಥ ಯಕ್ಷ ವಾಗ್ಮಿ ಎಂ.ಆರ್.ವಾಸುದೇವ ಸಾಮಗ ಮಲ್ಪೆ ಯವರ ನಿರ್ದೇಶನದಲ್ಲಿ ಶ್ರೀ ಹನುಮನ ಆಯ್ದ ಕಥಾನಕಗಳಾದ ಸುಗ್ರೀವ ಸಖ್ಯ, ಲಂಕ ದಹನ, ಇಂದ್ರಜಿತು ಕಾಳಗ, ಶಿವ ಭಕ್ತ ವೀರಮಣಿ, ಶ್ರೀ ರಾಮಾಂಜನೇಯ, ಶರಸೇತು ಬಂಧ, ಭೀಮಾಂಜನೇಯ ಪ್ರಸಂಗಗಳು ಪ್ರದರ್ಶನಗೊಳ್ಳಲಿದೆ. ಎಂದು ಅ.೨೬ರಂದು ಸಂಜೆ ಸಮಾರೋಪ ಸಮಾರಂಭದಲ್ಲಿ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಘಟಕರಾದ ಶೇಖರ ಮಣಿಯಾಣಿ ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.