ಕಾಂತಮಂಗಲ ಸೇತುವೆ ದುರಸ್ತಿ ಪಡಿಸುವಂತೆ ಜೂನ್ 2017 ರಲ್ಲಿಯೇ ಸರಕಾರಕ್ಕೆ ದೂರು ಸಲ್ಲಿಸಿದ್ದೆ: ಶಾರಿಕ್ ಪತ್ರಿಕಾ ಗೋಷ್ಟಿ

Advt_Headding_Middle
Advt_Headding_Middle

ಸುಳ್ಯ ತಾಲೂಕಿನ ಕಾಂತಮಂಗಲ ಸೇತುವೆ ಬಿರುಕು ಬಿಟ್ಟು ಮುರಿದು ಬೀಳುವ ಸ್ಥಿತಿಯನ್ನು ಮನಗಂಡ ನಾನು ೨೩-೬-೨೦೧೭ ರಲ್ಲಿ ಲೋಕೋಪಯೋಗಿ ಸಚಿವರಿಗೆ , ಸಂಸದರಿಗೆ, ಜಿಲ್ಲಾಧಿಕಾರಿ ಯವರಿಗೆ, ದ.ಕ ಜಿ ಪಂ ಕಾರ್ಯನಿರ್ವಹಣಾಧಿಕಾರಿಗೆ ಮನವಿ ಸಲ್ಲಿಸಿದ್ದೆ, ಅಲ್ಲದೆ ಲೊಕಾಯುಕ್ತ ನ್ಯಾಯಮೂರ್ತಿ ಪಿ .ವಿಶ್ವನಾಥ್ ಶೆಟ್ಟಿ ಯವರಿಗೆ ದೂರು ನೀಡಿದ್ದೆ. ಅದರಂತೆ ಈಗ ಕಾಮಗಾರಿಯಾಗಿದೆ. ಅಲ್ಲದೆ , ೨೦೧೪ ರಲ್ಲಿ ಮಾಣಿ – ಮೈಸೂರು ರಾಜ್ಯ ಹೆದ್ದಾರಿ ಅಭಿವೃದ್ಧಿ ಮತ್ತು ಅಗಲಿಕರಣ ಆದ ಸಂದರ್ಭದಲ್ಲಿ ಭೂ ಮಾಲಿಕರಿಗೆ ಪರಿಹಾರ ನೀಡದೇ ಇರುವ ಸಂದರ್ಭದಲ್ಲಿ ಲೋಕಾಯುಕ್ತರಿಗೆ ದೂರು ನೀಡಿ ರೂ.೫.೪೯ ಕೋಟಿ ರೂ ಬಿಡುಗಡೆ ಯಾಗುವಂತೆ ಮಾಡಿದೇನೆ, ೨೦೧೬-೧೭ ರಲ್ಲಿ, ಎಲ್ ಕೆ ಜಿಯಿಂದ ,೮ ನೇ ತರಗತಿ ವರೆಗೆಖಾಸಗಿ ಶಾಲೆ ಗಳಲ್ಲಿ ಸೀಟು ಹಂಚಿಕೆಯ ಗೊಂದಲ ಮೂಡಿದಾಗ ಶಿಕ್ಷಣ ಇಲಾಖೆಯ ಕಮಿಷನರ್ ಗೆ ದೂರು ಸಲ್ಲಿಸಿ ಎಲ್ಲರಿಗೂ ಸೀಟು ಹಂಚಿಕೆಯಾಗಿತ್ತು.


ಸುಳ್ಯ ದಲ್ಲಿ ಸುಸ್ಸಜ್ಜಿತ ಆಸ್ಪತ್ರೆ ಇದ್ದರೂ, ವೈದ್ಯರು ಸಿಬ್ಬಂದಿ ಕೊರತೆ ಇದ್ದನ್ನು ಗಮನಿಸಿ ಆರೋಗ್ಯ ಸಚಿವರು, ಜಗದೀಶ್ ಶೆಟ್ಟರ್, ಕುಮಾರ ಸ್ವಾಮಿಗೆ ದೂರು ಸಲ್ಲಿಸಿದಾಗ ಹೆಚ್ಚುವರಿ ಸಿಬ್ಬಂದಿ ಹಾಗೂ ವೈದ್ಯಾಧಿಕಾರಿ ನೇಮಕ ವಾಗಿತ್ತು.ಅಲ್ಲದೆ ಉಬರಡ್ಕ ಮಿತ್ತೂರು ಗ್ರಾಮದಲ್ಲಿ ಸಣ್ಣ ನೀರಾವರಿ ಇಲಾಖೆಯ ವತಿಯಿಂದ ನಿರ್ಮಿಸಲಾಗಿದ್ದ ಕಿಂಡಿ ಅಣೆಕಟ್ಟು ಒಡೆದು ನೀರು ಪಾಲಾದ ಸಂದರ್ಭದಲ್ಲಿ ಇಂಜಿನಿಯರಿಂಗ್ ವಿರುದ್ಧದ ದೂರು ದಾಖಲಿಸಿದ್ದು ಆ ಅವದಿಯಲ್ಲಿ ಗ್ರಾಮ ಪಂಚಾಯತ್ ನಿರ್ಣಾಯದಂತೆ ಇನ್ನೊಂದು ಕಿಂಡಿ ಅಣೆಕಟ್ಟು ನಿರ್ಮಿಸಿದ್ದಾರೆ.
ರಾಜ್ಯ ಹೆದ್ದಾರಿ ೮೮ ರ ರಸ್ತೆ ಕಾಮಗಾರಿ ಚರಂಡಿ ಮತ್ತು ಪುಟ್ ಪಾತ್ ಅವೈಜ್ಞಾನಿಕ ವಾಗಿ ನಿರ್ಮಿಸಿದ್ದರಿಂದ ಜನರಿಗೆ ಉಂಟಾದ ಅನಾನುಕೂಲತೆಗೆ ಚೀಪ್ ಇಂಜಿನಿಯರ್ ಮತ್ತು ಕೆ ಎಂ ಸಿ ಎಂ ಡಿ ಬೆಂಗಳೂರು ವಿರುದ್ಧ ದೂರು ದಾಖಲಿಸಿದ್ದು. ವಿಚಾರಣೆ ಪ್ರಗತಿ ಯಲ್ಲಿದೆ. ಇನ್ನು ಮುಂದೆಯೂ ೧೧೦ ಕೆ.ವಿ ವಿದ್ಯುತ್ , ಆಶ್ರಯ ಯೋಜನೆ ಪಲಾನುಭವಿಗಳಿಗೆ ಮನೆ ನಿವೇಶನ ಕೊಡಿಸುವ ಬಗ್ಗೆ, ಒಳಾಂಗಣ ಕ್ರೀಡಾಂಗಣ ಲೋಕಾರ್ಪಣೆ ಗೊಳಿಸದ ಬಗ್ಗೆ , ೫೦ ವರ್ಷದಿಂದ ಸುಳ್ಯ ಇರುವ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದ ವರ್ಗಾವಣೆ ಬಗ್ಗೆ , ಸುಳ್ಯ ತಾಲೂಕಿನ ಬಾಳುಗೊಡು ಗ್ರಾಮದ ಬಸವನಗುಡಿ ಎಂಬಲ್ಲಿಂದ ಉಪ್ಪುಕಳ ತನಕ ರಸ್ತೆ ಬಗ್ಗೆ, ಬಾಳುಗೋಡು ಸೇತುವೆ ಕಾಮಗಾರಿ ಸ್ಥಗಿತ ಗೊಂಡಿರುವ ಬಗ್ಗೆ, ಇನ್ನೂ ಅನೇಕ ಸಮಸ್ಯೆ ಬಗ್ಗೆ , ಭ್ರಷ್ಟಾಚಾರ ರಹಿತವಾಗಿ ಸಾರ್ವಜನಿಕ ರಿಗೆ ಮುಕ್ತವಾಗಿ ದೊರಕಿಸಿಕೊಡಲು ಸಾಮಾಜಿಕ ಕಾರ್ಯಕರ್ತನಾಗಿ ಯಾವುದೇ ವರ್ಗ, ವ್ಯಕ್ತಿ, ಸಂಸ್ಥೆ ಗೆ ಪಕ್ಷ ರಹಿತವಾಗಿ ಹೋರಾಡುವವನಿದ್ದೇನೆ ಸುಳ್ಯದ ಸಮಗ್ರ ಜನತೆ ಸಹಕರಿಸಬೇಕಾಗಿ ಕೇಳಿಕೊಳ್ಳುತೇನೆ ಎಂದು ಶಾರಿಕ್ ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.