Breaking News

ಕುಕ್ಕೆ ಕ್ಷೇತ್ರದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳ ಲೋಕಾರ್ಪಣೆ ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ

Advt_Headding_Middle
Advt_Headding_Middle

ಕುಕ್ಕೆ ಸುಬ್ರಹ್ಮಣ್ಯ ದೇವಳದ ವತಿಯಿಂದ ಪೂರ್ಣಗೊಂಡ ೧ ಕೊ ರೂ ಮೌಲ್ಯದ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನಾ ಕಾರ್ಯಕ್ರಮ ಮತ್ತು ೧ಕೊ.೮೪ ಲಕ್ಷ ವೆಚ್ಚದ ಕಾಮಗಾರಿಗಳ ಶಂಕುಸ್ಥಾಪನೆ ಅ. ೧೧ ರಂದು ನಡೆಯಿತು. ಕುಕ್ಕೆ ಸುಬ್ರಹ್ಮಣ್ಯ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಮಹೇಶ್ ಕುಮಾರ್ ಕೆ.ಎಸ್ ಕರಿಕ್ಕಳ, ಕೃಷ್ಣಮೂರ್ತಿ ಭಟ್, ಬಾಲಕೃಷ್ಣ ಬಳ್ಳೇರಿ, ಮಾಧವ.ಡಿ, ರಾಜೀವಿ ಆರ್.ರೈ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಶ್ರೀ ದೇವಳದ ಸಹಾಯಕ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ ಪೇರಾಲ್, ಮಾಸ್ಟರ್ ಪ್ಲಾನ್ ಮೇಲುಸ್ತುವಾರಿ ಸಮಿತಿ ಸದಸ್ಯರಾದ ಶಿವರಾಮ ರೈ, ಲೋಲಾಕ್ಷ ಕೈಕಂಬ, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯೆ ವಿಮಲಾ ರಂಗಯ್ಯ, ಇಂಜಿನಿಯರ್ ಅಭಿಯಂತರ ಉದಯ ಕುಮಾರ್, ದೇವಳದ ಹೆಬ್ಬಾರ್ ಷಣ್ಮುಖ ಉಪರ್ಣ, ಕೆ.ಎಸ್.ಎಸ್ ಕಾಲೇಜಿನ ಪ್ರಾಂಶುಪಾಲ ಪ್ರೊ.ಕೆ.ಆರ್.ಶೆಟ್ಟಿಗಾರ್, ಎಸ್‌ಎಸ್‌ಪಿಯು ಕಾಲೇಜಿನ ಪ್ರಾಂಶುಪಾಲೆ ಸಾವಿತ್ರಿ.ಕೆ, ಪ್ರೌಢಶಾಲಾ ಮುಖ್ಯಗುರು ಕೆ.ಯಶವಂತ ರೈ, ಗುತ್ತಿಗೆದಾರರಾದ ಪ್ರಕಾಶ್ ಎಸ್ ಶೆಟ್ಟಿ ಬನ್ನಾಡಿ, ಸಿ.ಎನ್.ಎಸ್.ಮೂರ್ತಿ ಬೆಂಗಳೂರು, ಉದಯ ಕುಮಾರ್ ಪಡುಕೋಣೆ, ಶ್ರೀ ದೇವಳದ ಅಧೀಕ್ಷಕ ಬಾಲಸುಬ್ರಹ್ಮಣ್ಯ ಭಟ್ ಉಪಸ್ಥಿತರಿದ್ದರು.
ಆರಂಭದಲ್ಲಿ ಶ್ರೀ ದೇವಳದ ಆಡಳಿತ ಕಚೇರಿಗೆ ನಿರ್ಮಿತ ಲಿಪ್ಟ್, ಬ್ಯಾಟರಿ ಚಾಲಿತ ಪರಿಸರ ಸ್ನೇಹಿ ವಾಹನ, ಅಕ್ಷರಾ ವಸತಿ ಗೃಹದಲ್ಲಿ ನಿರ್ಮಿತ ಲಿಪ್ಟ್, ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತದ ಶ್ರೀ ಸುಬ್ರಹ್ಮಣ್ಯೇಶ್ವರ ಪದವಿಪೂರ್ವ ಕಾಲೇಜಿಗೆ ನಿರ್ಮಿಸಲಾದ ಮೆಟ್ಟಿಲು, ಶ್ರೀ ದೇವಳದ ವಾಹನಗಳಿಗೆ ನಿರ್ಮಿತವಾದ ನೂತನ ಶೆಡ್ ಅನ್ನು ಉದ್ಘಾಟನೆ ಮಾಡಲಾಯಿತು. ಪುರೋಹಿತರಾದ ಪ್ರಸನ್ನ ಭಟ್ ವಿವಿಧ ವೈಧಿಕ ವಿದಿವಿದಾನಗಳನ್ನು ನೆರವೇರಿಸಿ ಪೂಜೆ ಸಲ್ಲಿಸಿದ್ದರು.
ಉದ್ಘಾಟನಾ ಕಾರ್ಯಕ್ರಮ ಬಳಿಕ ಶ್ರೀ ದೇವಳದ ಶೃಂಗೇರಿ ಮಠದ ನೆಲಹಾಸುಗಳಿಗೆ ಮಾರ್ಬಲ್ ಅಳವಡಿಕೆಗೆ ಶಂಕುಸ್ಥಾಪನೆ ನೆರವೇರಿಸಲಾಯಿತು. ಕೆ.ಎಸ್.ಎಸ್ ಕಾಲೇಜಿನ ಕಟ್ಟಡಗಳಿಗೆ ಪೈಟಿಂಗ್ ವ್ಯವಸ್ಥೆಗೆ ಚಾಲನೆ, ಶ್ರೀ ಸುಬ್ರಹ್ಮಣ್ಯೇಶ್ವರ ಪದವಿಪೂರ್ವ ಕಾಲೇಜಿನ ರಂಗಮಂದಿರಕ್ಕೆ ಅಳವಡಿಸಲಿರುವ ಇಂಟರ್‌ಲಾಕ್ ವ್ಯವಸ್ಥೆಗೆ ಶಂಕುಸ್ಥಾಪನೆ, ಕಾಲೇಜಿನ ಎಲ್ಲಾ ಕಟ್ಟಡಗಳಿಗೆ ಪೈಟಿಂಗ್ ಕಾಮಗಾರಿಗೆ ಚಾಲನೆ, ಅನಂತ ವಸತಿ ಗೃಹದ ಬಳಿ ಮಹಿಳೆಯರ ಮತ್ತು ಪುರುಷರ ಶೌಚಾಲಯ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಲಾಯಿತು. ಪುರೋಹಿತ ಸುಬ್ರಹ್ಮಣ್ಯ ಕೋರ್ನಾಯ ಶಂಕುಸ್ಥಾಪನೆಯ ಆರಂಭದಲ್ಲಿ ವೈದಿಕ ವಿದಿವಿಧಾನ ನೆರವೇರಿಸಿ ಪ್ರಾರ್ಥನೆ ಸಲ್ಲಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.