Breaking News

ದೊಡ್ಡತೋಟ ಅಂಗನವಾಡಿಯಲ್ಲಿ ಬೇಟಿ ಬಚಾವೋ, ಬೇಟಿ ಪಡಾವೋ ಅರಿವು ಕಾರ್ಯಕ್ರಮ

Advt_Headding_Middle
Advt_Headding_Middle

ದೊಡ್ಡತೋಟ ಅಂಗನವಾಡಿ ಕೇಂದ್ರದಲ್ಲಿ ಹುಟ್ಟುಹಬ್ಬ ಆಚರಣೆ, ಪೌಷ್ಠಿಕ ಶಿಬಿರ, ಬಾಲವಿಕಾಸ ಸಮಿತಿ ರಚನೆ, ಬೇಟಿ ಬಚಾವೋ, ಬೇಟಿ ಪಡಾವೋ ಅರಿವು ಕಾರ್ಯಕ್ರಮ ಅ. ೪ರಂದು ನಡೆಯಿತು.


ಬಾಲವಿಕಾಸ ಸಮಿತಿ ಅಧ್ಯಕ್ಷೆ ಶಾಲಿನಿ ಶಿವರಾಮ ಅಧ್ಯಕ್ಷತೆ ವಹಿಸಿದ್ದರು. ಆಶಾ ಕಾರ್ಯಕರ್ತೆ ಲಲಿತಾ ಎಚ್.ಕೆ. ಪೌಷ್ಠಿಕ ಆಹಾರ ಸ್ವಚ್ಛತೆಯ ಬಗ್ಗೆ ಮಾಹಿತಿ ನೀಡಿದರು. ಶಿಶು ಅಭಿವೃದ್ಧಿ ಯೋಜನೆಯ ಮೇಲ್ವಿಚಾರಕಿ ವಿಜಯ ಜೆ.ಡಿ. ಬೇಟಿ ಬಚಾವೋ, ಬೇಟಿ ಪಡಾವೋ ಬಗ್ಗೆ ಮಾಹಿತಿ ನೀಡಿದರು. ಮಾಜಿ. ಗ್ರಾ.ಪಂ. ಸದಸ್ಯ ಪ್ರವಿಣ್‌ರಾವ್, ಸೌಮ್ಯ ರವಿ, ಕವಿತಾ ಮಹಾಲಿಂಗೇಶ್ವರ್, ಸುಜಾತ ಪುರುಷೋತ್ತಮ, ಸುಮತಿ ವೆಂಕಟ್ರಮಣ, ಗಾಯತ್ರಿ ಶ್ರೀಹರಿ, ಪವಿತ್ರ ಮೊದಲಾದವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಅಂಗನವಾಡಿ ಕೇಂದ್ರಕ್ಕೆ ಕಬ್ಬಿಣದ ಕವಾಟು, ಸೀಲಿಂಗ್ ಫ್ಯಾನ್, ಔಷಧ ಪೆಟ್ಟಿಗೆ, ದೀಪವನ್ನು ಕೊಡುಗೆಯಾಗಿ ನೀಡಿದರು. ಬೇಬಿ ಚರಿಷ್ಮಾಳ ಹುಟ್ಟು ಹಬ್ಬವನ್ನು ಆಚರಿಸಲಾಯಿತು. ಅಂಗನವಾಡಿ ಕಾರ್ಯಕರ್ತೆ ರಾಜೇಶ್ವರಿ ಕಾರ್ಯಕ್ರಮ ನಿರೂಪಿಸಿದರು. ಅಂಗನವಾಡಿ ಸಹಾಯಕಿ ಕುಸುಮಾವತಿ, ಆಶಾ ಕಾರ್ಯಕರ್ತೆ ನವೀನಕುಮಾರಿ ಸಹಕರಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.