ತರಗತಿ ಕೊಠಡಿಯಲ್ಲಿ ಮುಖ್ಯ ಶಿಕ್ಷಕಿಯ ದೂಡಿದ ಶಿಕ್ಷಕ – ಪೊಲೀಸ್ ದೂರು : ಶಿಕ್ಷಕ ಅಮಾನತು

Advt_Headding_Middle
Advt_Headding_Middle

ಮಾನಸಿಕವಾಗಿ ಜರ್ಜರಿತಗೊಂಡಿದ್ದ ಶಿಕ್ಷಕರೊಬ್ಬರು ತರಗತಿ ಕೊಠಡಿಯಲ್ಲಿ ವಿದ್ಯಾರ್ಥಿನಿಯರಿಗೆ ಪಾಠ ಮಾಡುತ್ತಿದ್ದ ಮುಖ್ಯಶಿಕ್ಷಕಿಯನ್ನು ದೂಡಿದ ಹಾಗೂ ಘಟನೆಗೆ ಸಂಬಂಧಿಸಿ ಸಂಸ್ಥೆಯವರು ಪೊಲೀಸ್ ದೂರು ನೀಡಿದ್ದಲ್ಲದೆ, ಶಿಕ್ಷಕನ್ನು ಅಮಾನತು ಮಾಡಿರುವ ಘಟನೆ ವರದಿಯಾಗಿದೆ.

ಸುಳ್ಯದ ಖಾಸಗಿ ವಿದ್ಯಾಸಂಸ್ಥೆಯೊಂದರಲ್ಲಿ ಈ ಘಟನೆ ನಡೆದಿದ್ದು, ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ವಿದ್ಯಾರ್ಥಿನಿಯರಿಗೆ ಪಾಠ ಮಾಡುತ್ತಿದ್ದಾಗ ತರಗತಿ ಕೊಠಡಿಗೆ ಪ್ರವೇಶಿಸಿದ ಹಿಂದಿ ಶಿಕ್ಷ ಕ ರವೀಂದ್ರ ಎಂಬವರು ಮುಖ್ಯ ಶಿಕ್ಷಕಿಯ ಮೇಲೆ ರೇಗಾಡುತ್ತಾ ದೂಡಿದರು. ಶಿಕ್ಷಕರೊಬ್ಬರ ಈ ಅವತಾರ ನೋಡಿ ವಿದ್ಯಾರ್ಥಿನಿಯವರು ಭಯಭೀತರಾಗಿ ಇತರ ಶಿಕ್ಷಕರನ್ನು ಕರೆದರು. ಅಲ್ಲಿಗೆ ಬಂದ ಇತರ ಶಿಕ್ಷಕರು ರವೀಂದ್ರರನ್ನು ತಡೆದರು. ಈ ಎಲ್ಲಾ ದೃಶ್ಯಗಳು ಕಾಲೇಜಿನ ಸಿಸಿ ಕ್ಯಾಮರಾದಲ್ಲಿ ದಾಖಲಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಪೊಲೀಸ್ ದೂರು: ಶಿಕ್ಷಕ ಅಮಾನತು : ಕಾಲೇಜಿನಲ್ಲಿ ನಡೆದ ಘಟನೆಯನ್ನು ತಿಳಿದ ಆಡಳಿತ ಮಂಡಳಿಯವರು ತಕ್ಷಣ ಸುಳ್ಯ ಪೊಲೀಸರಿಗೆ ದೂರು ನೀಡಿದರು. ಎಸ್.ಐ.ಮಂಜುನಾಥರ ನೇತೃತ್ವದ ತಂಡ ಕಾಲೇಜಿಗೆ ಆಗಮಿಸಿ ಶಿಕ್ಷಕ ರವೀಂದ್ರರನ್ನು ವಶಕ್ಕೆ ಪಡೆದುಕೊಂಡು ಠಾಣೆಗೆ ಕರೆದುಕೊಂಡು ಹೋದರು. ಬಳಿಕ ಸಂಸ್ಥೆಯ ವತಿಯಿಂದ ಪೊಲೀಸರಿಗೆ ದೂರು ನೀಡಲಾಯಿತು.

ಬಳಿಕ ಆಡಳಿತ ಮಂಡಳಿ ಹಾಗೂ ಶಿಕ್ಷಕರ ಸಭೆ ನಡೆಯಿತು. ಅಲ್ಲಿ ಅಸಭ್ಯ ವರ್ತನೆ ತೋರಿದ ಶಿಕ್ಷಕ ರವೀಂದ್ರರನ್ನು ೮ ದಿನಗಳ ಕಾಲ ಅಮಾನತು ಮಾಡುವ ನಿರ್ಧಾರಕ್ಕೆ ಬರಲಾಯಿತೆಂದು ತಿಳಿದುಬಂದಿದೆ. ರವೀಂದ್ರರು ಕೆಲ ಸಮಯಗಳಿಂದ ಮಾನಸಿಕವಾಗಿ ಜರ್ಝರಿತಗೊಂಡಿದ್ದರೆಂದೂ, ಸಂಸ್ಥೆಗೆ ಬಂದರೂ ಸರಿಯಾಗಿ ಪಾಠ ಮಾಡುತ್ತಿರಲಿಲ್ಲವೆಂದೂ ಹೇಳಲಾಗಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.