ಪಂಜ : ಅ.18 ರಂದು ಶ್ರೀ ಶಾರದೋತ್ಸವ

Advt_Headding_Middle
Advt_Headding_Middle

ಶ್ರೀಶಾರದಾಂಬಾ ಭಜನಾ ಮಂಡಳಿ ಪಂಜ,ಶ್ರೀ ಶಾರದೋತ್ಸವ ಸಮಿತಿ ಪಂಜ ಇದರ ಆಶ್ರಯದಲ್ಲಿ ಜರುಗುವ ಶ್ರೀ ಶಾರದೋತ್ಸವ ೨೦೧೮ ಇದರ ಉತ್ಸವವು ವಿವಿಧ ವೈಧಿಕ,ಧಾರ್ಮಿಕ,ಸಾಂಸ್ಕೃತಿಕ ಮತ್ತು ಸ್ಪರ್ಧಾ ಕಾರ್ಯಕ್ರಮಗಳೊಂದಿಗೆ ಅ.೧೮.ರಂದು ಭಜನಾ ಮಂದಿರದಲ್ಲಿ ಜರುಗಲಿದೆ.


ಪೂ.ಗಂ.೧೧ಕ್ಕೆ ಸಭಾ ಕಾರ್ಯಕ್ರಮದಲ್ಲಿ ರಾಜ್ಯ ತುಳು ಸಾಹಿತ್ಯ ಅಕಾಡೆಮಿಯ ನಿಕಟಪೂರ್ವ ಸದಸ್ಯ,ತುಳವ ಬೊಳ್ಳಿ ದಯಾನಂದ ಕತ್ತಲ್‌ಸಾರ್ ಉಪನ್ಯಾಸ ನೀಡಲಿದ್ದಾರೆ.ಉತ್ಸವ ಸಮಿತಿ ಅಧ್ಯಕ್ಷ ನೇಮಿರಾಜ ಪಲ್ಲೋಡಿ ಅಧ್ಯಕ್ಷತೆ ವಹಿಸಲಿದ್ದು, ಅತಿಥಿಯಾಗಿ ಪುತ್ತೂರು ಮಹಾಲಿಂಗೇಶ್ವರ ದೇವಳದ ಶ್ರೀ ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಧ್ಯಕ್ಷ ಡಾ.ಯಂ.ಕೆ.ಪ್ರಸಾದ್ ಉಪಸ್ಥಿತರಿರುವರು.ಶ್ರೀ ಶಾರದಾಂಬಾ ಭಜನಾ ಮಂಡಳಿ ವತಿಯಿಂದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪುರಸ್ಕಾರ ಹಾಗೂ ಪಂಜ ಸಿ ಆರ್ ಪಿ ಯಶೋಧರ ಕೆ ಅವರಿಗೆ ಸನ್ಮಾನ ಜರುಗಲಿದೆ, ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯ ಕೇನ್ಯ ರವೀಂದ್ರನಾಥ್ ಶೆಟ್ಟಿಯವರು ಪ್ರತಿಭಾನ್ವಿತ ವಿದ್ಯಾರ್ಧಿಗಳನ್ನು ಪುರಸ್ಕರಿಸುವರು.ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲ ಛಲಪತಿ ಕೆ ವಿ ಸಾಂಸ್ಕೃತಿಕ ಸ್ಪರ್ಧೆಯನ್ನು ಮತ್ತು ಪೆರಾಜೆ ಜ್ಯೋತಿ ಪ್ರೌಢ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ದೊಡ್ಡಣ್ಣ ಬರೆಮೇಲು ಕ್ರೀಡಾ ಸ್ಪರ್ಧೆಯನ್ನು ಉದ್ಘಾಟಿಸಲಿದ್ದಾರೆ.ಮಧ್ಯಾಹ್ನದ ಬಳಿಕ ಶ್ರೀ ಶಾರದಾಂಬಾ ಯಕ್ಷಗಾನ ಸೇವಾಟ್ರಸ್ಟ್ ಆಶ್ರಯದಲ್ಲಿ ತರಬೇತಿ ಪಡೆದ ವಿದ್ಯಾರ್ಥಿಗಳಿಂದ ಯಕ್ಷಗಾನ ಧಕ್ಷಧ್ವರ-ಜಾಂಬವತಿ ಕಲ್ಯಾಣ ಪ್ರದರ್ಶನ ಗೊಳ್ಳಲಿದೆ.

ಸ್ಫರ್ಧೆಗಳು: ಜಾನಪದ ಗೀತೆ, ಭಕ್ತಿಗೀತೆ,ರಸಪ್ರಶ್ನೆ ಸ್ಫರ್ಧೆಗಳು ಕಿರಿಯ, ಹಿರಿಯ, ಪ್ರೌಢ ತರಗತಿ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕವಾಗಿ ನಡೆಯಲಿದೆ. ಯಲ್ ಕೆ ಜಿ,ಯು ಕೆ ಜಿ,ಅಂಗನವಾಡಿ ಮಕ್ಕಳಿಗೆ ಕಾಳು ಹೆಕ್ಕುವುದು,ಕಪ್ಪೆಜಿಗಿತ ಸ್ಪಧೆಗಳು, ಮಹಿಳೆಯರಿಗೆ ಸಂಗೀತ ಕುರ್ಚಿ,ಬಾಟಲಿಗೆ ನೀರು ತುಂಬಿಸುವುದು ಸ್ಪಧೆಗಳು ನಡೆಯಲಿದೆ.೪೫ ಕೆ.ಜಿ. ಬಾಲಕರ ಕಬಡ್ಡಿ ಪಂದ್ಯಾಟವಿದ್ದು, ಪ್ರಥಮ ೨ ಸಾವಿರ ರೂ. ಮತ್ತು ದ್ವಿತೀಯ ೧ ಸಾವಿರ ರೂ. ನಗದು ಬಹುಮಾನವಿದೆ. ೬೫ ಕೆ.ಜಿ. ಪುರುಷರ ಕಬಡ್ಡಿ ಪಂದ್ಯಾಟವಿದ್ದು ಪ್ರಥಮ ೪ ಸಾವಿರ ರೂ. ಮತ್ತು ದ್ವಿತೀಯ ೨ ಸಾವಿರ ರೂ. ನಗದು ಬಹುಮಾನವಿದೆ.ಪುರುಷರ ಮುಕ್ತ ವಾಲಿಬಾಲ್ ಪಂದ್ಯಾಟವಿದೆ. ೩ ಸಾವಿರ ರೂ. ಮತ್ತು ದ್ವಿತೀಯ ೨ ಸಾವಿರ ರೂ. ನಗದು ಬಹುಮಾನವಿದೆ.

ಸಂಜೆ ಶೋಭಾಯಾತ್ರೆಯಲ್ಲಿ ಬಲು ಅಪರೂಪದ ಸಿದ್ಧವೇಷ, ಕಲ್ಲಡ್ಕದ ಆಕರ್ಷಕ ಟ್ಯಾಬ್ಲೊ ದೇನುಕಾಸುರ ವಧೆ, ತಾಲೀಮೂ ಪ್ರದರ್ಶನ, ಚೆಂಡೆವಾದನ, ನೃತ್ಯ ಭಜನೆ, ಭಜನೆ ತಂಡಗಳು, ಹುಲಿವೇಷ ಕುಣಿತ ಆಕರ್ಷಣೆಯಾಗಲಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.