ಗೌಡರ ಯುವ ಸೇವಾ ಸಂಘದಿಂದ ಶಿಕ್ಷಕರಿಗೆ ಸನ್ಮಾನ

Advt_Headding_Middle
Advt_Headding_Middle

ಸುಳ್ಯ ದ ಗೌಡರ ಯುವ ಸೇವಾ ಸಂಘ ದ ವತಿಯಿಂದ ಜಿಲ್ಲಾ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಐದು ಮಂದಿ ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮ ಅ.13ರಂದು ನಡೆಯಿತು.

ಅಧ್ಯಕ್ಷ ತೆಯನ್ನು ಸಂಘದ ಅಧ್ಯಕ್ಷ ಮೋಹನ್ ರಾಮ್ ಸುಳ್ಳಿ ವಹಿಸಿದ್ದರು. ವಿಶ್ರಾಂತ ಪ್ರಾಂಶುಪಾಲ ಪ್ರೊ ಬಾಲಚಂದ್ರ ಗೌಡ ಶಿಕ್ಷಕರನ್ನು ಸನ್ಮಾನಿಸಿದರು. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶ್ರೀ ಧರ ಗೌಡ ಕೆರೆಮೂಲೆ ಮುಖ್ಯ ಅತಿಥಿ ಯಾಗಿದ್ದರು. ಸಂಘದ ನಿರ್ದೇಶಕ ಚಂದ್ರಶೇಖರ ಪೇರಾಲು ಕಾರ್ಯಕ್ರಮ ಸಂಯೋಜಿಸಿದರು. ಸಂಘದ ಕೋಶಾಧಿಕಾರಿ ತೇಜಪ್ರಸಾದ್ ಅಮೆಚೂರ್ ವೇದಿಕೆಯಲ್ಲಿದ್ದರು. ಪ್ರಧಾನ ಕಾರ್ಯ ದರ್ಶಿ ದೊಡ್ಡಣ್ಣ ಬರೆಮೇಲು ಕಾರ್ಯಕ್ರಮ ನಿರೂಪಿಸಿದರು.

ಸನ್ಮಾನ: 2017 ನೇ ಸಾಲಿನ ಜಿಲ್ಲಾ ಶಿಕ್ಷಕ ಪ್ರಶಸ್ತಿ ಪುರಸ್ಕೃತ ರಾದ ದಯಾನಂದ, ಶ್ರೀ ಮತಿ ಯಶೋದ, 2018ನೇ ಸಾಲಿನ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಚಿನ್ನಪ್ಪಗೌಡ, ಶ್ರೀ ಮತಿ ಸರಸ್ವತಿ ಅಡ್ತಲೆ, ಶ್ರೀ ಮತಿ ಶಾಲಿನಿಯವರನ್ನು ಸನ್ಮಾನಿಸಲಾಯಿತು. ಕೆ.ವಿ.ಜಿ. ಪಾಲಿಟೆಕ್ನಿಕ್ ಕಾಲೇಜಿನ ಪ್ರಾಂಶುಪಾಲರಾಗಿ ನೇಮಕಗೊಂಡಿರುವ ಬಾಲಕೃಷ್ಣ ಬೊಳ್ಳೂರನ್ನು ಸನ್ಮಾನಿಸಲಾಯಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.