ಶ್ರೀ ಹರಿಹರೇಶ್ವರ ದೇವಸ್ಥಾನದ ಅಭಿವೃದ್ಧಿಗೆ ದೇಣಿಗೆ

Advt_Headding_Middle
Advt_Headding_Middle

ಶ್ರೀ ಹರಿಹರೇಶ್ವರ ದೇವಾಲಯದ ಅಭಿವೃದ್ಧಿ ಕೆಲಸಗಳು ನಡೆಯುತ್ತಿದ್ದು ಇದರ ಪ್ರಯುಕ್ತ ದೇಗುಲದ ಅಭಿವೃದ್ಧಿಗೆ ಪಂಜ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರಭಾಕರ ಕಿರಿಭಾಗ ಮತ್ತು ಹರಿಹರೇಶ್ವರ ವ್ಯವಸ್ಥಾಪನಾ ಸಮಿತಿ ಸದಸ್ಯೆ ಉಷಾ ಪ್ರಭಾಕರ ದಂಪತಿಗಳು 50 ಸಾವಿರ ದೇಣಿಗೆ ನೀಡಿದರು.

ಕೃಷಿಕ ರಘುರಾಮ ಮತ್ತು ಗೀತಾ ರಘುರಾಮ ದಂಪತಿಗಳು ಒಂದು ಲಕ್ಷ ರೂ ಧನ ಸಹಾಯವನ್ನು ನೀಡಿದರು. ಐನೆಕಿದು ಸುಬ್ರಹ್ಮಣ್ಯ ಪ್ರಾ.ಕೃ. ಪ.ಸ.ಸಂಘದ ವತಿಯಿಂದ 50 ಸಾವಿರ ದೇಣಿಗೆ ನೀಡಿರುತ್ತಾರೆ.

ಈ ಸಂಧರ್ಭಗಳಲ್ಲಿ ಬ್ರಹ್ಮಕಲಶೋತ್ಸವ ಆರ್ಥಿಕ ಸಮಿತಿ ಅಧ್ಯಕ್ಷ ಭವಾನಿಶಂಕರ ಪಿಂಡಿಮನೆ, ವ್ಯವಸ್ಥಾಪನ ಸಮಿತಿ ಅಧ್ಯಕ್ಷ ರಾಮಕೃಷ್ಣ ಕುದ್ಕುಳಿ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಕಿಶೋರು ಕೂಜುಗೋಡು, ಅಭಿವೃದ್ಧಿ ಸಮಿತಿ ಅಧ್ಯಕ್ಷ ಸತೀಶ್ ಕೂಜುಗೋಡು, ವ್ಯವಸ್ಥಾಪನ ಸಮಿತಿ ಸದಸ್ಯ ಶೈಲೇಶ್ ಕಟ್ಟೆಮನೆ, ಶಿವರಾಮ ಕಜ್ಜೋಡಿ, ನಿತ್ಯಾನಂದ ಭೀಮಗುಳಿ, ಪ್ರಧಾನ ಕಾರ್ಯದರ್ಶಿ ನಾರಾಯಣ ಪುಳಿಕುಕ್ಕು, ಕೋಶಾಧಿಕಾರಿ ಜನಾರ್ಧನ ಗುಂಡಿಹಿತ್ಲು ಮೊದಲಾದವರು ಉಪಸ್ಥಿತರಿದ್ದರು.

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.