Breaking News

ಅಯ್ಯಪ್ಪ ಭಕ್ತರ ಹಕ್ಕೊತ್ತಾಯ ಜಾಥಾ, ನಾಮ ಜಪ ಯಾತ್ರೆ

Advt_Headding_Middle
Advt_Headding_Middle

ದಕ್ಷಿಣ ಭಾರತದ ಪ್ರಸಿದ್ಧ ಯಾತ್ರಾ ಸ್ಥಳವಾದ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವರ ಸನ್ನಿಧಿಗೆ ಮಹಿಳೆಯರ ಪ್ರವೇಶ ಕುರಿತಂತೆ ಸರ್ವೋಚ್ಛ ನ್ಯಾಯಾಲಯವು ನೀಡಿರುವ ತೀರ್ಪಿನ ಮರುಪರಿಶೀಲನೆ ಮಾಡುವ ಮೂಲಕ ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗದಂತೆ ನ್ಯಾಯ ಒದಗಿಸಿಕೊಡಬೇಕೆಂದು ತಾಲೂಕಿನ ಅಯ್ಯಪ್ಪ ಸ್ವಾಮಿ ಭಕ್ತರ ನೇತೃತ್ವದಲ್ಲಿ ಬೃಹತ್ ಹಕ್ಕೊತ್ತಾಯ ಮೆರವಣಿಗೆ ನಡೆಯಿತು.
ಸುಳ್ಯದ ಜ್ಯೋತಿ ವೃತ್ತದ ಬಳಿ ಯಿಂದ ಅಯ್ಯಪ್ಪ ಭಕ್ತರ ಮೆರವಣಿಗೆಯು ನಗರದ ಪ್ರಮುಖ ಬೀದಿಗಳಲ್ಲಿ ಸಾಗಿತು. ಈ ಸಂದರ್ಭದಲ್ಲಿ ತಾ.ಪಂ. ಅಧ್ಯಕ್ಷ ಚನಿಯ ಕಲ್ತಡ್ಕ, ಅಯ್ಯಪ್ಪ ಭಕ್ತ ಮಹಾಸಭಾದ ಆಧ್ಯಕ್ಷ ಪಿ.ಬಿ. ಸುಧಾಕರ ರೈ, ಸಂಚಾಲಕ ಸುರೇಶ್ ಕಣೆಮರಡ್ಕ, ಪ್ರದಾನ ಕಾರ್ಯದರ್ಶಿ ಮಹೇಶ್ ರೈ ಮೇನಾಲ, ರಾಮಕೃಷ್ಣ ಗೌಡ ಅಮೈ, ಸಂತೋಷ್ ಗುರುಸ್ವಾಮಿ, ಕೆಂಚಪ್ಪ ಗುರುಸ್ವಾಮಿ, ಪಧ್ಮನಾಭ ಗುರುಸ್ವಾಮಿ, ಶಿವಪ್ರಕಾಶ್ ಅಡ್ಪಂಗಾಯ, ಮಾಧವ ಶೇಗೋ, ಜಿ.ಪಂ. ಸದಸ್ಯ ಹರೀಶ್ ಕಂಜಿಪಿಲಿ, ತಾ.ಪಂ. ಸದಸ್ಯ ಅಶೋಕ್ ನೆಕ್ರಾಜೆ, ಪುಷ್ಪಾ ಮೇದಪ್ಪ, ಜಾಹ್ನವಿ ಕಾಂಚೋಡು, ಪ್ರಸಾದ್ ರೈ ಮೇನಾಲ, ಅವಿನ್ ಪಡ್ಡಂಬೈಲು, ಗುಣವತಿ ಕೊಲ್ಲತ್ತಡ್ಕ, ವೆಂಕಟ್ ವಳಲಂಬೆ, ವಿನುತಾ ಪಾತಿಕಲ್ಲು, ರಾಜಶೇಖರನ್, ಪ್ರಕಾಶ್ ಹೆಗ್ಡೆ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದಾರೆ.
ಮರವಣಿಗೆಯಲ್ಲಿ ಅಯ್ಯಪ್ಪ ನಾಮ ಜಪ ನಡೆಯಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.