ಸಂತ ಬ್ರಿಜಿದ್ ದೇವಾಲಯದಲ್ಲಿ ಜೀವನ್ ಜ್ಯೋತಿ ಶಿಬಿರ

Advt_Headding_Middle
Advt_Headding_Middle

ಸುಳ್ಯದ ಸಂತ ಬ್ರಿಜಿದ್ ದೇವಾಲಯದಲ್ಲಿ ಅ.೧೪ ರಿಂದ ೧೮ರ ವರೆಗೆ ಪುತ್ತೂರು ವಲಯದ ಚರ್ಚ್ ಅಧೀನಕ್ಕೆ ಒಳಪಡುವ ಹನ್ನೊಂದು ಚರ್ಚ್‌ಗಳ ಹತ್ತನೇ ತರಗತಿಯ ಮಕ್ಕಳಿಗೆ ನಾಲ್ಕು ದಿನಗಳ ಜೀವನ್ ಜ್ಯೋತಿ ವಸತಿ ಶಿಬಿರವನ್ನು ಸುಳ್ಯದ ಸಂತ ಬ್ರಿಜಿದ್ ದೇವಾಲಯವು ಪುತ್ತೂರು ವಲಯದ ಚರ್ಚ್ ಸಹಯೋಗದಲ್ಲಿ ಆಯೋಜಿದ್ದು ಇದರ ಉದ್ಘಾಟನಾ ಕಾರ್ಯಕ್ರಮವು ಅ.೧೪ರಂದು ನೆರವೇರಿತು. ರೆ| ಫಾ| ಅನಿಲ್ ಲೋಬೊ ಹಾಗೂ ಪ್ರಾರ್ಥನೆಯ ಮೂಲಕ ಆರಂಭಗೊಂಡ ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೆ| ಫಾ| ಆಲ್‌ಫ್ರೆಡ್‌ಜೆ ಪಿಂಟೋ ವಿಗಾರ್ ವಾರ್ ಪುತ್ತೂರು ವರಡೊ ವಹಿಸಿಕೊಂಡು ದೀಪವನ್ನು ಬೆಳಗಿಸಿ ಕಾರ್ಯಕ್ರಮಕ್ಕೆ ಶಿಬಿರಕ್ಕೆ ಚಾಲನೆ ನೀಡಿ ಶುಭಕೋರಿದರು. ಈ ಸಂದರ್ಭದಲ್ಲಿ ವೇದಿಕೆಯ ಮೇಲೆ ರೆ| ಫಾ| ರೊನಾಲ್ಡ್ ಪಿಂಟೊ ಶಿಬಿರ ಸಂಯೋಜಕರು, ರೆ| ಫಾ| ವಿನ್ಸೆಂಟ್ ಡಿ ಸೋಜಾಚಚ್ ಧರ್ಮಗುರುಗಳು ಸುಳ್ಯ, ಶ್ರೀ ಪ್ರಸನ್ನ ಪೀಟರ್ ಉಪಾಧ್ಯಕ್ಷರು ಚರ್ಚ್ ಪಾಲನ ಸಮಿತಿ ಸುಳ್ಯ, ಸಿ| ಬಿನೋಮ ಹಾಗೂ ಸಿ| ಜಾನೆಟ್ ಲೊಬೊ ಸುಪೀರಿಯರ್‍ಸ್‌ಕಾನ್ವೆಂಟ್ ಸುಳ್ಯ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಸಹಾಯಕ ಗುರುಗಳಾದ ರೆ| ಫಾ| ಪೌಲ್ ಡಿ ಸೋಜಾರವರು ತಮ್ಮ ವಿನೂತನ ಮ್ಯಾಜಿಕ್ ಶೋ ಮೂಲಕ ನಿರೂಪಿಸಿದರು. ಈ ಶಿಬಿರದಲ್ಲಿ ಪುತ್ತೂರು ವಲಯದ ೧೧ ಚರ್ಚ್‌ಗಳ ಮಕ್ಕಳು ಬಾಗವಹಿಸುತ್ತಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.