Breaking News

ಚಿತ್ತಕ್ಕೆ ದಾಸರಾಗಲು ಭಜನೆ ಮಾಧ್ಯಮ : ಒಡಿಯೂರು ಶ್ರೀ

Advt_Headding_Middle
Advt_Headding_Middle

ವಿತ್ತಕ್ಕೆ ದಾಸರಾಗುವ ಬದಲು ಚಿತ್ತಕ್ಕೆ ದಾಸರಾಗಬೇಕು ಚಿತ್ತಕ್ಕೆ ದಾಸರಾಗಲು ಭಜನೆ ಮಾಧ್ಯಮ ಎಂದು ಒಡಿಯೂರು ಶ್ರೀ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದ್ದಾರೆ. ಸುಳ್ಯ ತಾಲೂಕು ಭಜನಾ ಪರಿಷತ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಜನ ಜಾಗೃತಿ ವೇದಿಕೆ ಮತ್ತು ತಾಲೂಕಿನ ಸಮಸ್ತ ಭಜನಾ ಮಂಡಳಿಗಳ ಸಹಯೋಗದಲ್ಲಿ
ನಡೆದ ಭಜನೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಭಜನೆ ಸಾತ್ವಿಕ ಭಾವನ್ನು ಉದ್ದೀಪಿಸುತ್ತದೆ, ಬದುಕಿನಲ್ಲಿ ಆತ್ಮ ವಿಶ್ವಾಸ ವೃದ್ಧಿಸುತ್ತದೆ. ದೇವರೊಂದಿಗೆ ಭಕ್ತನ ಅನುಸಂದಾನಕ್ಕೆ ಕಲಿಯುಗದ ಅತ್ಯಂತ ಸರಳ ಮಾರ್ಗ ಭಜನೆ ಎಂದು ಒಡಿಯೂರು ಸ್ವಾಮೀಜಿ ಹೇಳಿದರು.
ಮುಖ್ಯ ಅತಿಥಿಗಳಾಗಿದ್ದ ಸವಣೂರು ವಿದಾರಶ್ಮಿ ವಿದ್ಯಾಲಯದ ಸಂಚಾಲಕ ಸವಣೂರು ಸೀತರಾಮ ರೈಯವರು, ಒಡೆದ ಮನಸ್ಸುಗಳನ್ನು ಒಂದು ಗೂಡಿಸುವ, ಸಮಸ್ತರನ್ನು ಸಂಘಟಿಸುವ ಕೆಲಸ ಭಜನೆಗಳಿಂದಾಗುತ್ತದೆ ಎಂದು ಹೇಳಿದರು. ಭಜಕರ ಸಂಘಟೆನೆಯಿಂದ ಸಮಾಜಕ್ಕೆ ಉತ್ತಮ ಸಂದೇಶ ಹೋಗುತ್ತದೆ ಎಂದು ಶಾರದಾಂಬ ದಸರ ಸೇವಾ ಟ್ರಸ್ಟ್ ಅಧ್ಯಕ್ಷ ನಾರಾಯಣ ಕೇಕಡ್ಕ ಹೇಳಿದರು.
ಸಮಾರಂಭದ ಅಧ್ಯಕ್ಷತೆಯನ್ನು ಸುಳ್ಯ ತಾಲೂಕು ಭಜನಾ ಪರಿಷತ್ ಅಧ್ಯಕ್ಷ ಶಿವಪ್ರಸಾದ್ ಆಲೆಟ್ಟಿ ವಹಿಸಿದ್ದರು. ಯುವ ಪೀಳಿಗೆಗೆ ಭಜನೆಯ ಬಗ್ಗೆ ಆಸಕ್ತಿ ಮೂಡಿಸಲು ಇಂತಹ ಭಜನೋತ್ಸವಗಳನ್ನು ಸಂಘಟಿಸಲಾಗುತ್ತದೆ ಎಂದು ಅವರು ಹೇಳಿದರು.
ಸುಳ್ಯ ತಾಲೂಕು ಭಜನಾ ಪರಿಷತ್ ಗೌರವಾಧ್ಯಕ್ಷ ವಿಶ್ವನಾಥ ರೈ ಅರ್ಗುಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಸಂತೋಷ್ ಕುಮಾರ್ ರೈ ಸ್ವಾಗತಿಸಿ, ಪ್ರಸ್ತಾವನೆ ಗೈದರು. ಭಜನೋತ್ಸವ ಸಮಿತಿ ಅಧ್ಯಕ್ಷ ಬಾಲಕೃಷ್ಣ ಪುತ್ಯ ವಂದಿಸಿದರು. ಬೂಡು ರಾಧಾಕೃಷ್ಣ ರೈ, ಯತೀಶ್ ರೈ ದುಗಲಡ್ಕ ಕಾರ್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.