Breaking News

ಬೀಡಿ ಕಾರ್ಮಿಕರ ಕನಿಷ್ಠ ಕೂಲಿ ಜಾರಿಗೆ ಆಗ್ರಹ- ಮಾಲಕರ ಶೋಷಣೆ ವಿರುದ್ಧ ಹೋರಾಟ : ರಮಣಿ

Advt_Headding_Middle
Advt_Headding_Middle

ಬೀಡಿ ಕಾರ್‍ಮಿಕರಿಗೆ ಕನಿಷ್ಠಕೂಲಿ ಜಾರಿ ಮಾಡಲು ಸರಕಾರ ಆದೇಶಿಸಿ ಅನೇಕ ತಿಂಗಳು ಕಳೆದಿವೆ. ಆದರೂ ಬೀಡಿ ಮಾಲಕರು ಅದನ್ನು ನೀಡದೆ ಶೋಷಣೆ ಮಾಡುತ್ತಿದ್ದಾರೆ. ಇದರ ವಿರುದ್ಧ ಕಾರ್ಮಿಕರು ಒಟ್ಟಾಗಿ ಹೋರಾಟ ನಡೆಸಿ, ನ್ಯಾಯ ಪಡೆದೇ ವಿರಮಿಸೋಣ ಎಂದು ಸೌತ್ ಕೆನರಾ ಬೀಡಿ ವರ್ಕರ್‍ಸ್ ಫೆಡರೇಶನ್ ಉಪಾಧ್ಯಕ್ಷೆ ರಮಣಿ ಮೂಡಬಿದಿರೆ ಹೇಳಿದರು.
ಅಕ್ಟೋಬರ್ ೨೩ ರಂದು ಮಂಗಳೂರಿನಲ್ಲಿ ನಡೆಯಲಿರುವ ಬೀಡಿ ಕಾರ್ಮಿಕರ ಅನಿರ್ಧಿಷ್ಟಾವಧಿ ಮುಷ್ಕರ ಮತ್ತು ಧರಣಿ ಸತ್ಯಾಗ್ರಹದ ಹಿನ್ನಲೆಯಲ್ಲಿ ಅ.೧೨ರಂದು ವಿವಿಧ ಸಂಘಟನೆಗಳ ನೇತೃತ್ವದಲ್ಲಿ ನಡೆದ ಪ್ರಚಾರ ಜಾಥಾ ಉದ್ದೇಶಿಸಿ ಅವರು ಮಾತನಾಡಿದರು. ಕನಿಷ್ಠ ಕೂಲಿ ಕಾಯ್ದೆ ಅಡಿಯಲ್ಲಿ ೨೦೧೮ ರ ಎಪ್ರಿಲ್ ೧ ರಿಂದ ಸಾವಿರ ಬೀಡಿಗೆ ೨೧೦ ರೂ. ನೀಡುವುದಕ್ಕೆ ಘೋಷಣೆ ಹೊರಡಿಸಲಾಗಿತ್ತು. ಇದಕ್ಕೆ ಮಾಲಕರು ಒಪ್ಪಿಗೆ ಸೂಚಿಸಿದ್ದರು. ಆದರೆ ಅದನ್ನು ಇನ್ನೂ ನೀಡಿಲ್ಲ. ಜತೆಗೆ ೨೦೧೫ ಎಪ್ರಿಲ್ ೧ ರಿಂದ ನೀಡಬೇಕಾದ ತುಟ್ಟಿಭತ್ಯೆ ಕೂಡ ಸಿಕ್ಕಿಲ್ಲ. ಇಂತಹ ಕಾರ್‍ಮಿಕ ವಿರೋಧಿ ನೀತಿ ವಿರುದ್ಧ ಪ್ರಬಲ ಹೋರಾಟವೇ ಕಾರ್‍ಮಿಕರಿಗೆ ಉಳಿದಿರುವ ಏಕೈಕ ದಾರಿ ಎಂದು. ಎಲ್ಲ ರಾಜಕೀಯ ಪಕ್ಷಗಳು ನಮ್ಮನ್ನ ವೋಟ್ ಬ್ಯಾಂಕ್ ಆಗಿ ಮಾತ್ರ ಬಳಸಿವೆ. ನಮ್ಮ ಕಷ್ಟ ಕೇಳುವವರೇ ಇಲ್ಲ. ಹೀಗಾಗಿ ಕೆಂಬಾವುಟದ ಅಡಿಯಲ್ಲಿ ನಾವು ಒಗ್ಗೂಡಿ ನಮ್ಮ ಹಕ್ಕುಗಳಿಗೆ ನಾವು ಧ್ವನಿ ಎತ್ತಬೇಕಿದೆ. ದಿನ ನಿತ್ಯದ ಅವಶ್ಯಕ ಸಾಮಗ್ರಿ ಬೆಲೆ ಗಗನಕ್ಕೇರಿದ್ದು, ಬೀಡಿ ನಂಬಿ ಜೀವನ ನಿರ್ವಹಿಸುವ ಕುಟುಂಬಗಳು ಬೀದಿಗೆ ಬಿದ್ದಿವೆ ಎಂದು ಅವರು ಹೇಳಿದರು.
ಜಿಲ್ಲಾ ಬೀಡಿ ಫೆಡರೇಶನ್ ರಾಜ್ಯಾಧ್ಯಕ್ಷರಾದ ಜೆ.ಬಾಲಕೃಷ್ಣ ಶೆಟ್ಟಿಯವರು ಮಾತನಾಡಿ ಜಿಲ್ಲೆಯಲ್ಲಿ ಲಕ್ಷಾಂತರ ಕುಟುಂಬಗಳಿ ಬೀಡಿಕಟ್ಟುತ್ತಿದ್ದಾರೆ. ಜಿಲ್ಲೆಯ ಅಭಿವೃದ್ಧಿಗೆ ಕಾರ್ಮಿಕರ ಪರಿಶ್ರಮ ಸೇರಿದೆ. ಅದಕ್ಕೆ ಕಾರಣಕರ್ತರಾದ ಕಾರ್ಮಿಕರು ಬಡತನದಲ್ಲಿಯೇ ಇದ್ದಾರೆ. ಅವರ ದುಡಿತಕ್ಕೆ ಸರಿಯಾದ ನ್ಯಾಯ ಸಿಗುತ್ತಿಲ್ಲ. ಎಂದ ಅವರು ೧೦೦ ವರ್ಷಕ್ಕೂ ಮೇಲ್ಪಟ್ಟ ಹೋರಾಟದ ಇತಿಹಾಸವಿರುವ ಕೈಗಾರಿಕೆ. ಕಾರ್ಮಿಕರಿಗೆ ಯಾವುದೇ ಸೌಲಭ್ಯಗಳನ್ನು ಪುಕ್ಕಟೆ ಮಾಲಿಕರು ನೀಡಿರುವುದಿಲ್ಲ. ಎಲ್ಲವನ್ನೂ ಹೋರಾಟದಿಂದಲೇ ಪಡೆದುಕೊಂಡಿರುವುದು. ಹೋರಾಟದಿಂದ ಮಾತ್ರ ಯಾವುದೇ ಸೌಲಭ್ಯಗಳನ್ನು ಪಡೆಯಲು ಸಾಧ್ಯವೆಂದ ಅವರು ೨೩ ರಿಂದ ಮಂಗಳೂರಿನಲ್ಲಿ ನಡೆಯುವ ಬೀಡಿ ಕಾರ್‍ಮಿಕರ ಅನಿರ್ಧಿಷ್ಠಾವಧಿ ಧರಣಿ ಸತ್ಯಾಗ್ರಹ ಪ್ರತಿಭಟನೆಯನ್ನು ಯಶಸ್ವಿಗೊಳಿಸಲು ಕರೆ ನೀಡಿದರು. ಜಿಲ್ಲಾ ಬೀಡಿ ಫೆಡರೇಶನ್ ಅಧ್ಯಕ್ಷರಾದ ವಸಂತ ಆಚಾರಿ, ಜಿಲ್ಲಾ ಬೀಡಿ ಉಪಾಧ್ಯಕ್ಷರಾದ ಸದಾಶಿವ ದಾಸ್, ರಾಮಣ್ಣ ವಿಟ್ಲ, ಪದ್ಮಾವತಿ ಶೆಟ್ಟಿ, ಜಯಂತಿ ಬಿ. ಶೆಟ್ಟಿ, ಭಾರತಿ ಬೋಳಾರ್, ಎ.ಐ.ಟಿ.ಯು.ಸಿ ಯ ಪದಾಧಿಕಾರಿ ಬಿ. ಶೇಖರ, ಕರುಣಾಕರ, ಸುರೇಶ್ ಕುಮಾರ್, ಭಾರತಿ, ಸುಳ್ಯ ತಾಲೂಕು ಸಮಿತಿಯ ಪದಾಧಿಕಾರಿಗಳಾದ ಜಯಲಕ್ಷ್ಮಿ, ಗೀತಾ ಕೆ., ಸುಂದರ ಜಯನಗರ, ತಾಹಿರಾ ಪಿ., ರಾಜೀವಿ, ದುರ್ಗಾವತಿ, ವಿಶಾಲಾಕ್ಷಿ ಅಜ್ಜಾವರ, ಮೀನಾಕ್ಷಿ, ಶೋಭಾ ಮೈತಡ್ಕ, ಸುಮತಿ ಮರ್ಕಂಜ, ಪುಷ್ಪಾ ಪೈಲಾರ್, ಲಲಿತ ಕಲ್ಮಡ್ಕ, ಮೀನಾಕ್ಷಿ ಜಯನಗರ ಮುಂತಾದವರು ಉಪಸ್ಥತರಿದ್ದರು. ಪ್ರ.ಕಾರ್ಯದರ್ಶಿ ರಾಬರ್ಟ್‌ಡಿಸೋಜಾ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಉಪಾಧ್ಯಕ್ಷೆ ಜಯಲಕ್ಷ್ಮಿ ವಂದಿಸಿದರು. ಜ್ಯೋತಿ ವೃತ್ತದಿಂದ ಹೊರಟ ಮೆರವಣಿಗೆಯಲ್ಲಿ ನೂರಾರು ಕಾರ್‍ಮಿಕರು ಭಾಗವಹಿಸಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.