ಸುಳ್ಯದಲ್ಲಿ ಕಾರಿಗೆ ಗುದ್ದಿ ಪರಾರಿಯಾದ ಪಿಕಪ್ ಬಳ್ಳಡ್ಕದಲ್ಲಿ ಕಮರಿಗೆ- ಚಾಲಕ ಪರಾರಿ, ಕೇಸು ದಾಖಲು

Advt_Headding_Middle
Advt_Headding_Middle

ಸುಳ್ಯದ ಕೆವಿಜಿ ಆಯುರ್ವೇದ ಕಾಲೇಜು ಬಳಿ ಪಿಕಪ್ ಓಮ್ನಿ ಕಾರೊಂದಕ್ಕೆ ಢಿಕ್ಕಿ ಹೊಡೆದು ಪರಾರಿಯಾಗಿ ಉಬರಡ್ಕ ಮಿತ್ತೂರು ಗ್ರಾಮದ ಬಳ್ಳಡ್ಕ ತಿರುವಿನಲ್ಲಿ ಕಮರಿಗೆ ಬಿದ್ದು, ಚಾಲಕ ಪರಾರಿಯಾದ ಘಟನೆ ಅ. ೧೫ರಂದು ರಾತ್ರಿ ವರದಿಯಾಗಿದೆ.
ಅ. ೧೫ರಂದು ರಾತ್ರಿ ಚೆನ್ನಕೇಶವ ದೇವಸ್ಥಾನದ ಬಳಿ ಬರುತ್ತಿದ್ದ ಪಿಕಪ್ ಸುಳ್ಯದಿಂದ ಅಜ್ಜಾವರ ಕಡೆಗೆ ಹೋಗುತ್ತಿದ್ದ ಓಮ್ನಿಗೆ ಢಿಕ್ಕಿ ಹೊಡೆಯಿತು. ಢಿಕ್ಕಿ ಹೊಡೆದ ಪಿಕಪ್ ಚಾಲಕ ಪಿಕಪನ್ನು ನಿಲ್ಲಿಸದೆ ಹೋದನೆನ್ನಲಾಗಿದೆ. ಓಮ್ನಿಯ ಹಿಂದೆ ಬರುತ್ತಿದ್ದ ಬೈಕ್ ಸವಾರರೊಬ್ಬರು ಓಮ್ನಿಯಲ್ಲಿದ್ದ ಚಾಲಕನನ್ನು ತಮ್ಮ ಜೊತೆ ಕೂರಿಸಿಕೊಂಡು ಪಿಕಪ್‌ನ್ನು ತಡೆಯಲು ಹೋಗಿದ್ದು, ಅತೀ ವೇಗದಲ್ಲಿ ಹೋದ ಪಿಕಪ್ ಬಳ್ಳಡ್ಕ ತಿರುವಿನಲ್ಲಿ ನಿಯಂತ್ರಣ ತಪ್ಪಿ ಕಮರಿಗೆ ಮಗುಚಿತು. ಚಾಲಕ ಅಲ್ಲಿಂದ ಪರಾರಿಯಾದನೆನ್ನಲಾಗಿದೆ. ಬಳಿಕ ಅಲ್ಲಿ ಸೇರಿದ ಊರವರು ಸ್ಟಾರ್ಟ್‌ನಲ್ಲೇ ಇದ್ದ ಪಿಕಪ್‌ನ್ನು ಆಫ್ ಮಾಡಿದರು. ಬಳಿಕ ಪೊಲೀಸರು ಆಗಮಿಸಿ ಪರಿಶೀಲಿಸಿದಾಗ ದಾಖಲೆ ಪತ್ರಗಳು ವಾಹನದಲ್ಲಿರಲಿಲ್ಲ. ಓಮ್ನಿಯವರು ಸುಳ್ಯ ಪೊಲೀಸರಿಗೆ ದೂರು ನೀಡಿದ್ದಾರೆಂದು ತಿಳಿದು ಬಂದಿದೆ. ಮರ್ಕಂಜದ ಮೇಲಡ್ತಲೆ ಶಿವ ಎಂಬವರಿಗೆ ಸೇರಿದ ಪಿಕಪ್ ಎನ್ನಲಾಗುತ್ತಿದ್ದು, ಚಾಲಕನ ಅಜಾಗರೂಕತೆಯೇ ಘಟನೆಗೆ ಕಾರಣ ಎನ್ನಲಾಗಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.