Breaking News

ಕನಕಮಜಲು: ಸೋಲಾರ್ ದಾರಿ ದೀಪದ ಬ್ಯಾಟರಿ ಕಳವು

Advt_Headding_Middle
Advt_Headding_Middle

ಕನಕಮಜಲು ಗ್ರಾಮ ಪಂಚಾಯತಿ ವತಿಯಿಂದ ಕನಕಮಜಲು ಗ್ರಾಮದ ಸುಣ್ಣಮೂಲೆ ಎಂಬಲ್ಲಿ ಇತ್ತೀಚೆಗೆ ಅಳವಡಿಸಿದ್ದ ಸೋಲಾರ್ ದಾರಿ ದೀಪದ ಬ್ಯಾಟರಿಯನ್ನು ಕಿಡಿಗೇಡಿಗಳು ಕಳವು ಮಾಡಿರುವ ಘಟನೆ ಅ.11ರಂದು ರಾತ್ರಿ ಸಂಭವಿಸಿದೆ.

ಅ.12ರಂದು ಸ್ಥಳೀಯ ನಿವಾಸಿಗಳು ದಾರಿ ದೀಪದಲ್ಲಿ ಲೈಟ್ ಉರಿಯದಿರುವುದನ್ನು ಗಮನಿಸಿದಾಗ ಬ್ಯಾಟರಿ ಕಳವಾದ ವಿಷಯ ತಿಳಿಯಿತು. ಗಾಂಧಿ ಗ್ರಾಮ ಪುರಸ್ಕಾರ ಯೋಜನೆಯಡಿಯಲ್ಲಿ ಕನಕಮಜಲು ಗ್ರಾಮ ಪಂಚಾಯತ್ ವತಿಯಿಂದ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಒಟ್ಟು 13 ಸೋಲಾರ್ ದಾರಿ ದೀಪ ಅಳವಡಿಸಲಾಗಿತ್ತು. ಸುಮಾರು 20 ಸಾವಿರಕ್ಕಿಂತ ಅಧಿಕ ಮೌಲ್ಯದ ಬ್ಯಾಟರಿಯನ್ನು ಇದೀಗ ಕಿಡಿಗೇಡಿಗಳು ಕಳವುಗೈದಿದ್ದಾರೆ. ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣದ ಕುರಿತು ಗ್ರಾಮ ಪಂಚಾಯತ್ ವತಿಯಿಂದ ದೂರು ದಾಖಲಾಗಿದೆ ಎಂದು ತಿಳಿದುಬಂದಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.