ಕೆ .ವಿ. ಜಿ. ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಿಂದ ಉಚಿತ ವೈದ್ಯಕೀಯ ತಪಾಸಣಾ ಶಿಬಿರ

Advt_Headding_Middle
Advt_Headding_Middle

ಕೆ .ವಿ. ಜಿ. ಮೆಡಿಕಲ್ ಕಾಲೇಜು ಮತ್ತುಆಸ್ಪತ್ರೆ ಸುಳ್ಯ, ಸಮಾಜಕಾರ್ಯ ವಿಭಾಗ ನೆಹರು ಮೆಮೋರಿಯಲ್ ಕಾಲೇಜು ಸುಳ್ಯ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಯೋಜನೆ ಮಂಡೆಕೋಲು,ಸುಳ್ಯ ಇವರ ಸಹಯೋಗದೊಂದಿಗೆ ಮಂಡೆಕೋಲು ಸರಕಾರಿ ಹಿರಿಯ ಪ್ರಾಧಮಿಕ ಶಾಲೆಯಲ್ಲಿಉಚಿತ ಆರೋಗ್ಯ ಶಿಬಿರವನ್ನು ಅ. 14ರಂದು ಹಮ್ಮಿಕೊಳ್ಳಲಾಯಿತು.


ಶಿಬಿರವನ್ನು ಮಂಡೆಕೋಲು ಜನಜಾಗೃತಿ ವೇದಿಕೆ ಉಪಾಧ್ಯಕ್ಷ ಸುರೇಶ್ ಕಣೆಮರಡ್ಕರವರು ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕೆ .ವಿ. ಜಿ. ಮೆಡಿಕಲ್‌ಕಾಲೇಜು ಸುಳ್ಯ ಸಹಾಯಕ ಪ್ರಾಧ್ಯಪಕ ಡಾ.ಐಶ್ವರ್ಯರ ವರು ಕೆ .ವಿ. ಜಿ. ಮೆಡಿಕಲ್‌ಕಾಲೇಜು ಮತ್ತುಆಸ್ಪತ್ರೆಯಲ್ಲಿ ದೊರೆಯುವ ಸೌಲಭ್ಯ ಮತ್ತು ಸೇವೆಗಳು ಹಾಗೂ ಗ್ರಾಮೀಣ ಪ್ರದೇಶದಲ್ಲಿಆರೋಗ್ಯ ಶಿಬಿರಗಳ ಮಹತ್ವವನ್ನು ತಿಳಿಸಿದರು. ಮಂಡೆಕೋಲು ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ಮೋಹಿನಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಮಂಡೆಕೋಲು ಹಿ.ಪ್ರಾ.ಶಾಲೆಯ ಎಸ್.ಡಿ.ಎಂ.ಸಿ. ಅದ್ಯಕ್ಷ ಶ್ರೀಧರ ಕಣೆಮರಡ್ಕ , ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮಂಡೆಕೋಲು ಮುಖ್ಯಸ್ಥರಾದ ಶ್ರೀಮತಿ ವನಜಾಕ್ಷಿ, ಸಮಾಜ ಕಾರ್ಯ ವಿಭಾಗದ ಮುಖ್ಯಸ್ಥೆ ಶ್ರೀಮತಿ ಮಧುರ, ಅಬ್ದುಲ್ ರಶೀದ್, ಹೇಮಂತ್‌ಉಪನ್ಯಾಸಕರು, ಕೆ .ವಿ. ಜಿ. ಮೆಡಿಕಲ್‌ಕಾಲೇಜು ಮತ್ತುಆಸ್ಪತ್ರೆಯ ಸಾರ್ವಜನಿಕ ಸಂಪರ್ಕ ಅಧಿಕಾರಿಗಳಾದ ಉಮೇಶ್ ಕೆ., ಶಶಿಧರ್ ಎ.ಪಿ. ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಶಿಬಿರದಲ್ಲಿ ಜನರಲ್ ಮೆಡಿಸಿನ್‌ವಿಭಾಗ ,ಮೂಳೆ ಮತ್ತು ಕೀಲು ಗಂಟು ವಿಭಾಗ, ಶಸ್ತ್ರಚಿಕಿತ್ಸ ವಿಭಾಗ, ಚರ್ಮರೋಗ ವಿಭಾಗ, ಕಿವಿ. ಮೂಗು, ಗಂಟಲು ವಿಭಾಗ, ಸ್ತ್ರೀರೋಗ ವಿಭಾಗ ಮತ್ತು ಮಕ್ಕಳ ವಿಭಾಗದ ತಜ್ಞ ವೈದ್ಯರುಗಳಿಂದ ತಪಾಸಣೆ ನೀಡಲಾಯಿತು. ಶಿಬಿರದಲ್ಲಿ ಮಧುಮೇಹ ತಪಾಸಣೆ, ಇಸಿಜಿ ಹಾಗು ಜೌಷಧಿಗಳನ್ನು ಉಚಿತವಾಗಿ ನೀಡಲಾಯಿತು. ಹಲವಾರು ಗ್ರಾಮೀಣ ಜನರು ಈ ಕಾರ್ಯಕ್ರಮದ ಸದುಪಯೋಗ ಪಡೆದುಕೊಂಡರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.