ಸುಬ್ರಹ್ಮಣ್ಯ ಜೇಸಿ ರವಿ ಕಕ್ಕೆಪದವುರವರಿಂದ ಮನೆ ನಿವೇಶನ ಕೊಡುಗೆ

Advt_Headding_Middle
Advt_Headding_Middle

ಸುಬ್ರಹ್ಮಣ್ಯದ ಯುವ ಉದ್ಯಮಿ, ಆರ್ಯಭಟ ಪ್ರಶಸ್ತಿ, ಜೇಸಿ ಟೊಭಿಫ್ ರಾಷ್ಟೀಯ ಪ್ರಶಸ್ತಿ ಪುರಸ್ಕೃತ ರವಿ ಕಕ್ಕೆಪದವುರವರು ಸುಮಾರು ಎಂಟು ವರ್ಷಗಳಿಂದ ಸುಬ್ರಹ್ಮಣ್ಯದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಕೂಲಿ ಕಾರ್ಮಿಕ ಸಂಪಾಜೆಯ ವಿಜಯ ಗೌಡರಿಗೆ ಮನೆ ನಿರ್ಮಿಸಲು 3 ಸೆಂಟ್ಸ್ ಜಾಗ ಕೊಡುಗೆಯಾಗಿ ನೀಡಿರುತ್ತಾರೆ. ಜೇಸಿ ವಲಯಾಧ್ಯಕ್ಷ ರಾಕೇಶ್ ಕುಂಜೂರುರವರು ಸುಬ್ರಹ್ಮಣ್ಯಕ್ಕೆ ಅಧಿಕೃತ ಭೇಟಿನೀಡಿದ ದಿವಸ ಅವರ ಕೈಯಲ್ಲೇ ಹಕ್ಕುಪತ್ರ ಹಸ್ತಾಂತರಿಸಿದರು.

ರವಿ ಕಕ್ಕೆಪದವುರವರು ಈವರೆಗೆ 11 ನಿವೇಶನಗಳನ್ನು ದಾನ ಮಾಡಿ ಮನೆ ನಿರ್ಮಿಸಿಕೊಟ್ಟು ಮಾನವೀಯತೆ ಮೆರೆದಿದ್ದಾರೆ. ಅವರ ಈ ಸಮಾಜ‌ಕಾರ್ಯಕ್ಕಾಗಿ ನೂರಾರು ಪ್ರಶಸ್ತಿ ಪುರಸ್ಕಾರಗಳನ್ನು ಪಡೆದಿರುತ್ತಾರೆ.

ಈ ಸಂದರ್ಭದಲ್ಲಿ ಸುಬ್ರಹ್ಮಣ್ಯ ಜೇಸಿ ಅಧ್ಯಕ್ಷ ಮೋನಪ್ಪ‌ ಕೆ, ಜೇಸಿ ವಲಯಾಧಿಕಾರಿ ಶ್ರೀನಿವಾಸ ಐತಾಲ್, ಚಂದ್ರಶೇಖರ ಕುಲ್ಕುಂದ ಮತ್ತು ಶ್ರೀಮತಿ ಸೌಮ್ಯ ರಾಕೇಶ್ ಕುಂಜೂರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.