HomePage_Banner
HomePage_Banner

ಬಾಳಿಲ ಶಾರದೋತ್ಸವ: ಶ್ರೀ ಹರ್ಷ ನೆಟ್ಟಾರುರವರಿಗೆ ಶಾರದೋತ್ಸವ ಪ್ರಶಸ್ತಿ ಪ್ರದಾನ

ಸಾರ್ವಜನಿಕ ಶ್ರೀ ದೇವತಾರಾಧನ ಸಮಿತಿ ಬಾಳಿಲ ಮುಪ್ಪೇರ್ಯ ಇದರ ಆಶ್ರಯದಲ್ಲಿ 14 ನೇ ವರ್ಷದ ಸಾರ್ವಜನಿಕ‌ ಶ್ರೀ ಶಾರದೋತ್ಸವ ಅ. 17, 18ರಂದು ನಡೆಯಿತು. ಅ. 17ರಂದು ಬೆಳಿಗ್ಗೆ ಬಾಳಿಲ ಗ್ರಾ.ಪಂ. ಅಧ್ಯಕ್ಷ ಕೃಷ್ಣಪ್ಪ ಪೂಜಾರಿಯವರ ಅಧ್ಯಕ್ಷತೆಯಲ್ಲಿ ಶ್ರೀಮತಿ ಪಿ.ಜಿ. ಸಾವಿತ್ರಿ ಕಾರ್ಯಕ್ರಮ ಉದ್ಘಾಟಿಸಿದರು.

ಬಳಿಕ ಪುರುಷರಿಗೆ, ಮಹಿಳೆಯರಿಗೆ ಹಾಗೂ ಮಕ್ಕಳಿಗೆ ವಿವಿಧ ಕ್ರೀಡಾ ಸ್ಪರ್ಧೆಗಳು ನಡೆಯಿತು. ಸಂಜೆ ನಡೆದ ಶ್ರೀ ಶಾರದೋತ್ಸವ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಮಿತಿಯ ಗೌರವಾಧ್ಯಕ್ಷ ಯು. ರಾಧಾಕೃಷ್ಣ ರಾವ್ ವಹಿಸಿದ್ದರು. ಶ್ರೀ ಶಾರದೋತ್ಸವ ಪ್ರಶಸ್ತಿಯನ್ನು ಸೀನಿಯರ್ ಸೂಪರಿಂಟೆಂಡೆಂಟ್ ಆಫ್ ಪೋಸ್ಟಲ್ ಮಧುರೈ, ತಮಿಳುನಾಡು ಐ.ಎ.ಎಸ್. ಅಧಿಕಾರಿ ಶ್ರೀಹರ್ಷ ನೆಟ್ಟಾರುರವರಿಗೆ ನೀಡಲಾಯಿತು.

ಮುಖ್ಯ ಅತಿಥಿಗಳಾಗಿ ನಿವೃತ್ತ ಸೀನಿಯರ್ ಟೆಲಿಕಾಂ ಸೂಪರಿಂಟೆಂಡೆಂಟ್ ಎ.ಕೆ. ನಾಯ್ಕ, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ‌ ಸಮಿತಿ ಸದಸ್ಯೆ ಶ್ರೀಮತಿ ರಾಜೀವಿ ಆರ್.ರೈ, ದೆಹಲಿ‌ ಕನ್ನಡ ಸಂಘದ ಅಧ್ಯಕ್ಷ ವಸಂತ ಶೆಟ್ಟಿ ಬೆಳ್ಳಾರೆ, ಭಾರತೀ‌ಶಂಕರ್ ಆದಾಳ, ಯಕ್ಷಗಾನ‌ ಅರ್ಥದಾರಿ ರಾಮ ಜೋಯಿಸ ಬೆಳ್ಳಾರೆ ಭಾಗವಹಿಸಿದ್ದರು. ಸಮಿತಿಯ ಅಧ್ಯಕ್ಷ ರೋಹಿತ್ ಚಾಕೊಟೆಡ್ಕ, ಕಾರ್ಯದರ್ಶಿ ನಾಗೇಶ್ ಎನ್.ಕೆ, ಮಹಿಳಾ‌ ಸಮಿತಿ ಅಧ್ಯಕ್ಷೆ ವೇದಾವತಿ ಸಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಲೋಕೇಶ್ ಬೆಳ್ಳಿಗೆ ಸನ್ಮಾನಿತರನ್ನು ಪರಿಚಯಿಸಿದರು. ಸಮಿತಿಯ ಕಾರ್ಯಾಧ್ಯಕ್ಷ ಸುಧಾಕರ ರೈ ಎ.ಎಂ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ರಾಜೇಶ್ ಬಾಳಿಲ ಕಾರ್ಯಕ್ರಮ ನಿರೂಪಿಸಿದರು. ರಾಜೇಶ್ ಗೌಡ ಎ. ವಂದಿಸಿದರು. ಸಭಾ ಕಾರ್ಯಕ್ರಮದ ಬಳಿಕ ಜಿಲ್ಲೆಯ ಪ್ರಸಿದ್ಧ ಕಾಲಾವಿದರ ಕೂಡುವಿಕೆಯಲ್ಲಿ ಯಕ್ಷಗಾನ ಬಯಲಾಟ ದಕ್ಷಾಧ್ವರ ನಡೆಯಲಿದೆ.

Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.