Breaking News

ವಿ.ಪ.ಸದಸ್ಯ ಬಿ.ಎಂ.ಫಾರೂಕ್ ನಿಧಿಯಿಂದ ನೆರವು

Advt_Headding_Middle
Advt_Headding_Middle

ವಿಧಾನ ಪರಿಷತ ಸದಸ್ಯ ಬಿ.ಎಂ.ಫಾರೂಕ್‌ರವರು ಸರಕಾರದಿಂದ ತನಗೆ ಬರುವ ಮಾಸಿಕ ಗೌರವಧನದಲ್ಲಿ 3.9೦ ಲಕ್ಷ ರೂ.ಗಳನ್ನು ಕಿಡ್ನಿ, ಕ್ಯಾನ್ಸರ್ ಮತ್ತಿತರ ಖಾಯಿಲೆಗಳಲ್ಲಿ ಬಳಲುತ್ತಿರುವ ರೋಗಿಗಳಿಗೆ ದಾನ ಮಾಡಿದ್ದು, ಅದರಲ್ಲಿ 1.25 ಲಕ್ಷ ರೂ.ಗಳ ನೆರವನ್ನು ಸುಳ್ಯ ತಾಲೂಕಿವರಿಗೆ ನೀಡಿದ್ದಾರೆ. ಅ. 14ರಂದು ಮಂಗಳೂರಿಗೆ ಬಂದಿದ್ದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ಶಾಸಕರ ಕಚೇರಿ ಉದ್ಘಾಟನೆಗೊಳಿಸಿ ಈ ನೆರವು ವಿತರಿಸಿದರು.


ಸುಳ್ಯ ತಾಲೂಕಿನ ಸುಮಾರು 15  ಮಂದಿ ರೋಗಿಗಳಿಗೆ ತಲಾ 15 ಸಾವಿರ ಮತ್ತು 10 ಸಾವಿರ ರೂ.ಗಳ ನೆರವು ನೀಡಿರುವುದಾಗಿ ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಎಂ.ಬಿ.ಸದಾಶಿವರವರು ತಿಳಿಸಿದ್ದಾರೆ.
ಮುಖ್ಯದ ವಿದ್ಯಾಶ್ರೀಗೆ ನೆರವು: ಅಜ್ಜಾವರ ಮುಳ್ಯದ ವಿದ್ಯಾರ್ಥಿನಿ ವಿದ್ಯಾಶ್ರೀ ಮೆದುಳಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಎಂ.ಬಿ.ಸದಾಶಿರವರ ಕೋರಿಕೆಯ ಮೇರೆಗೆ ಮುಖ್ಯನಮಂತ್ರಿಗಳು ೧.೫ ಲಕ್ಷ ರೂ.ಗಳನ್ನು ಮಂಜೂರುಗೊಳಿಸಿದರು. ಅದರೊಂದಿಗೆ ತನ್ನ ಎರಡೂ ಕಾಲುಗಳ ಬಲ ಕಳೆದುಕೊಂಡಿರುವ ಸುಳ್ಯ ಜಯನಗರದ ಪ್ರೇಮ್‌ಕುಮಾರ್ ಹಾಗೂ ಕಲ್ಮಕಾರಿನ ಕು.ಶ್ವೇತಾ ಎಂಬವರನ್ನು ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿಗೆ ಕರೆತರುವಂತೆ ಮುಖ್ಯಮಂತ್ರಿಗಳು ಎಂ.ಬಿ.ಸದಾಶಿವರಿಗೆ ಸೂಚಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.