HomePage_Banner
HomePage_Banner

ಐವರ್ನಾಡು : ಬೈಕ್ ಗುದ್ದಿ ಮಹಿಳೆ ಗಂಭೀರ – ವರದಿ ತಿದ್ದುಪಡಿ ಮಾಡಿದ ನಂತರವೂ ಅವಾಚ್ಯ ಸಂದೇಶಗಳ ರವಾನಿಸುವವರಿಗೆ ತಿಳುವಳಿಕೆ, ಓದುಗರಿಗೆ ಸ್ಪಷ್ಠೀಕರಣ

ಈ ಮೇಲಿನ ವರದಿಯಲ್ಲಿ ಆಶಿತ್ ಕಲ್ಲಾಜೆ ಎಂಬವರ ಹೆಸರು ಮೊದಲು ಪ್ರಕಟಗೊಂಡಿದ್ದರೂ ಅದು ತಪ್ಪು ಎಂದು ತಿಳಿದುಬಂದ ಕೂಡಲೇ ಸರಿಯಾದ ಹೆಸರು ಹಾಕಲಾಗಿದೆ. ತಿದ್ದುಪಡಿಯನ್ನು ಮಾಡಲಾಗಿದೆ. ವರದಿಗಳಲ್ಲಿ ಅಂತಹ ತಪ್ಪುಗಳು ಆಗುವುದು ಮತ್ತು ಅದನ್ನು ತಿದ್ದುಪಡಿ ಮಾಡುವುದು ಎಲ್ಲಾ ಮಾಧ್ಯಮಗಳಲ್ಲಿರುತ್ತದೆ. ಅಂತಹ ಸಂದರ್ಭದಲ್ಲಿ ತಿದ್ದುಪಡಿ ಮಾಡದೇ ಇದ್ದರೆ ಕೆಲವರು ಅದಕ್ಕೆ ಪ್ರತಿಕ್ರಿಯೆ ನೀಡುತ್ತಾರೆ. ಅದು ಟೀಕಿಸುವ ಉದ್ದೇಶದಿಂದ ಆಗಿದ್ದರೂ ಸರಿಪಡಿಸುವ ಉದ್ದೇಶದಿಂದ ಆಗಿದ್ದರೂ ನಾಗರೀಕರು ಅದಕ್ಕೆ ನೀಡುವ ಪ್ರತಿಕ್ರಿಯೆ ಹೇಗಿರುತ್ತದೆ ಎಂಬುದನ್ನು ಓದುಗರು ಅರ್ಥಮಾಡಿಕೊಂಡಿರುತ್ತಾರೆ. ಆ ತಿದ್ದುಪಡಿಯ ವರದಿ ಪ್ರಕಟಗೊಂಡ ನಂತರವೂ ಪಂಜದ ವರದಿಯ ಮೂಲವನ್ನು ವಿಚಾರಿಸದೇ (ಈ ಹಿಂದೆಯೂ ಪತ್ರಿಕೆಯನ್ನು ಮತ್ತು ಸಿಬ್ಬಂದಿಗಳ ಬಗ್ಗೆ ಅವಾಚ್ಯವಾಗಿ ಬರೆದಿರುವ) ಕೆಲವರು ಉದ್ದೇಶಪೂರ್ವಕವಾಗಿ ಕೀಳುಮಟ್ಟದ ಸಂದೇಶವನ್ನು ಕಳುಹಿಸಿದ್ದಾರೆ. (ಅವರ Facebook ಹಾಗೂ ಪುತ್ತೂರು ಪ್ರಚಲಿತ ಎಂಬ Whatsapp Groupನಲ್ಲಿ ನೋಡಬಹುದು) ಅವರ ಉದ್ದೇಶವನ್ನು, ಸಂಸ್ಕೃತಿಯನ್ನು ಮತ್ತು ವಸ್ತುಸ್ಥಿತಿಯನ್ನು ಅರ್ಥಮಾಡಿಕೊಳ್ಳಲಿಕ್ಕಾಗಿ ಓದುಗರಿಗಾಗಿ ಈ ಕೆಳಗಿನ ಸ್ಪಷ್ಟನೆ ನೀಡಲಾಗಿದೆ.

ಹರೀಶ್ ಬಂಟ್ವಾಳ್
ಪ್ರಧಾನ ವರದಿಗಾರರು, ಸುದ್ದಿ ಬಿಡುಗಡೆ ಸುಳ್ಯ

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.