Breaking News

ಭವಿಷ್ಯದ ಬದುಕಿಗೆ ವಿದ್ಯಾರ್ಥಿ ಜೀವನ ಅಡಿಪಾಯ – ಉಮೇಶ್ ಶೆಟ್ಟಿ

Advt_Headding_Middle
Advt_Headding_Middle

ಹರಿಹರದಲ್ಲಿ ಎನ್‌ಎಸ್ ಶಿಬಿರ

ವಿದ್ಯಾರ್ಥಿ ಜೀವನ ಬಹಳಷ್ಟು ಮುಖ್ಯ ಘಟ್ಟ. ಈ ಸಮಯದಲ್ಲಿ ಜವಾಬ್ದಾರಿ ಕಡಿಮೆ. ತದನಂತರದ ಜೀವನವನ್ನು ರೂಪಿಸಲು ವಿದ್ಯಾರ್ಥಿ ಜೀವನ ಅಡಿಪಾಯ ಎನ್ನುವುದನ್ನು ತಿಳಿತುಕೊಳ್ಳುವುದು ಅತ್ಯವಶ್ಯ ಎಂದು ಸುಬ್ರಹ್ಮಣ್ಯ ಶ್ರೀ ಕುಮಾರಸ್ವಾಮಿ ವಿದ್ಯಾಲಯದ ಶಿಕ್ಷಕ ಉಮೇಶ್ ಶೆಟ್ಟಿ ಹೇಳಿದರು. ಹರಿಹರ ಪಳ್ಳತ್ತಡ್ಕ ಶ್ರೀ ಹರಿಹರೇಶ್ವರ ದೇವಸ್ಥಾನದಲ್ಲಿ ಶ್ರೀ ಸುಬ್ರಹ್ಮಣ್ಯೇಶ್ವರ ಪದವಿಪೂರ್ವ ಕಾಲೇಜು ಇದರ ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ಶಿಬಿರದ ಪ್ರಯುಕ್ತ ಶನಿವಾರ ನಡೆದ ಮಾಹಿತಿ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು. ಎನ್ ಎಸ್ ಎಸ್ ಯೋಜನೆಯಿಂದ ಜೀವನದಲ್ಲಿ ಕಲಿಯುವಂತದು ಇದೆ ಎಂದರು.


ವೇದಿಕೆಯಲ್ಲಿ ಉಪಪ್ರಾಂಶುಪಾಲೆ ರೇಖರಾಣಿ. ಗ್ರಾ.ಪಂ ಸದಸ್ಯೆ ರತ್ಬಾವತಿ ನವಗ್ರಾಮ, ರೋಟರಿ ಅಧ್ಯಕ್ಷ ವಿಶ್ವನಾಥ ಎನ್.ಉಪನ್ಯಾಸಕಿ ಸೌಮ್ಯದಿನೇಶ್, ವಿದ್ಯಾರ್ಥಿ ನಾಯಕ ಕೌಶಿಕ್, ನಾಯಕಿ ಶಿಲ್ಪಾ ವೇದಿಕೆಯಲ್ಲಿದ್ದರು. ವಿದ್ಯಾರ್ಥಿಗಳಾದ ಜಸ್ಮಿತಾ, ವಿಶ್ವಾಸ್ ಸಹಕರಿಸಿದರು. ದಿನದ ನಾಯಕಿ ಭೂಮಿಕ ಕಾರ್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.