ಬೆಳ್ಳಾರೆಯಲ್ಲಿ ವಿಜೃಂಭಿಸಿದ 31 ನೇ ವರ್ಷದ ಶ್ರೀ ಶಾರದೋತ್ಸವ

Advt_Headding_Middle
Advt_Headding_Middle


ಶ್ರೀ ಶಾರದೋತ್ಸವ ಸಮಿತಿ ಬೆಳ್ಳಾರೆ ವತಿಯಿಂದ 31 ನೇ ವರ್ಷದ ಶ್ರೀ ಶಾರದೋತ್ಸವವು ಬೆಳ್ಳಾರೆ ಅಚಲಾಪುರ ಕಟ್ಟೆ ಬಳಿ ಅ.19 ರಂದು ವಿವಿಧ ಧಾಮೀಕ,ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ನಡೆಯಿತು.
ಬೆಳಿಗ್ಗೆ ಶಾರದಾ ಪ್ರತಿಷ್ಠೆ, ಪೂಜೆ ನಂತರ ವಿದ್ಯಾರಂಭ (ಅಕ್ಷರಾಭ್ಯಾಸ) ನಡೆಯಿತು.


ನಂತರ ಶಾರದಾ ಸಹಸ್ರನಾಮಾರ್ಚನೆ,ಅಷ್ಟೋತ್ತರನಾಮಾರ್ಚನೆ, ಆಯುಧ ಪೂಜೆ ಇತ್ಯಾದಿ ಸೇವೆಗಳು ನಡೆಯಿತು.ಬೆಳಿಗ್ಗೆ ಶ್ರೀ ವಿಷ್ಣುಮೂರ್ತಿ ಭಜನಾ ಮಂಡಳಿ ಸಡ್ಪ ಕಾಂಚನ ಇವರಿಂದ ಭಜನಾ ಕಾರ್ಯಕ್ರಮ ನಡೆಯಿತು.


ಮಧ್ಯಾಹ್ನ ಮಹಾಪೂಜೆ,ಪ್ರಸಾದ ವಿತರಣೆ,ಅನ್ನಸಂತರ್ಪಣೆ ನಡೆಯಿತು.ಸಂಜೆ ಶ್ರೀ ಶಾರದಾ ಕಲಾಕೇಂದ್ರ ಟ್ರಸ್ಟ್ ಪುತ್ತೂರು ಇವರ ನಿರ್ದೇಶಕರಾದ ವಿದ್ವಾನ್ ಶ್ರೀ ಸುದರ್ಶನ ಎನ್.ಎಲ್.ಭಟ್ ಇವರ ನೃತ್ಯ ತಂಡದಿಂದ ನ್ಯತ್ಯ ರಸಸಂಜೆ ಮತ್ತು ನೃತ್ಯ ರೂಪಕ-ಶ್ರೀನಿವಾಸ ಕಲ್ಯಾಣ ನಡೆಯಿತು. ರಾತ್ರಿ ಮಹಾಪೂಜೆ,ಪ್ರಸಾದ ವಿತರಣೆ ನಡೆದ ಬಳಿಕ ಶ್ರೀ ಶಾರದಾ ದೇವಿಯ ವೈಭವದ ಶೋಭಾಯಾತ್ರೆ ಬೆಳ್ಳಾರೆ ಮುಖ್ಯ ರಸ್ತೆಯಲ್ಲಿ ಸಾಗಿ ಗೌರಿಹೊಳೆಯಲ್ಲಿ ಜಲಸ್ತಂಭನ ಮಾಡಲಾಯಿತು.


ಈ ಸಂದರ್ಭದಲ್ಲಿ ಶ್ರೀ ಶಾರದೋತ್ಸವ ಸಮಿತಿಯ ಅಧ್ಯಕ್ಷ ಸುರೇಶ್ ಕುಮಾರ್ ಶೆಟ್ಟಿ ಪನ್ನೆಗುತ್ತು,ಉಪಾಧ್ಯಕ್ಷರಾದ ವಿಠಲ ರೈ ಪುಡ್ಕಜೆ,ವಾಸುದೇವ ಆಚಾರ್ಯ ಕಿಲಂಗೋಡಿ,ಕೋಶಾಧಿಕಾರಿ ರಾಜೇಶ್ ಗುಂಡಿಗದ್ದೆ, ಕಾರ್ಯದರ್ಶಿ ಪ್ರದೀಪ್ ಕುಮಾರ್ ರೈ ಪನ್ನೆ, ಜತೆಕಾರ್ಯದರ್ಶಿ ಪ್ರಸಾದ್ ಸೇವಿತ ಮತ್ತು ಸಮಿತಿಯ ಸರ್ವಸದಸ್ಯರು, ಹಾಗೂ ನೂರಾರು ಜನ ಭಕ್ತಾಭಿಮಾನಿಗಳು ಶೋಭಾಯಾತ್ರೆಯಲ್ಲಿ ಪಾಲ್ಗೊಂಡಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.