ದರ್ಖಾಸ್ತುವಿನಲ್ಲಿ 13 ನೇ ವರ್ಷದ ಶ್ರೀ ಶಾರದೋತ್ಸವ

Advt_Headding_Middle
Advt_Headding_Middle

ಉತ್ಸವಗಳಿಂದ ಮಾನವೀಯ ಸಂಬಂಧಗಳ ಉಳಿವು-ಪುರುಷೋತ್ತಮ ಕಿರ್ಲಾಯ


ಇಂದಿನ ದಿನದಲ್ಲಿ ಮನುಷ್ಯರಲ್ಲಿ ಸಂಬಂಧಗಳು ಕಡಿಮೆಯಾಗುತ್ತಿದೆ. ಈಗಿನ ಜನರು ಕ್ಷೇಮ ಸಮಚಾರ ಮಾತನಾಡುವುದಿಲ್ಲ. ಹಿಂದೆ ಕ್ಷೇಮಸಮಚಾರ ಮಾತನಾಡುವ ಕ್ರಮ ಇತ್ತು.ಆದರೆ ಇದು ಇಂದು ಕಣ್ಮರೆಯಾಗುತ್ತಿದೆ. ಜನರು ಯಂತ್ರಗಳ ಬಳಕೆ ಜಾಸ್ತಿಮಾಡುವುದರಿಂದ ಮನುಷ್ಯ ಮನುಷ್ಯರ ನಡುವೆ ಸಂಬಂಧಗಳು ಕಡಿಮೆಯಾಗುತ್ತಿದೆ.ಶಾರಾದ ಪೂಜಾ ಮಹೋತ್ಸವ, ಉತ್ಸವಗಳನ್ನು ಮಾಡುವ ಮುಖಾಂತರ ಜನರನ್ನು ಒಂದುಗೂಡಿಸಿ ಮಾನವೀಯ ಸಂಬಂಧಗಳನ್ನು ಉಳಿಸುವ ಕೆಲಸ ಮಾಡಬಹುದು ಎಂದು ಹೇಳಿದರು.

ಅವರು ಶ್ರೀ ಶಾರದಾಂಬಾ ಸೇವಾ ಸಮಿತಿ ದರ್ಖಾಸ್ತು ವತಿಯಿಂದ ದರ್ಖಾಸ್ತು ಶಾಲಾ ಅಕ್ಷಯ ರಂಗಮಂದಿರದಲ್ಲಿ ನಡೆದ ೧೩ ನೇ ವರ್ಷದ ಶ್ರೀ ಶಾರದೋತ್ಸವ ಕಾರ್ಯಕ್ರಮದಲ್ಲಿ ಧಾರ್ಮಿಕ ಉಪನ್ಯಾಸ ನೀಡಿ ಮಾತನಾಡುತ್ತಿದ್ದರು.
ಭಕ್ತಿಯಿಂದ ಭಗವಂತನನ್ನು ಧ್ಯಾನ ಮಾಡಿದಾಗ ಮನಸ್ಸಿನಲ್ಲಿರುವ ಕಲ್ಮಶಗಳು ಹೋಗುತ್ತದೆ. ಎಲ್ಲಾ ಜಾತಿ ಧರ್ಮದವರನ್ನು ಪ್ರೀತಿಸುವ ಮುಖಾಂತರ ಸಂಘರ್ಷವಿಲ್ಲದ ಸಮಾಜವನ್ನು ನಿರ್ಮಿಸಲು ಸಾಧ್ಯ ಎಂದು ಅವರು ಹೇಳಿದರು.
ಪುರಸ್ಕಾರ : ವಿದ್ಯಾರ್ಥಿಗಳಾದ ಅಕ್ಷತಾ ಚೂಂತಾರು ಮತ್ತು ಮೋಕ್ಷಿತ್ ಚೀಮುಳ್ಳುರವರನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಬೆಳ್ಳಾರೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಶಕುಂತಳಾನಾಗರಾಜ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವೇದಿಕೆಯಲ್ಲಿ ಜಾಲ್ಸೂರು ಎಸ್.ಡಿ.ಸಿ.ಸಿ.ಬ್ಯಾಂಕ್ ಮೆನೇಜರ್ ನಟರಾಜನ್ ಡಿ.ಆರ್. ಶಾಲಾ ಎಸ್.ಡಿ.ಎಂ.ಸಿ.ಅಧ್ಯಕ್ಷೆ ಶ್ರೀಮತಿ ಸುಜಾತ ಜನಾರ್ಧನ,ಶಾಲಾ ಮುಖ್ಯ ಶಿಕ್ಷಕ ಶಾಂತಾರಾಮ , ಸಂಘದ ಗೌರವಾಧ್ಯಕ್ಷ ಸಂಜೀವ ಶೆಟ್ಟಿ ಉಪಸ್ಥಿತರಿದ್ದರು.
ಕು.ಮೇಘ ಪ್ರಾರ್ಥಿಸಿ,ಶಾರದೋತ್ಸವ ಸಮಿತಿ ಅಧ್ಯಕ್ಷ ಚಂದ್ರಶೇಖರ ದರ್ಖಾಸ್ತು ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಶ್ರೀಧರ ಚೂಂತಾರು,ಕನ್ನದಾಸನ್ ಕಾರ್ಯಕ್ರಮ ನಿರೂಪಿಸಿ,ನಾಗೇಶ್ ಚೂಂತಾರು ವಂದಿಸಿದರು.
ಶಾರದೋತ್ಸವ ಸಮಿತಿಯ ಕಾರ್ಯದರ್ಶಿ ವೆಂಕಟ್ರಮಣ ಚೂಂತಾರು,ಜತೆಕಾರ್ಯದರ್ಶಿ ಹೊನ್ನಪ್ಪ ದರ್ಖಾಸ್ತು,ಖಜಾಂಜಿ ಚೆನ್ನಪ್ಪ ಗೌಡ ಕಾವಿನಮೂಲೆ,ಉಪಾಧ್ಯಕ್ಷ ಕಂದಸ್ವಾಮಿ,ಮತ್ತು ನಿರ್ದೇಶಕರು ಮತ್ತು ಸಮಿತಿಯ ಸರ್ವಸದಸ್ಯರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.
ಅ.೧೯ ರಂದು ಬೆಳಿಗ್ಗೆ ನಡೆದ ಆಟೋಟ ಸ್ಪರ್ಧೆಗಳನ್ನು ಬೆಳ್ಳಾರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಗಂಗಾಧರ ರೈ ಪುಡ್ಕಜೆ ಉದ್ಘಾಟಿಸಿದರು. ನಂತರ ಪುರಷರಿಗೆ,ಮಹಿಳೆಯರಿಗೆ,ಮಕ್ಕಳಿಗೆ ಆಟೋಟ ಸ್ಪರ್ಧೆಗಳು ನಡೆದವು. ಮಧ್ಯಾಹ್ನ ೨.೩೦ ರಿಂದ ಶ್ರೀ ಶಾರದಾಂಬೆಯ ವೈಭವದ ಶೋಭಾಯಾತ್ರೆ ನಡೆದು ವಿಸರ್ಜನೆ ನಡೆಯಿತು.


ಶೋಭಾಯಾತ್ರೆಯಲ್ಲಿ ನೂರಾರು ಜನ ಭಕ್ತಾದಿಗಳು ಪಾಲ್ಗೊಂಡಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.