Breaking News

ಕುಕ್ಕುಜಡ್ಕ: ಮಹಿಳೆಯರಿಗೆ ಯೋಗ ತರಬೇತಿ

Advt_Headding_Middle
Advt_Headding_Middle

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ಸುಳ್ಯ ಮತ್ತು ಮಹಿಳಾ ಮಂಡಲ ಕುಕ್ಕುಜಡ್ಕ ಇದರ ಆಶ್ರಯದಲ್ಲಿ ಅ.೨೪ರಂದು ಚೊಕ್ಕಾಡಿ ಅಮರ ಸಭಾಭವನದಲ್ಲಿ ಮಹಿಳೆಯರಿಗಾಗಿ ಯೋಗ ತರಬೇತಿ ಕಾರ್ಯಗಾರವು ನಡೆಯಿತು. ಸಮಾರಂಭದ ಉದ್ಘಾಟನೆಯನ್ನು ಚೊಕ್ಕಾಡಿ ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ಸದಾಶಿವ ಗೌಡ ಮೂಕಮಲೆ ನೆರವೇರಿಸಿದರು.
ಗ್ರಾ.ಪಂ. ಅಧ್ಯಕ್ಷೆ ಸೀತಾ ಹೆಚ್, ತಾಲೂಕು ಸ್ಥಾಯಿ ಸಮಿತಿ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸರಸ್ವತಿ ಪಿ, ಗ್ರಾ.ಪಂ. ಸದಸ್ಯ ಶಿವರಾಮ ಕೆರೆಮೂಲೆ, ರಾಘವ ಕುಕ್ಕುಜಡ್ಕ, ವಿನಯ ಸಂಕೇಶ, ಮಹಿಳಾ ಮಂಡಲ ಅಧ್ಯಕ್ಷೆ ಮಧುಮತಿ ರಾಧಾಕೃಷ್ಣ ಬೊಳ್ಳೂರು, ಅಕ್ಷಯ ಸ್ತ್ರೀ ಶಕ್ತಿ ಗೊಂಚಲಿನ ಅಧ್ಯಕ್ಷೆ ಹೇಮಾವತಿ, ಸುದ್ದಿ ಪತ್ರಿಕೆ ವರದಿಗಾರ ಶಿವಪ್ರಸಾದ್ ಆಲೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸುಮಾರು ನೂರಕ್ಕು ಮಿಕ್ಕಿ ಮಹಿಳೆಯರು ಯೋಗ ತರಬೇತಿಯಲ್ಲಿ ಪಾಲ್ಗೊಂಡಿದ್ದರು. ಯೋಗಗುರು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸರಸ್ವತಿ ಪಿಯವರು ೨ ಗಂಟೆಗಳ ಯೋಗ ತರಬೇತಿ ನೀಡಿದರು. ಯೋಗದ ಮಹತ್ವದ ಬಗ್ಗೆ ರಾಧಾಕೃಷ್ಣ ಬೊಳ್ಳೂರುರವರು ತಿಳಿಸಿದರು. ಈ ಸಂದರ್ಭದಲ್ಲಿ ಮಹಿಳಾ ಮಂಡಲದ ಹಾಗೂ ಸ್ತ್ರೀ ಶಕ್ತಿ ಗೊಂಚಲಿನ ಸದಸ್ಯರು ಸಹಕರಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.