ಶ್ರೀ ಸುಬ್ರಹ್ಮಣ್ಯೇಶ್ವರ ಪದವಿ ಕಾಲೇಜಿನಲ್ಲಿ ಹಿಮಾಲಯನ್ ವುಡ್ ಬ್ಯಾಚ್ ಸಮಾವೇಶದ ಪೂರ್ವ ಭಾವಿ ಸಭೆ

Advt_Headding_Middle
Advt_Headding_Middle

ನ. 24 ರಿಂದ 26 ರ ತನಕ ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಕಾಲೇಜಿನಲ್ಲಿ ನಡೆಯಲಿರುವ ಹಿಮಾಲಯನ್ ವುಡ್ ಬ್ಯಾಚ್ ಸಮಾವೇಶದ ಪೂರ್ವ ಭಾವಿ ಸಭೆಯು ಅ. 25ರಂದು ಕೆ.ಎಸ್.ಎಸ್. ಕಾಲೇಜಿನ ಸಭಾ ಭವನದಲ್ಲಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿಯವರ ಅಧ್ಯಕ್ಷತೆಯಲ್ಲಿ ನಡೆಯಿತು.

ಕಾಲೇಜಿನ ಪ್ರಾಂಶುಪಾಲರಾದ ರಂಗಯ್ಯ ಶೆಟ್ಟಿಗಾರ್ ಸಮಿತಿ ಪದಾಧಿಕಾರಿಗಳನ್ನು ಪರಿಚಯಿಸುತ್ತಾ ಕಾರ್ಯಕ್ರಮದ ರೂಪುರೇಷೆಯನ್ನು ವಿವರಿಸಿದರು. ವೇದಿಕೆಯಲ್ಲಿ ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯೆ ಶ್ರೀಮತಿ ವಿಮಲಾ‌ ರಂಗಯ್ಯ, ನಿವೃತ್ತ ಯುವಜನ ಕ್ರೀಢಾಧಿಕಾರಿ ಮಾಧವ ಬಿ.ಕೆ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಮಾಧವ ಡಿ, ಬಾಲಕೃಷ್ಣ ಬಳ್ಳೇರಿ, ರಾಜ್ಯ ಸಂಸ್ಥೆಯ ಆಯುಕ್ತೆ ಶ್ರೀಮತಿ ಶ್ಯಾಮಲ, ಜಿಲ್ಲಾ ಕಮಿಷನರ್ ಎಂ.ಜಿ. ಮೋಹನ್, ಕೋಶಾಧಿಕಾರಿ ರಾಮಶೇಷ ಶೆಟ್ಟಿ, ಜಿಲ್ಲಾ ಕಾರ್ಯದರ್ಶಿ ಎಂ.ಜಿ. ಕಜೆ, ಸ್ಥಳೀಯ ಸಂಸ್ಥೆಯ ಪದಾಧಿಕಾರಿ ಉದಯಕುಮಾರ್, ವಾಸುದೇವ ಬೋಳಾರ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.