Breaking News

ಬಳ್ಪ ಗ್ರಾ.ಪಂ. ವಿಶೇಷ ಗ್ರಾಮಸಭೆ

Advt_Headding_Middle
Advt_Headding_Middle

ಸಬ್ ಕೀ ಯೋಜನಾ ಸಬ್ ಕಾ ವಿಕಾಸ್ ಅಡಿಯಲ್ಲಿ ಜನಯೋಜನೆ ಅಭಿಯಾನ ಆಯೋಜನೆ ಹಾಗೂ 2019-20 ನೇ‌ ಸಾಲಿನ ನಮ್ಮ ಗ್ರಾಮ ನಮ್ಮ ಯೋಜನೆ ಮತ್ತು 2019-20ನೇ ಸಾಲಿನ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮ ಉದ್ಯೋಗ ಖಾತರಿ ಯೋಜನೆಯ ಕ್ರಿಯಾಯೋಜನೆ ಸಿದ್ಧಪಡಿಸುವ ವಿಶೇಷ ಗ್ರಾಮ ಸಭೆ ಅ. 26ರಂದು ಪಂಚಾಯತ್ ಅಧ್ಯಕ್ಷ ಪ್ರಕಾಶ್ ಮುಡ್ನೂರುರವರ ಅಧ್ಯಕ್ಷತೆಯಲ್ಲಿ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು. ಅರಣ್ಯ ಇಲಾಖೆಯ ಪಂಜ ವಲಯರಣ್ಯಾಧಿಕಾರಿ ಆರ್. ಗಿರೀಶ್ ಮಾರ್ಗದರ್ಶಿ ಅಧಿಕಾರಿಯಾಗಿ ಭಾಗವಹಿಸಿದ್ದರು.


ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಶ್ಯಾಮಪ್ರಸಾದ್ ಎಂ.ಆರ್. ನೂತನ ಕ್ರಿಯಾ ಯೋಜನೆಯ ವಿವರಣೆ ನೀಡಿದರು. ಸುಬ್ರಹ್ಮಣ್ಯ ತಾ.ಪಂ. ಸದಸ್ಯ ಅಶೋಕ್ ನೆಕ್ರಾಜೆ, ಸದಸ್ಯರುಗಳಾದ ಧರ್ಮಪಾಲ ಕಣ್ಕಲ್, ಶ್ರೀಮತಿ ಬೇಬಿ ಭಾಸ್ಕರ ಕಟ್ಟ, ಶ್ರೀಮತಿ ಯಮುನಾ ಕಾರ್ಜ, ಶ್ರೀಮತಿ ಸುಮಿತ್ರಾ ಬಿ.ಕೆರೆ, ಕೈಮಲ ಮಗೇರ, ಶ್ರೀಮತಿ ಲಲಿತಾ ಬಿ.ಕೆರೆ, ವಿನೋದ್ ಬೊಳ್ಮಲೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪಂಚಾಯತ್ ಸದಸ್ಯರು ನಾಡಗೀತೆಯನ್ನು ಹಾಡುವ ಮೂಲಕ ಗ್ರಾಮಸಭೆಗೆ ಚಾಲನೆ ನೀಡಲಾಯಿತು. ಗ್ರಾ.ಪಂ. ಸದಸ್ಯ ರಮಾನಂದ ಎಣ್ಣೆಮಜಲು ಸ್ವಾಗತಿಸಿ, ಪಂಚಾಯತ್ ಉಪಾಧ್ಯಕ್ಷೆ ಶ್ರೀಮತಿ ತಾರಾ ಬಿ. ರೈ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.