Breaking News

ನ. 1 ರಿಂದ  7 ರ ತನಕ ಸುವಿಚಾರ ಸಾಹಿತ್ಯ ವೇದಿಕೆ ಮತ್ತು ತಾಲೂಕು ಕ.ಸಾ.ಪ ವತಿಯಿಂದ ಕನ್ನಡ ರಾಜ್ಯೋತ್ಸವ

Advt_Headding_Middle
Advt_Headding_Middle


ಸುವಿಚಾರ ಸಾಹಿತ್ಯ ವೇದಿಕೆ, ಸುಳ್ಯ ಹಾಗೂ ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ನಾಲ್ಕನೇ ವರ್ಷದ ಸಾಹಿತ್ಯ ಸಂಭ್ರಮ ಕಾರ್ಯಕ್ರಮ ನಡೆಯಲಿದೆ. “ನಮ್ಮ ನಡೆ ವಿದ್ಯಾರ್ಥಿಗಳೆಡೆ” ಎಂಬ ಧ್ಯೇಯ ವಾಕ್ಯದೊಂದಿಗೆ, ಸಾಹಿತ್ಯ-ಸಂಸ್ಕೃತಿ-ಸಂಸ್ಕಾರ-ಸಮಾಜಾಭಿವೃದ್ಧಿ ಎಂಬ ಪರಿಕಲ್ಪನೆಯೊಂದಿಗೆ ಈ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಲಿದೆ.
ದಿನಾಂಕ ೦೧-೧೧-೨೦೧೮ ರಿಂದ ಸಾಹಿತ್ಯ ಸಂಭ್ರಮ ೨೦೧೮, ಸಮೂಹ ಸಂಪ್ನಮೂಲ ದೇವಚಳ್ಳ ಇದರ ಸಹಯೋಗದೊಂದಿಗೆ ಸರಕಾರಿ ಪ್ರೌಢಶಾಲೆ, ಎಲೆಮಲೆ, ಇಲ್ಲಿ ಉದ್ಘಾಟನೆಗೊಳ್ಳಲಿದೆ. ಪೂರ್ವಾಹ್ನ ಗಂಟೆ ೯.೩೦ ಕ್ಕೆ ಕನ್ನಡ ಭುವನೇಶ್ವರಿಯ ಮೆರವಣಿಗೆಯು ವಿಷ್ಣು ಭಟ್ ಎಂ. ಇವರಿಂದ ಉದ್ಘಾಟಣೆಗೊಳ್ಳಲಿದೆ. ಧ್ವಜಾರೋಹಣವನ್ನು ತಾಲೂಕು ಪಂಚಾಯತ್‌ನ ಸದಸ್ಯರಾದ ಶ್ರೀಮತಿ ಯಶೋಧಾ ಬಾಳೆಗುಡ್ಡೆ ಇವರು ನೆರವೇರಿಸಲಿರುವರು. ಮೋಹನ್ ಗೌಡ ಎಣ್ಮೂರು ಇವರ ಚಿತ್ರಕಲಾ ಪ್ರದರ್ಶನವನ್ನು ತೀರ್ಥರಾಮ ಎ.ವಿ. ಇವರು ಉದ್ಘಾಟಿಸಲಿದ್ದಾರೆ. ಸಾಹಿತ್ಯ ಸಂಭ್ರಮದ ಉದ್ಘಾಟನೆಯನ್ನು ಜಿಲ್ಲಾ ಪಂಚಾಯತ್ ಸದಸ್ಯರಾದ ಶ್ರೀಮತಿ ಆಶಾ ತಿಮ್ಮಪ್ಪ ನೆರವೇರಿಸಲಿದ್ದಾರೆ. ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತ್ ಅಧ್ಯಕ್ಷರಾದ ದಿವಾಕರ್ ಮುಂಡೋಡಿ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾದ ಶೈಲೇಶ್ ಅಂಬೆಕಲ್ಲು ಹಾಗೂ ಗಣ್ಯವ್ಯಕ್ತಿಗಳ ಉಪಸ್ಥಿತಿಯಲ್ಲಿ ಕಾರ್ಯಕ್ರಮ ಜರುಗಲಿದೆ.
ತದನಂತರ ವಿದ್ಯಾರ್ಥಿಗಳಿಗೆ ಕಥಾ ಸಮಯ ಕಾರ್ಯಕ್ರಮ ನಡೆಯಲಿದ್ದು, ಲಂಕಾ ದಹನದ ಬಗ್ಗೆ ಡಾ| ಪ್ರಭಾಕರ ಶಿಶಿಲ ಹಾಗೂ ಕೃಷ್ಣಲೀಲೆ-ಕಂಸ ವಧೆ ಬಗ್ಗೆ ಶ್ರೀ ವೆಂಕಟರಾಮ ಭಟ್, ಇವರು ಕಾರ್ಯಕ್ರಮ ನಡೆಸಲಿದ್ದಾರೆ. ತದನಂತರ ಕನ್ನಿಕಾ ಡಿ. ಅಂಬೆಕಲ್ ಇವರಿಂದ ಭಾವ-ಗಾನ-ಕುಂಚ ಕಾರ್ಯಕ್ರಮ ನಡೆಯಲಿದೆ. ತದನಂತರ ರಮೇಶ ಮೆಟ್ಟಿನಡ್ಕ, ಶ್ರೀಮತಿ ಗಿರಿಜಾ ಎಂ.ವಿ., ಸುಚಿತ್ರಾ ಹಿರಿಯಡ್ಕ ಹಾಗೂ ವೇಣು ಕುಮಾರ್ ಚಿತ್ತಡ್ಕ ಇವರಿಂದ ಸಂಗೀತ ಸಂಭ್ರಮ ಕಾರ್ಯಕ್ರಮ ನಡೆಯಲಿದೆ. ಮಧ್ಯಾಹ್ನ ನಂತರ ಸಮೂಹ ಸಂಪನ್ಮೂಲ ಕೇಂದ್ರ ದೇವಚಳ್ಳದ ವಿದ್ಯಾರ್ಥಿಗಳಿಂದ ನೃತ್ಯ ಸಾಹಿತ್ಯ ಸಂಭ್ರಮ ನಡೆಯಲಿದೆ.
ಅದೇ ದಿನ ಸಂಜೆ ಗಂಟೆ ೬.೦೦ ಕ್ಕೆ ರೋಟರಿ ಕ್ಲಬ್ ಸುಳ್ಯ ಸಿಟಿ ಇವರ ಸಹಯೋಗದಲ್ಲಿ ಡಾ| ಪ್ರಭಾಕರ ಶಿಶಿಲ ಇವರು ಬಹುಮುಖ ಪ್ರತಿಭೆಯ ಡಾ. ಶಿವರಾಮ ಕಾರಂತ ಎಂಬ ವಿಷಯದ ಬಗ್ಗೆ ಉಪನ್ಯಾಸ ನಡೆಯಲಿದೆ.
ದಿನಾಂಕ ೦೨-೧೧-೨೦೧೮ ರಂದು ಪೂವಾಹ್ನ ಗಂಟೆ ೧೦.೦೦ ಕ್ಕೆ ನೆಹರು ಸ್ಮಾರಕ ಪದವಿ ಪೂರ್ವ ವಿದ್ಯಾಲಯ ಅರಂತೋಡು ಇಲ್ಲಿ ವಿದ್ಯಾರ್ಥಿಗಳ ಪೋಷಕರಿಗಾಗಿ ಗೀತಾ ಸಾಹಿತ್ಯ ಸಂಭ್ರಮ ನಡೆಯಲಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು ಶಾಲಾ ಸಂಚಾಲಕರಾದ ಕೆ.ಆರ್. ಗಂಗಾಧರ ಇವರು ನೆರವೇರಿಸಲಿದ್ದಾರೆ. ಸಂಪನ್ಮೂಲ ವ್ಯಕ್ತಿಯಾಗಿ ವಿಠಲ ನಾಯಕ್ ಬೊಳಂತಿಮೊಗರು ಇವರು ಭಾಗವಹಿಸಲಿದ್ದಾರೆ.
ಆ ದಿನ ಅಪರಾಹ್ನ ಗಂಟೆ ೨.೦೦ ಕ್ಕೆ ರೋಟರಿ ಪದವಿ ಪೂರ್ವ ವಿದ್ಯಾಲಯ, ಮಿತ್ತಡ್ಕ ಇಲ್ಲಿ ವಿದ್ಯಾರ್ಥಿ ಸಾಹಿತ್ಯ ಸಂಭ್ರಮವನ್ನು ರೋಟರಿ ಶಾಲಾ ಸಂಚಾಲಕರಾದ ಜಿತೇಂದ್ರ ಎನ್.ಎ. ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ರೋಟರಿ ಅಧ್ಯಕ್ಷರಾದ ರೊ. ದಯಾನಂದ ಆಳ್ವ ಭಾಗವಹಿಸಲಿದ್ದಾರೆ. ಸಂಪನ್ಮೂಲ ವ್ಯಕ್ತಿಯಾಗಿ ವಿಠಲ ನಾಯಕ್ ಬೊಳಂತಿಮೊಗರು ಇವರು ಕಾರ್ಯನಿರ್ವಹಿಸಲಿದ್ದಾರೆ.
ದಿನಾಂಕ ೦೩-೧೧-೨೦೧೮ ರಂದು ಶನಿವಾರ ಅಪರಾಹ್ನ ಗಂಟೆ ೯.೩೦ ಕ್ಕೆ ಸರಕಾರಿ ಸಂಯುಕ್ತ ಪದವಿ ಪೂರ್ವ ಕಾಲೇಜು, ಬೆಳ್ಳಾರೆ ಇಲ್ಲಿ ವಿದ್ಯಾರ್ಥಿ ಸಾಹಿತ್ಯ ಸಂಭ್ರಮ ವಿಶಿಷ್ಠ ರೀತಿಯಲ್ಲಿ ನಡೆಯಲಿದೆ. ಪೂರ್ವಾಹ್ನ ಗಂಟೆ ೯.೩೦ ಕ್ಕೆ ಡಾ| ಹರಪ್ರಸಾದ್ ತುದಿಯಡ್ಕ ಇವರು ಧ್ವಜಾರೋಹಣ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಸಾಹಿತ್ಯ ಸಂಭ್ರಮದ ಅಧ್ಯಕ್ಷತೆಯನ್ನು ವಿದ್ಯಾರ್ಥಿನಿ ಚರಿಷ್ಮಾ ಕೆ.ವೈ. ಸರಕಾರಿ ಪದವಿ ಪೂರ್ವ ವಿದ್ಯಾಲಯ, ಸುಳ್ಯ ಇವರು ವಹಿಸಲಿದ್ದಾರೆ. ಕಾರ್ಯಕ್ರಮದ ಉದ್ಘಾಟನೆಯನ್ನು ಬೆಳ್ಳಾರೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಶಕುಂತಲಾ ನಾಗರಾಜ್ ಇವರು ವಹಿಸಲಿದ್ದಾರೆ. ಗಣ್ಯರ ಉಪಸ್ಥಿತಿಯಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದಲ್ಲಿ ಶ್ರೀ ಬಾಳಪ್ಪ ಮಣಿಮಜಲು, ಉಪಾಧ್ಯಕ್ಷರು, ಕಾಲೇಜು ಅಭಿವೃದ್ಧಿ ಸಮಿತಿ, ಪ್ರೌಢಶಾಲಾ ಅಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷರಾದ ಶಾಂತರಾಮ ಕಣಿಲೆ ಗುಂಡಿ, ರೋಟರಿ ಕ್ಲಬ್ ಅಧ್ಯಕ್ಷರಾದ ಎ.ಕೆ. ಮಣಿಯಾಣಿ, ಜೇಸಿಐ ಅಧ್ಯಕ್ಷರಾದ ಜಯರಾಮ ಉಮಿಕ್ಕಳ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಶಿವರಾಮ ಅಮಳ ಇವರು ಉಪಸ್ಥಿತರಿರುತ್ತಾರೆ.
ಯು. ಸುಬ್ರಾಯ ಗೌಡ, ಪ್ರಾಚಾರ್ಯರು ಹಾಗೂ ಶ್ರೀಮತಿ ಉಮಾ ಕುಮಾರಿ, ಉಪಪ್ರಾಚಾರ್ಯರು ಕಾರ್ಯಕ್ರಮಕ್ಕೆ ಶುಭ ಹಾರೈಸಲಿದ್ದಾರೆ. ತದನಂತರ ಸ.ಪ.ಪೂ ವಿದ್ಯಾಲಯ ಬೆಳ್ಳಾರೆ ಇದರ ಪ್ರೌಢಶಾಲಾ ವಿದ್ಯಾರ್ಥಿಗಳಿಂದ ಭಾವಗಾನ ಸಂಭ್ರಮ ಕಾರ್ಯಕ್ರಮ ನಡೆಯಲಿದೆ.
ತದನಂತರ ವಿದ್ಯಾರ್ಥಿಗಳಿಂದಲೇ ಸಾಹಿತ್ಯ ವಿಚಾರ ಗೋಷ್ಠಿ ನಡೆಯಲಿದೆ. ವಿದ್ಯಾರ್ಥಿಗಳಲ್ಲಿ ಸಾಹಿತ್ಯಾಸಕ್ತಿ ಎಂಬ ವಿಷಯದ ಬಗ್ಗೆ ಸಾಯಿ ಶ್ರುತಿ, ಸ.ಪ.ಪೂ ಕಾಲೇಜು, ಬೆಳ್ಳಾರೆ ಇವರು ವಿಚಾರ ಮಂಡನೆ ಮಾಡಲಿದ್ದಾರೆ. ಧನ್ಯಶ್ರೀ ಕೆ., ಶಾರದಾ ಪ.ಪೂ. ವಿದ್ಯಾಲಯ, ಗಾನಶ್ರೀ ಕೆ., ನೆಹರು ಸ್ಮಾರಕ ಪ.ಪೂ. ವಿದ್ಯಾಲಯ, ಸುಳ್ಯ ಇವರು ಪ್ರತಿಕ್ರಿಯೆ ನೀಡಲಿದ್ದಾರೆ. ಪ್ರಕಾಶ್ ಮೂಡಿತ್ತಾಯ ಇವರು ಸಮಾಪನ ಭಾಷಣ ಮಾಡಲಿದ್ದಾರೆ. ತದನಂತರ ಕುಮಾರಿ ವಿಭಾಶ್ರೀ, ಬೆಳ್ಳಾರೆ, ಕುಮಾರಿ ರತ್ನ ಸಿಂಚನ ಬೆಳ್ಳಾರೆ ಇವರು ಗಮಕ ವಾಚನ ಕಾರ್ಯಕ್ರಮ ನಡೆಸಲಿದ್ದಾರೆ. ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ ಮುಕ್ತ ರಸಪ್ರಶ್ನೆ ಕಾರ್ಯಕ್ರಮವನ್ನು ಯು. ಸುಬ್ರಾಯ ಗೌಡ ಹಾಗೂ ಲಿಂಗಪ್ಪ ಬೆಳ್ಳಾರೆ ಇವರು ನಿರ್ವಹಿಸಲಿದ್ದಾರೆ. ತದನಂತರ ರೋಟರಿ ಆಂಗ್ಲ ಮಾಧ್ಯಮ ಪ್ರೌಢಶಾಲೆ ಸುಳ್ಯ ಇವರ ವಿದ್ಯಾರ್ಥಿಗಳಿಂದ ನೃತ್ಯ ಸಂಭ್ರಮ ಕಾರ್ಯಕ್ರಮ ನಡೆಯಲಿದೆ.
ಮಧ್ಯಾಹ್ನ ಗಂಟೆ ೧೨.೦೦ ಕ್ಕೆ ವಿದ್ಯಾರ್ಥಿಗಳ ಕವಿಗೋಷ್ಠಿ ಕಾರ್ಯಕ್ರಮ ನಡೆಯಲಿದ್ದು, ಇದರಲ್ಲಿ ಅಲೋಕ ಎ., ಸಂತ ಜೋಸೆಫ್ ಪ್ರೌಢಶಾಲೆ, ಸುಳ್ಯ; ಪ್ರೀತಿ ಯು., ಸ.ಪ.ಪೂರ್ವ ವಿದ್ಯಾಲಯ, ಸುಳ್ಯ; ಸೃಜನಾ ಕೆ.ಜಿ., ವಿದ್ಯಾಬೋಧಿನಿ ಪ್ರೌಢಶಾಲೆ, ಬಾಳಿಲ; ಮಹಮ್ಮದ್ ರಿಲ್ವಾನ್, ಸರಕಾರಿ ಪ್ರೌಢಶಾಲೆ, ಎಣ್ಮೂರು; ಅಂಜಲಿ ದೇರಾಜೆ, ಸರಕಾರಿ ಪ.ಪೂ.ವಿದ್ಯಾಲಯ, ಬೆಳ್ಳಾರೆ; ಮತ್ತು ಅಂಕಿತಾ ಪಿ.ಎಸ್., ಸರಕಾರಿ ಪ್ರೌಢಶಾಲೆ, ದುಗಲಡ್ಕ ಇವರು ಕವನ ವಾಚನ ಮಾಡಲಿದ್ದಾರೆ. ಶ್ರೀ ರಾಧೇಶ್ ತೋಳ್ಪಾಡಿ, ಉಪನ್ಯಾಸಕರು ಇವರು ಹಿರಿಯ ಕವಿಗಳ ಬೆನ್ನುಡಿ ಕಾರ್ಯಕ್ರಮ ನಡೆಸುತ್ತಾರೆ.
ತದನಂತರ ನಿರಂತರವಾಗಿ ಸುಬ್ರಹ್ಮಣ್ಯೇಶ್ವರ ಪದವಿಪೂರ್ವ ವಿದ್ಯಾಲಯದ ವಿದ್ಯಾರ್ಥಿಗಳಿಂದ ಗಾನ ಸಂಭ್ರಮ, ವಿದ್ಯಾಬೋಧಿನಿ ಪ್ರೌಢಶಾಲೆ ಬಾಳಿಲ ವಿದ್ಯಾರ್ಥಿಗಳಿಂದ ಜಾನಪದ ಸಂಭ್ರಮ, ಪ್ರಣವ ಮೂಡಿತ್ತಾಯ, ಗೌತಮ್ ಪೇರಾಲ್ ಮತ್ತು ಧೀರಜ್ ಬೆಳ್ಳಾರೆ ಇವರಿಂದ ಹಾಸ್ಯ ಸಂಭ್ರಮ , ರಂಗ ಮಯೂರಿ ಕಲಾ ಶಾಲೆ ಸುಳ್ಯ ಇಲ್ಲಿಯ ವಿದ್ಯಾರ್ಥಿಗಳಿಂದ ನಟನಾ ಸಂಭ್ರಮ ಹಾಗೂ ತಾಲೂಕಿನ ವಿವಿಧ ವಿದ್ಯಾಸಂಸ್ಥೆಗಳ ವಿದ್ಯಾರ್ಥಿಗಳಿಂದ ಯಕ್ಷಗಾನ ನಾಟ್ಯ ಕುಂಚ ಕಾರ್ಯಕ್ರಮ ನಡೆಯಲಿದೆ. ಸಮಾರೋಪ ಭಾಷಣವನ್ನು ಶ್ರೀ ಪ್ರದೀಪ್ ಕುಮಾರ್ ರೈ, ಪನ್ನೆ ಇವರು ನಿರ್ವಹಿಸಲಿದ್ದು, ಚರಿಷ್ಮಾ ವೈ.ಕೆ. ಸರ್ವಾಧ್ಯಕ್ಷರ ಅನಿಸಿಕೆಯನ್ನು ನೀಡಲಿದ್ದಾರೆ.
ದಿನಾಂಕ ೦೪-೧೧-೨೦೧೮ ರಂದು ಅಪರಾಹ್ನ ಗಂಟೆ ೨.೦೦ ಕ್ಕೆ ಪ.ಪಂಗಡ ಮಹಿಳಾ ವಿದ್ಯಾರ್ಥಿ ನಿಲಯ, ಸುಳ್ಯ ಇಲ್ಲಿ ಮಹಿಳಾ ಸಾಹಿತ್ಯ ಸಂಭ್ರಮ ನಡೆಯಲಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು ಅಮರ ಜ್ಯೋತಿ ಪ.ಪೂ. ವಿದ್ಯಾಲಯ ಇಲ್ಲಿಯ ಪ್ರಾಂಶುಪಾಲರಾದ ಶ್ರೀಮತಿ ಯಶೋದಾ ರಾಮಚಂದ್ರ ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶ್ರೀಮತಿ ಲತಾ ಮಧುಸೂಧನ್, ವಿಸ್ತರಣಾಧಿಕಾರಿ ಹಿಮಕರ, ನಿಲಯ ಮೇಲ್ವಿಚಾರಕರಾದ ಶ್ರೀಮತಿ ಶೇಷಮ್ಮ ಮತ್ತು ಬಾಲಕೃಷ್ಣ ಇವರು ಭಾಗವಹಿಸಲಿದ್ದಾರೆ. ಸಂಪನ್ಮೂಲ ವ್ಯಕ್ತಿ ಶಿವಣ್ಣ ಎಚ್. ಇವರು ಜಾನಪದದಲ್ಲಿ ಸ್ತ್ರೀ ಸಂವೇದನೆ ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಲಿದ್ದಾರೆ.
ದಿನಾಂಕ ೦೫-೧೧-೨೦೧೮ ರಂದು ಸರಕಾರಿ ಪದವಿ ಪೂರ್ವ ವಿದ್ಯಾಲಯ, ಐವರ್ನಾಡು ಇಲ್ಲಿ ಜಾನಪದ ಸಾಹಿತ್ಯ ಸಂಭ್ರಮ ಕಾರ್ಯಕ್ರಮ ನಡೆಯಲಿದ್ದು, ಕಾರ್ಯಕ್ರಮವನ್ನು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ರಾಜೀವಿ ಪರ್ಲಿಕಜೆ ನಡೆಸಲಿದ್ದಾರೆ. ಸಂಪನ್ಮೂಲ ವ್ಯಕ್ತಿಯಾಗಿ ಶಿವಣ್ಣ ಎಚ್, ಇವರು ಭಾಗವಹಿಸಲಿದ್ದಾರೆ.
ದಿನಾಂಕ ೦೬-೧೧-೨೦೧೮ ರಂದು ಕನ್ನಡ ಭವನ ಅಂಬೆಟಡ್ಕ, ಸುಳ್ಯ ಇಲ್ಲಿ ಪೂರ್ವಾಹ್ನ ಗಂಟೆ ೧೦.೦೦ ಕ್ಕೆ ಶಿಕ್ಷಕರ ಕವಿಗೋಷ್ಠಿ ಸಂಭ್ರಮ ನಡೆಯಲಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು ಜಾನಪದ ಸಂಶೋಧಕರಾದ ಡಾ. ಸುಂದರ್ ಕೇನಾಜೆ ನೆರವೇರಿಸಲಿದ್ದಾರೆ. ತದನಂತರ ಪ್ರಮಿಳಾರಾಜ್, ಶಿಕ್ಷಕಿ ಇವರ ಚೊಚ್ಚಲ ಕವನ ಸಂಕಲನ “ಸಂಗೀತಾ ನನ್ನೆದೆಯ ಭಾವಗಳ ಯಾನ” ವನ್ನು ಯು.ಸು.ಗೌ, ಗುತ್ತಿಗಾರು ಇವರು ಬಿಡುಗಡೆಗೊಳಿಸಲಿದ್ದಾರೆ. ತದನಂತರ ಉದಯೋನ್ಮುಖ ೨೧ ಮಂದಿ ಶಿಕ್ಷಕರು ಕವನ ವಾಚನ ನಡೆಸಲಿದ್ದಾರೆ. ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಕತ್ಯಾಳ ನಾಗಪ್ಪ ಗೌಡ (ಕಿರಣ) ಇವರು ವಹಿಸಲಿದ್ದಾರೆ.
ದಿನಾಂಕ ೦೭-೧೧-೨೦೧೮ ರಂದು ಕನ್ನಡ ಭವನ ಅಂಬೆಟಡ್ಕ, ಸುಳ್ಯ ಇಲ್ಲಿ ಸಾಹಿತ್ಯ ಸಂಭ್ರಮ ಕಾರ್ಯಕ್ರಮದ ಸಮಾರೋಪ ಸಮಾರಂಭ ಹಾಗೂ ಸನ್ಮಾನ ನಡೆಯಲಿದೆ. ಕಾರ್ಯಕ್ರಮದಲ್ಲಿ ಸುಗಮ ಸಂಗೀತ ಕ್ಷೇತ್ರದ ಕೆ.ಆರ್. ಗೋಪಾಲಕೃಷ್ಣ, ನೃತ್ಯ ಸಂಗೀತ ಕ್ಷೇತ್ರದ ವಿದ್ಯಾಶ್ರೀ ರಾಧಾಕೃಷ್ಣ ಹಾಗೂ ಜಾನಪದ ಕ್ಷೇತ್ರದ ರಮೇಶ್ ಮೆಟ್ಟಿನಡ್ಕ ಇವರನ್ನು ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಇದರ ಅಧ್ಯಕ್ಷರಾದ ಡಾ. ಕೆ.ವಿ. ಚಿದಾನಂದ ಇವರು ಸನ್ಮಾನಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ನಿತ್ಯಾನಂದ ಮುಂಡೋಡಿ, ಅಧ್ಯಕ್ಷರು, ವ್ಯವಸ್ಥಾಪನಾ ಸಮಿತಿ, ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ, ಇವರು ಭಾಗವಹಿಸಲಿದ್ದಾರೆ. ಅಧ್ಯಕ್ಷತೆಯನ್ನು ಡಾ| ಹರಪ್ರಸಾದ್ ತುದಿಯಡ್ಕ ಇವರು ವಹಿಸಲಿದ್ದಾರೆ.
ಈ ಕುರಿತು ಸುವಿಚಾರ ಸಾಹಿತ್ಯ ವೇದಿಕೆ, ಸುಳ್ಯ ಹಾಗೂ ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ನವರು ಅ.೨೭ರಂದು ಸುಳ್ಯದಲ್ಲಿ ಪತ್ರಿಕಾಗೋಷ್ಠಿ ಕರೆದು ಮಾಹಿತಿ ನೀಡಿದರು. ಪತ್ರಿಕಾಗೋಷ್ಠಿಯಲ್ಲಿ ಡಾ. ಹರಪ್ರಸಾದ್ ತುದಿಯಡ್ಕ, ಚಂದ್ರಶೇಖರ ಪೇರಾಲು, ತೇಜಸ್ವಿ ಕಡಪಳ, ಶ್ರೀಮತಿ ಗಿರಿಜ , ಕೇಶವ ಸಿ.ಎ, ಯು.ಸುಬ್ರಾಯ ಗೌಡ,ದಯಾನಂದ ಆಳ್ವ ಇದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.