Breaking News

ಕೇರಳದಲ್ಲಿ ಬೈಕ್ ಕಳವುಗೈದು ನಿಂತಿಕಲ್ಲಿನಲ್ಲಿ ಮಾರಾಟಕ್ಕೆ ಯತ್ನಿಸಿದಾತನ ಬಂಧನ

Advt_Headding_Middle
Advt_Headding_Middle

ಕೇರಳದಲ್ಲಿ ಬೈಕ್ ಕಳವುಗೈದು ನಿಂತಿಕಲ್ಲಿನಲ್ಲಿ ಬೈಕ್ ಮಾರಾಟಕ್ಕೆ ಯತ್ನಿಸಿದಾತನನ್ನು ಬೆಳ್ಳಾರೆ ಪೊಲೀಸರು ಬೈಕ್ ಸಮೇತ ವಶಪಡಿಸಿಕೊಂಡ ಘಟನೆ ಅ. 25 ರಂದು ನಡೆದಿದೆ.

ಕೇರಳದ ಕಣ್ಣೂರು ತಳಿಪರಂಬ ಎಂಬಲ್ಲಿಂದ ಚರಣ್ ಎಂಬಾತ ಬೈಕ್ ಕಳವುಗೈದು ನಿಂತಿಕಲ್ಲಿನಲ್ಲಿ ಮಾರಾಟಕ್ಕೆ ಯತ್ನಿಸಿದಾಗ ಸಾರ್ವಜನಿಕರಿಗೆ ಸಂಶಯ ಬಂದು ಬೆಳ್ಳಾರೆ ಪೊಲೀಸರಿಗೆ ವಿಷಯ ತಿಳಿಸಿದರೆನ್ನಲಾಗಿದೆ.

ಪೊಲೀಸರು ಸ್ಥಳಕ್ಕಾಗಮಿಸಿ ಚರಣ್‌ನನ್ನು ವಿಚಾರಿಸಿದಾಗ ಅವನ ಬಳಿ ಬೈಕಿನ ಯಾವುದೇ ದಾಖಲೆಗಳು ಇಲ್ಲದಿರುವುದು ತಿಳಿದು, ಆತನನ್ನು ಬೆಳ್ಳಾರೆ ಠಾಣೆಗೆ ಕರೆತಂದು ವಿಚಾರಿಸಲಾಯಿತು. ಈತ ಕೇರಳದಲ್ಲಿ ಬೈಕ್ ಕಳವು ಮಾಡಿದ ವಿಷಯವನ್ನು ಒಪ್ಪಿಕೊಂಡನೆನ್ನಲಾಗಿದೆ.

ನಂತರ ಪೊಲೀಸರು ಕಣ್ಣೂರಿನ ಪೊಲೀಸ್ ಸ್ಟೇಷನ್‌ಗೆ ಫೋನ್ ಮಾಡಿ ವಿಷಯ ತಿಳಿಸಿದಾಗ ಅಲ್ಲಿ ಬೈಕ್ ಕಳವಾಗಿರುವ ಬಗ್ಗೆ ದೂರು ದಾಖಲಾಗಿತ್ತು ಎನ್ನಲಾಗಿದೆ. ನಂತರ ಕಣ್ಣೂರಿನ ಪೊಲೀಸರು ಬೆಳ್ಳಾರೆಗೆ ಬಂದು ಆರೋಪಿಯನ್ನು ಮತ್ತು ಬೈಕ್‌ನ್ನು ವಶಕ್ಕೆ ಪಡೆದುಕೊಂಡರೆಂದು ತಿಳಿದುಬಂದಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.