ಪ್ರಾಮಾಣಿಕತೆ ಮೆರೆದ ಬಸ್ ನಿರ್ವಾಹಕ

Advt_Headding_Middle
Advt_Headding_Middle

ಬಸ್ಸಿನಲ್ಲಿ ಬಿದ್ದು ಸಿಕ್ಕಿದ ಹಣ ಮತ್ತಿತರ ದಾಖಲೆಗಳಿದ್ದ ಪರ್ಸನ್ನು ಪ್ರಾಮಾಣಿಕತೆಯಿಂದ ಕಳೆದುಕೊಂಡ ವ್ಯಕ್ತಗೆ ಹಿಂತಿರುಗಿಸಿದ ಘಟನೆ ಅ. 19 ರಂದು ವರದಿಯಾಗಿದೆ.

ಸುಳ್ಯದ ಶ್ರೀ ಚೆನ್ನಕೇಶವ ವಾಣಿಜ್ಯ ಸಂಕೀರ್ಣದಲದಲ್ಲಿರುವ ರಂಗೋಲಿ ಗಾರ್ಮೆಂಟ್ಸ್ ಮತ್ತು ಡಿಸೈನರ್ಸ್ ನ ಮಾಲಕಿ ಶ್ರೀಮತಿ ಪ್ರಶಾಂತಿ ಬಡ್ಡಡ್ಕರವರ ಪುತ್ರಿ ಮನಸ್ವಿನಿ ಬೆಂಗಳೂರಿನಲ್ಲಿ‌ ಉಪನ್ಯಾಸಕಿಯಾಗಿದ್ದು, ಅ. 19 ರಂದು ರಾತ್ರಿ ಸುಳ್ಯದಿಂದ ಬೆಂಗಳೂರಿಗೆ ಕೆ.ಎಸ್.ಆರ್.ಟಿ.ಸಿ. ಬಸ್ಸಿನಲ್ಲಿ ಪ್ರಯಾಣಿಸಿದ್ದರು.

ಬೆಳಿಗ್ಗೆ ಬೆಂಗಳೂರಿಗೆ ತಲುಪಿ ಬಸ್ಸಿನಿಂದ ಇಳಿದು ಹೋಗುವಾಗ ತಮ್ಮಲ್ಲಿದ್ದ ಪರ್ಸನ್ನು ಬಸ್ಸಿನಲ್ಲೆ ಬಿಟ್ಟು ಹೋಗಿದ್ದರು. ಸ್ವಲ್ಪ ಸಮಯ ಕಳೆದ ಬಳಿಕ ನಿರ್ವಾಹಕ ಚೇತನ್ ಎಂಬವರು ಟಿಕೆಟ್ ನಲ್ಲಿದ್ದ ಮೊಬೈಲ್ ಸಂಖ್ಯೆಯ ಆಧಾರದಲ್ಲಿ ಮನಸ್ವಿನಿಯವರಿಗೆ ಕರೆಮಾಡಿ ಪರ್ಸ್ ಕಳೆದುಕೊಂಡ ಬಗ್ಗೆ ಮಾಹಿತಿ ನೀಡಿದರು. ಮನಸ್ವಿನಿಯವರು ಸಂಜೆ ಚಾಲಕ ಜಗದೀಶ್ ಮತ್ತು ನಿರ್ವಾಹಕರನ್ನು ಸಂಪರ್ಕಿಸಿ ಕಳೆದುಕೊಂಡಿದ್ದ ಪರ್ಸನ್ನು ಮರಳಿ ಪಡೆದುಕೊಂಡು ಪ್ರಾಮಾಣಿಕತೆ ಮೆರೆದ ಚಾಲಕ ನಿರ್ವಾಹಕರಿಗೆ ಕೃತಜ್ಞತೆ ಸಲ್ಲಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.