ಚೀಫ್ ಲೈಫ್ ಇನ್ಸೂರೆನ್ಸ್ ಅಡ್ವೈಸರ್ ಸ್ವಾತಿ ಮಲ್ಲಾರರವರ ಎಲ್.ಐ.ಸಿ ಸೇವಾಕೇಂದ್ರ ಸ್ಥಳಾಂತರಗೊಂಡು ಶುಭಾರಂಭ

Advt_Headding_Middle
Advt_Headding_Middle

ಎಲ್.ಐ.ಸಿಯಲ್ಲಿ ಮುಂಚೂಣಿಯಲ್ಲಿದ್ದಾರೆ:
ಎಲ್.ಐ.ಸಿ ಕ್ಷೇತ್ರದಲ್ಲಿ ಸ್ವಾತಿ ಮಲ್ಲಾರ ಅವರು ಮುಂಚೂಣಿಯಲ್ಲಿ ಗುರುತಿಸಿಕೊಂಡಿದ್ದು ಉತ್ತಮ ಸಲಹೆ ಮತ್ತು ಸೇವೆ ನೀಡುತ್ತಿದ್ದಾರೆ, ಮುಂದಿನ ದಿನಗಳಲ್ಲಿ ಅವರು ಇನ್ನಷ್ಟು ಸಾಧನೆ ಮಾಡುವಂತಾಗಲಿ – ಡಾ.ಗಣೇಶ್ ಪ್ರಸಾದ್ ಮುದ್ರಾಜೆ

ಸ್ವಾತಿ ಮಲ್ಲಾರ ಅವರು ಕಳೆದ ವರ್ಷ ಎಲ್‌ಐಸಿ ಪಾಲಿಸಿಯಾದ ಜೀವನ್ ಶಿರೋಮಣಿಯ ಮೂಲಕ ಅಖಿಲ ಭಾರತ ಮಟ್ಟದಲ್ಲಿ ಗುರುತಿಸಲ್ಪಟ್ಟಿದ್ದರು. ಎಲ್.ಐ.ಸಿ ವ್ಯವಹಾರದಲ್ಲಿ ಉತ್ತಮ ಸಾಧನೆಯನ್ನು ಮಾಡುತ್ತಿರುವ ಇವರು ಮುಂದಿನ ದಿನಗಳಲ್ಲೂ ಇನ್ಸೂರೆನ್ಸ್ ವ್ಯವಹಾರದಲ್ಲಿ ದಾಖಲೆ ಮಾಡುವಂತಾಗಲಿ ಎಂದು ಗಣ್ಯರು ಶುಭ ಹಾರೈಸಿದರು.

 

 ಎಲ್.ಐ.ಸಿ ಮುಖ್ಯ ಬ್ರಾಂಚ್ ಸಮೀಪದ ಎಂ.ಜಿ ಕಾಂಪ್ಲೆಕ್ಸ್‌ನಲ್ಲಿ ಕಾರ್ಯಾಚರಿಸುತ್ತಿದ್ದ ಚೀಫ್‌ಲೈಫ್ ಇನ್ಸೂರೆನ್ಸ್ ಅಡ್ವೈಸರ್ ಸ್ವಾತಿ ಮಲ್ಲಾರ ಅವರ ಎಲ್.ಐ.ಸಿ ಸೇವಾ ಕೇಂದ್ರವು ಸ್ಥಳಾಂತರಗೊಂಡು ಚೇತನಾ ಆಸ್ಪತ್ರೆ ಬಳಿಯ ರುಕ್ಮ ಕಾಂಪ್ಲೆಕ್ಸ್‌ನಲ್ಲಿ ಅ.೧೭ರಂದು ಶುಭಾರಂಭಗೊಂಡಿತು.

ಇಂಡಿಯನ್ ಮೆಡಿಕಲ್ ಎಸೋಸಿಯೇಶನ್ ಪುತ್ತೂರು ಘಟಕದ ಅಧ್ಯಕ್ಷ ಡಾ.ಗಣೇಶ್ ಪ್ರಸಾದ್ ಮುದ್ರಾಜೆಯವರು ಸೇವಾ ಕೇಂದ್ರವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ಎಲ್.ಐ.ಸಿ ಕ್ಷೇತ್ರದಲ್ಲಿ ಸ್ವಾತಿ ಮಲ್ಲಾರ ಅವರು ಮುಂಚೂಣಿಯಲ್ಲಿ ಗುರುತಿಸಿಕೊಂಡಿದ್ದು ಉತ್ತಮ ಸಲಹೆ ಮತ್ತು ಸೇವೆ ನೀಡುತ್ತಿದ್ದಾರೆ, ಮುಂದಿನ ದಿನಗಳಲ್ಲಿ ಅವರು ಇನ್ನಷ್ಟು ಸಾಧನೆ ಮಾಡುವಂತಾಗಲಿ, ಸ್ವಾತಿ ಮಲ್ಲಾರ ಮತ್ತು ಪ್ರಮೋದ್ ಮಲ್ಲಾರ ದಂಪತಿಗಳು ಈ ಸೇವಾ ಕೇಂದ್ರದ ಮೂಲಕ ಸರ್ವತೋಮುಖ ಅಭಿವೃದ್ಧಿ ಸಾಧಿಸಲಿ ಎಂದು ಅವರು ಹಾರೈಸಿದರು.

ಎಲ್.ಐ.ಸಿ ಮುಖ್ಯ ಪ್ರಬಂಧಕ ಚಂದ್ರಶೇಖರ್ ಮಾತನಾಡಿ ಸೇವಾ ಕೇಂದ್ರದಿಂದ ಗ್ರಾಹಕರಿಗೆ ಉತ್ತಮ ಸೇವೆ ದೊರಕಲಿ ಎಂದು ಹೇಳಿ ಶುಭ ಹಾರೈಸಿದರು.
ಉದ್ಯಮಿ ದೇರ್ಕಜೆ ವೆಂಕಟ್ರಮಣ ಭಟ್, ಸಿಎಲ್‌ಐಎ ಮೆನೇಜರ್ ದಿನೇಶ್ ಪ್ರಭು, ಮುಖ್ಯ ಜೀವ ವಿಮಾ ಸಲಹೆಗಾರರಾಗಿರುವ ಎಂ.ಎಸ್ ಭಟ್ ಮೊದಲಾದವರು ಮಾತನಾಡಿ ಸ್ಥಳಾಂತರಗೊಂಡು ಇಲ್ಲಿ ಶುಭಾರಂಭಗೊಂಡಿರುವ ಎಲ್‌ಐಸಿ ಪ್ರೀಮಿಯಂ ಪಾವತಿ ಕೇಂದ್ರ ಯಶಸ್ವಿಯಾಗಿ ಮುನ್ನಡೆಯಲಿ, ಸ್ವಾತಿ ಮಲ್ಲಾರರವರು ಎಲ್‌ಐಸಿ ಕ್ಷೇತ್ರದಲ್ಲಿ ನಿರೀಕ್ಷೆಗೂ ಮೀರಿದ ಸಾಧನೆ ಮಾಡುವಂತಾಗಲಿ ಎಂದು ಹೇಳಿ ಶುಭ ಹಾರೈಸಿದರು.

ಸ್ವಾತಿ ಮಲ್ಲಾರರವರ ತಾಯಿ ಚಿನ್ನಮ್ಮರವರು ಇದೇ ಸಂದರ್ಭದಲ್ಲಿ ದೀಪ ಬೆಳಗಿಸಿ ಶುಭಾಶೀರ್ವಾದ ನೀಡಿದರು.
ರೋಟರಿ ಕ್ಲಬ್ ಪುತ್ತೂರು ಸಿಟಿ ಅಧ್ಯಕ್ಷ ಮನೋಹರ್ ಕೆ, ಎಲ್‌ಐಸಿ ಅಸಿಸ್ಟಂಟ್ ಮೆನೇಜರ್ ಯಜ್ಞೇಶ್, ರುಕ್ಮ ಕಟ್ಟಡದ ಮಾಲಕ ಶೈಲೇಶ್ ನಾಯಕ್, ಉರಿಮಜಲು ಮೋಹನ್ ಭಟ್, ಡಾ.ಶಶಿಧರ್ ಕಜೆ, ಸುಧಾಕರ ಶೆಟ್ಟಿ, ನಗರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ತಿಮ್ಮಪ್ಪ ನಾಯ್ಕ್, ಡಾ.ಶ್ರೀಕಾಂತ್ ರಾವ್, ಡಾ.ಹರಿಕೃಷ್ಣ ಪಾಣಾಜೆ, ರೊಟೇರಿಯನ್ ಲಾರೆನ್ಸ್ ಗೋನ್ಸಾಲಿಸ್, ನಟೇಶ್ ಉಡುಪ, ಜಯಕುಮಾರ್ ರೈ, ರೊಟೇರಿಯನ್ ಭವಿನ್, ವಿಶ್ವನಾಥ ನಡುತೋಟ, ರಾಮಚಂದ್ರ, ನೊಯೆಲ್, ಓರಿಯೆಂಟಲ್ ಇನ್ಸೂರೆನ್ಸ್‌ನ ಆನಂದ ಗೌಡ, ಉಲ್ಲಾಸ್ ಮಲ್ಲಾರ ಹಾಗೂ ಸ್ವಾತಿ ಮಲ್ಲಾರ ಪ್ರತಿನಿಧಿ ಬಳಗದವರು, ಎಲ್‌ಐಸಿ ಅಭಿವೃದ್ಧಿ ಅಧಿಕಾರಿಗಳು, ನೌಕರ ವೃಂದದವರು, ಬಂಧು ಮಿತ್ರರು, ಮುಖ್ಯ ಜೀವ ವಿಮಾ ಸಲಹೆಗಾರರು ಆಗಮಿಸಿ ಶುಭ ಹಾರೈಸಿದರು.
ಸ್ವಾತಿ ಮಲ್ಲಾರ ಸ್ವಾಗತಿಸಿದರು. ಸ್ವಾತಿ ಮಲ್ಲಾರ ಅವರ ಪತಿ ಪ್ರಮೋದ್ ಮಲ್ಲಾರ ಅವರು ಅತಿಥಿಗಳನ್ನು ಸತ್ಕರಿಸಿ ವಂದಿಸಿದರು. ಸಿಬ್ಬಂದಿಗಳಾದ ಕಾವ್ಯಶ್ರೀ ಹಾಗೂ ಶ್ಯಾಮಲತಾ ಸಹಕರಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.