ನಿಂತಿಕಲ್ಲು ಕೆ.ಎಸ್.ಗೌಡ ವಿದ್ಯಾಸಂಸ್ಥೆ ದಶಮಾನೋತ್ಸವ ಸಮಾಲೋಚನಾ ಸಭೆ

Advt_Headding_Middle
Advt_Headding_Middle

ನಿಂತಿಕಲ್ಲು ವರ್ಷ ನಗರದಲ್ಲಿರುವ ಕೆ.ಎಸ್.ಗೌಡ ವಿದ್ಯಾ ಸಂಸ್ಥೆಯು ೧೦ನೇ ವರ್ಷದ ಅಂಗವಾಗಿ ನವೆಂಬರ್ ತಿಂಗಳಿನಲ್ಲಿ ದಶಮಾನೋತ್ಸವ ಕಾರ್ಯಕ್ರಮ ಆಚರಿಸುವ ಸಲುವಾಗಿ ಸಮೂಹ ವಿದ್ಯಾ ಸಂಸ್ಥೆ ಅಧ್ಯಕ್ಷರಾದ ಅಶೋಕ್ ಕುಮಾರ್ ಕೆ.ಎಸ್.ರವರ ಅಧ್ಯಕ್ಷತೆಯಲ್ಲಿ ಅ.೨೯ರಂದು ಸಂಸ್ಥೆಯ ಸಭಾಂಗಣದಲ್ಲಿ ಸಮಾಲೋಚನಾ ಸಭೆ ನಡೆಯಿತು. ಸಭೆಯಲ್ಲಿ ಆಡಳಿತ ಮಂಡಳಿ ನಿರ್ದೇಶಕ ಕುಮಾರಸ್ವಾಮಿ ಕೆ.ಎಸ್., ಪಿ.ಯು. ಕಾಲೇಜು ಪ್ರಾಂಶುಪಾಲ ಸದಾನಂದ ರೈ ಕೂವೆಂಜ, ಸಮಿತಿ ಅಧ್ಯಕ್ಷ ಗಿರೀಶ್ ಹೊಸೂರು ಕೊಡಗು, ಐ.ಟಿ.ಐ. ಪ್ರಾಂಶುಪಾಲ ಗುರುಪ್ರಸಾದ್ ತೋಟ, ಸಮಿತಿ ಅಧ್ಯಕ್ಷ ಸುದರ್ಶನ ಗೌಡ, ಪ್ರಾಥಮಿಕ ಹಾಗೂ ಪ್ರೌಢಶಾಲಾ ಮುಖ್ಯ ಶಿಕ್ಷಕ ಉಮೇಶ್ ಗೌಡ ಎಚ್, ಸಮಿತಿ ಅಧ್ಯಕ್ಷ ಆನಂದ ಬೆಳ್ಳಾರೆ ಹಾಗೂ ಮಾಜಿ ಅಧ್ಯಕ್ಷರು, ಮಾಜಿ ಉಪಾಧ್ಯಕ್ಷರು, ಹಾಲಿ ಉಫಾಧ್ಯಕ್ಷರುಗಳು, ಸಮಿತಿ ಸದಸ್ಯರು ಉಪಸ್ಥಿತರಿದ್ದು ಸಲಹೆ ಸೂಚನೆಗಳನ್ನು ನೀಡಿದರು. ಕಾರ್‍ಯಕ್ರಮಧಿಕಾರಿ ಪ್ರಸನ್ನ ವೈ.ಟಿ. ಸ್ವಾಗತಿಸಿ ಪ್ರಸ್ತಾವನೆ ಗೈದರು, ಗುರುಪ್ರಸಾದ್ ತೋಟ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.