ಇತ್ತೀಚಿನ ಕೆಲವು ದಿನಗಳಿಂದ ನಡೆಯುತ್ತಿರುವ ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಹಾಗೂ ನರಸಿಂಹ ಮಠದ ಪೂಜೆ ಹಾಗೂ ಇನ್ನಿತರ ವಿಷಯಗಳ ಬಗೆಗಿನ ಗೊಂದಲ, ಅಪಪ್ರಚಾರ ಹಾಗೂ ಅನಾವಶ್ಯಕವಾದ ಆಹಿತಕರ ಘಟನೆಗಳು ತೀರಾ ಖಂಡನೀಯ ಎಂದು ಸುಳ್ಯ ಆಮ್ ಆದ್ಮಿ ಪಾರ್ಟಿ ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದೆ.
ಅ.೩೧ರಂದು ಪ್ರೆಸ್ಕ್ಲಬ್ನಲ್ಲಿ ಪತ್ರಿಕಾಗೋಷ್ಟಿ ನಡೆಸಿದ ಸುಳ್ಯ ತಾಲೂಕು ಎ.ಎ.ಪಿ. ಸಂಚಾಲಕ ಅಶೋಕ್ ಎಡಮಲೆ ಹಾಗೂ ಸದಸ್ಯ ಪ್ರದೀಪ್ ಕುಮಾರ್ ಕೆ.ಎಲ್, “ದೇವಸ್ಥಾನ ಹಾಗೂ ಮಠದ ಸಾನಿಧ್ಯದ ಬಗ್ಗೆ ಭಾವುಕ ಭಕ್ತ ಜನರಿಗೆ ನಂಬಿಕೆ ಇರುವುದರಿಂದ ದೇವಸ್ಥಾನ ಮತ್ತು ಮಠದ ಪೀಠದ ಘನತೆಯನ್ನು ಎತ್ತಿ ಹಿಡಿಯಲು ಸರ್ಕಾರ ಮುಂದಾಗಿ ಕಳೆದ ೨೦ ವರ್ಷಗಳಿಂದ ಮಠ ಹಾಗೂ ದೇವಸ್ಥಾನದ ವಿಚಾರವಾಗಿ ಕಾನೂನು ಹೋರಾಟ, ಆರ್ಥಿಕ ವ್ಯವಹಾರ, ಸಾಮಾಜಿಕ, ಧಾರ್ಮಿಕ ಚಟುವಟಿಕೆಗಳ ಬಗ್ಗೆ ಕೂಲಕುಂಶವಾಗಿ ಪರಿಶೀಲಿಸಿ ನ್ಯಾಯಾಂಗ ತನಿಖೆ ಮಾಡಬೇಕೆಂದು” ಹೇಳಿದರು.
ಸುಳ್ಯ ನಗರಕ್ಕೆ ಶುದ್ಧ ಕುಡಿಯುವ ನೀರು ಸರಬರಾಜುಗೆ ಅಗ್ರಹ
ನಗರ ಪಂಚಾಯತಿನಿಂದ ಸರಬರಾಜು ಆಗುತ್ತಿರುವ ಕುಡಿಯುವ ನೀರಿನ ಕಳಪೆ ಗುಣಮಟ್ಟದ ಬಗ್ಗೆ ತೀರಾ ವಿಷಾದ ವ್ಯಕ್ತಪಡಿಸಿದ ನಾಯಕರು, ನೀರಿನ ಸರಬರಾಜು ಕೇಂದ್ರ ಕೂಲಂಕುಶವಾಗಿ ಪರಿಶೀಲಿಸಿದ ಪ್ರಕಾರ ತಿಳಿದು ಬಂದ ವಿಷಯ ಅಲ್ಲಿ ಯಾವುದೇ ತರಹದ ಸ್ಪೋನ್ಜ್ ವ್ಯವಸ್ಥೆ ಬಳಸಲಾಗುತ್ತಿಲ್ಲ.
ಶುದ್ಧೀಕರಣ ಘಟಕ ಕೆಟ್ಟು ಹೋಗಿ ಹಲವಾರು ವರ್ಷ ಆಗಿರುತ್ತದೆ. ಈ ಕಾರಣದಿಂದಲೇ ನಗರದಲ್ಲಿ ಸರಬರಾಜು ಆಗುತ್ತಿರುವ ಕುಡಿಯುವ ನೀರು ತೀರಾ ಕಲುಷಿತವಾಗಿರುತ್ತದೆ.
ಸುಳ್ಯ ನಗರದ ಶುದ್ಧೀಕರಣ ಘಟಕದ ಸುವ್ಯವಸ್ಥೆಗೆ ಕೂಡಲೇ ಕ್ರಮ ಕೈಗೊಂಡು ಒಂದು ತಿಂಗಳ ಒಳಗೆ ಶುದ್ಧೀಕರಣಗೊಂಡ ನೀರು ಎಲ್ಲ ಫಲಾನುಭವಿಗಳಿಗೆ ಸರಬರಾಜು ಮಾಡಬೇಕಾಗಿ ಕೇಳಿಕೊಂಡರು. ಗ್ರಾಮೀಣ ಸಾರಿಗೆ ವ್ಯವಸ್ಥೆ ಸುಗಮವಾಗಿಸಲು ಕ್ರಮ ಕೈಗೊಳ್ಳಬೇಕೆಂದು ಈ ಸಂದರ್ಭ ಎ.ಎ.ಪಿ. ಮುಖಂಡರು ಅಗ್ರಹಿಸಿದರು. ಪತ್ರಿಕಾಗೋಷ್ಟಿಯಲ್ಲಿ ಎ.ಎ.ಪಿ. ಸಹಸಂಚಾಲಕ ರಶೀದ್ ಜಟ್ಟಿಪಳ್ಳ, ಜತೆ ಕಾರ್ಯದರ್ಶಿ ದೀಕ್ಷಿತ್ ಕುಮಾರ್ ಜಯನಗರ ಉಪಸ್ಥಿತರಿದ್ದರು.